ಶಿವಮೊಗ್ಗ | ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ; ಖೇದ ವ್ಯಕ್ತಪಡಿಸಿದ ಕೆ. ಬಿ. ಪ್ರಸನ್ನ ಕುಮಾರ್

ಶಿವಮೊಗ್ಗ

ಶಿವಮೊಗ್ಗದಲ್ಲಿ ಇಂದು ನಗರವೇ ಬೆಚ್ಚು ಬೀಳುವ ಸುದ್ದಿ ಹೊರಬಂದಿದೆ ನಮ್ಮನೆಲ್ಲ ರಕ್ಷಣೆ ಮಾಡಬೇಕಾದ ಟ್ರಾಫಿಕ್ ಪೊಲೀಸ್ ಮೊಹಮ್ಮದ್ ಜಕ್ರಿಯ ರವರು ಠಾಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಖೇದಕರ ವಿಚಾರವಾಗಿದೆ.

ಈ ಕೂಡಲೇ ಜಿಲ್ಲಾ ರಕ್ಷಣಾಧಿಕಾರಿಗಳು ಇವರ ಆತ್ಮಹತ್ಯೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಂಡು ಶಿಕ್ಷೆಯನ್ನು ಕೊಡಿಸುವುದರ ಜೊತೆಗೆ ಒತ್ತಡದಲ್ಲಿರುವ ಕೆಳ ಹಂತದ ಪೊಲೀಸ್ ಸಿಬ್ಬಂದಿಗಳಿಗೆ ಕೌನ್ಸಿಲಿಂಗ್ ಕೊಡಿಸುವುದರ ಮೂಲಕ ಆತ್ಮ ಸ್ಥೈರ್ಯ ಹೆಚ್ಚಿಸಬೇಕೆಂದು ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳಲ್ಲಿ ಮಾಧ್ಯಮ ಮೂಲಕ ಒತ್ತಾಯಿಸುತ್ತೇನೆ ಎಂದು ಮಾಜಿ ಶಾಸಕರು ಶಿವಮೊಗ್ಗ ನಗರ ಮತ್ತು ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಕೆ. ಬಿ. ಪ್ರಸನ್ನಕುಮಾರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.



Author