ಶಿವಮೊಗ್ಗ | ನವೆಂಬರ್ 30ರಂದು ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ : ಸ್ವರ್ಣವಲ್ಲಿ ಮಠದ ಗಂಗಾಧರೇಶ್ವರ ಸ್ವಾಮೀಜಿ

ಶಿವಮೊಗ್ಗ

ಶಿವಮೊಗ್ಗ, ನವೆಂಬರ್ 30 ಅಲ್ಲಮಪ್ರಭು ಮೈದಾನದಲ್ಲಿ ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ ನಡೆಯಲಿದೆ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಶ್ವರ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಳೇಕರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ, ಹೆಚ್‍ಡಿ ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಗವದ್ಗೀತೆಯ 11ನೇ ಅಧ್ಯಯನವನ್ನು ಮುಖ್ಯವಾಗಿ ನಿಗದಿಪಡಿಸಿ ಎಲ್ಲೆಡೆ 200 ಕ್ಕೂ ಹೆಚ್ಚು ಶಿಕ್ಷಣಾರ್ಥಿಗಳು ತರಬೇತಿ ಪಡೆದು ಶ್ಲೋಕ ಕೇಂದ್ರಗಳಿಗೆ ತೆರಳಿ ಶ್ಲೋಕಗಳನ್ನು ಹೇಳಿಕೊಟ್ಟಿದ್ದಾರೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳ 1500ಕ್ಕೂ ಹೆಚ್ಚು ಶ್ಲೋಕ ಕೇಂದ್ರಗಳಲ್ಲಿ ಇದರ ಪಠಣ ನಡೆದಿದೆ 300ಕ್ಕೂ ಹೆಚ್ಚು ಉಪನ್ಯಾಸಗಳು ಸುಮಾರು 60,000 ಜನರನ್ನು ತಲುಪಿದೆ ಡಿಸೆಂಬರ್ 1 ರಂದು ಗೀತ ಜಯಂತಿ ಎಂದು ಸಮಗ್ರ ಗೀತ ಪಠಣ ಎಲ್ಲಾ ಜಿಲ್ಲೆಗಳಲ್ಲೂ ನಡೆಯಲಿದೆ ಎಂದು ತಿಳಿಸಿದರು.

Author