ಶಿವಮೊಗ್ಗ ನಗರದ ಟಿ. ಸೀನಪ್ಪ (ಗೋಪಿ) ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಜಿಲ್ಲಾಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ದಿವಗಂತ ಶ್ರೀ ದೇವರಾಜ್ ಅರಸುರವರ ಆಡಳಿತ ಅವಧಿ 2,792 ದಿನಗಳಾಗಿರುತ್ತದೆ.
ಅದಕ್ಕೆ ಸರಿ ಸಮಾನಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಇಂದಿಗೆ 2,793 ದಿನ ಆಗಿರುತ್ತದೆ.
ಆದ್ದರಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ 2,793 ದಿನದ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ಸಿಹಿ ಹಂಚುವುದರ ಮೂಲಕ ನಡೆಸಿರುತ್ತಾರೆ.



