ಶಿವಮೊಗ್ಗ,ನಗರದ ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಮತ್ತು ಹೋಟೆಲ್ ಮಥುರ ಪ್ಯಾರಡೈಸ್ ರವರ ಸಹಯೋಗದಲ್ಲಿ ಸಂಸ್ಕೃತೋತ್ಸವ ಪ್ರಯುಕ್ತ ಶಿವಮೊಗ್ಗದ ಮಹಿಳೆಯರಿಗೆ ಜಡೆ ಹೆಣೆಯುವ ಸ್ಪರ್ಧೆಯನ್ನು ಆ. ೨೨ರ ಶನಿವಾರ ಸಂಜೆ ೫ ಕ್ಕೆ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರ ಪ್ಯಾರಡೈಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಡೆ ಹೆಣೆಯುವವರು ಮತ್ತು ಜಡೆ ಹೆಣಿಸಿಕೊಳ್ಳುವವರು ಇಬ್ಬರಿಗೂ ಜಡೆ ಇರಬೇಕು. ಕಾಲಾವಧಿ ೪೫ ನಿಮಿಷಗಳು.
ಸ್ಪರ್ಧೆಯಲ್ಲಿ ಭಾಗವಹಿಸುವವರು ೨೦.೦೮.೨೦೨೬ ರ ಒಳಗಾಗಿ ತಮ್ಮ ಹೆಸರನ್ನು ೯೪೪೮೭೯೦೧೨೭ ಮೊಬೈಲ್ ನಂಬರಿಗೆ ಕಳಿಸಿಕೊಡಬೇಕು.
ಹೆಚ್ಚಿನ ಮಾಹಿತಿಗಾಗಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್ ಇವರ ದೂರವಾಣಿ ಸಂಖ್ಯೆ ೯೪೪೮೭೯೦೧೨೭ ಇವರನ್ನು ಸಂಪರ್ಕಿಸಬೇಕೆಂದು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ ಕೋರಿದ್ದಾರೆ.





