SHIVAMOGGA BREAKING ನಾನು ಸಚಿವ ಸ್ಥಾನದ ಪ್ರಭಲ ಆಕಾಂಕ್ಷಿ : ಶಾಸಕ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ

ಶಿವಮೊಗ್ಗ, ಗ್ಯಾರೆಂಟಿ ಯೋಜನೆಗಳ ಹಣ ತಲುಪುತ್ತಿಲ್ಲ ಎಂಬ ಮಾಜಿ ಸಚಿವ ಬಿಸಿ ಪಾಟೀಲ್ ಹೇಳಿಕೆ ವಿಚಾರ ಪಂಚ ಗ್ಯಾರಂಟಿಗಳು ಬಡವರ ಮನೆ ತಲುಪಿದೆ ಒಂದೆರಡು ತಿಂಗಳು ವಿಳಂಬವಾಗುವುದು ಬಿಟ್ಟರೆ ಯಾವುದೇ ಕೊರತೆ ಆಗಿಲ್ಲ ಎಂದು ಬೇಳೂರು ತಿಳಿಸಿದರು.

ಮುಖ್ಯಮಂತ್ರಿ ಮಾಡುವ ವಿಚಾರದಲ್ಲಿ ಗೊಂದಲಗಳ ಸೃಷ್ಟಿಯಾಗಿ ಗ್ಯಾರಂಟಿ ನಿಂತು ಹೋಗಿದೆ ಎಂಬುದು ಸರಿಯಲ್ಲ, ಅಲ್ಪ ಸ್ವಲ್ಪ ಪಾವತಿಯಾಗುವುದು ಉಳಿದಿದೆ, ನಮ್ಮ ಕ್ಷೇತ್ರದಲ್ಲಿ ದಾಖಲೆ ಕೊಡುತ್ತೇವೆ ಬಿ ಸಿ ಪಾಟೀಲ್ ಆರೋಪ ಎಲ್ಲವೂ ಸುಳ್ಳು ಎಂದರು.

ರಾಜ್ಯ ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾಗಿರುವುದು ನಿಜ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ರಾಜ್ಯದಲ್ಲಿ ಗೊಂದಲ ಸೃಷ್ಟಿಯಾಗಿದೆ ಪಕ್ಷಕ್ಕೂ ಹಾನಿಯಾಗಿದೆ, ಆದಷ್ಟು ಬೇಗ ಈ ಗೊಂದಲ ಕೇಂದ್ರದ ನಾಯಕರು ಪರಿಹರಿಸಬೇಕು ಮಂತ್ರಿ ಸ್ಥಾನ ಬಹಳಷ್ಟು ಖಾಲಿ ಇದೆ.

ಹೊಸಬರಿಗೆ ಅವಕಾಶ ಕೊಡಬೇಕು ಆದಷ್ಟು ಬೇಗ ಆಗಬೇಕು ಎಂದು ಮಾತು ಮುಂದುವರೆಸಿದ ಶಾಸಕ ನಾನೇನು ಸನ್ಯಾಸಿನಾ? ಮೂರ್ನಾಲ್ಕು ಬಾರಿ ಎಂಎಲ್ಎ ಆಗಿದ್ದೇನೆ, ನನ್ನ ಹಕ್ಕುಗಳನ್ನು ರಾಜ್ಯ ಮತ್ತು ಕೇಂದ್ರದ ನಾಯಕರಲ್ಲಿ ಕೇಳಿದ್ದೇನೆ, ಮಂತ್ರಿ ಸ್ಥಾನ ಕೊಡುವ ನಿರ್ಧಾರ ಕೇಂದ್ರ ನಾಯಕರು ಮಾಡುತ್ತಾರೆ.ನಾನು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾನೆ.

ಎರಡುವರೆ ವರ್ಷ ಅವಧಿಯ ಹಂಚಿಕೆ ಬಗ್ಗೆ ನನಗೇನು ಗೊತ್ತಿಲ್ಲ ಈ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ನನ್ನನ್ನು ಯಾರು ಸಹಿ ಹಾಕಿ ಎಂದು ಕೇಳಿಲ್ಲ ನಾನು ಯಾವುದು ಸಹಿ ಮಾಡಿಲ್ಲ ಎಂದರು.

ಬಿಹಾರದಲ್ಲಿ ಮತ್ತೊಮ್ಮೆ NDA ಗೆ ಅವಕಾಶ ಕೊಟ್ಟಿದೆ ಅದೇ ರೀತಿ ನಮ್ಮಲ್ಲೂ ರಾಜ್ಯದ ಜನತೆ ಕಾಂಗ್ರೆಸ್ಗೆ ಅವಕಾಶ ಕೊಡಲಿದ್ದಾರೆ, ಕೇಂದ್ರದ ನಾಯಕರು ರಾಜ್ಯದಲ್ಲಿನ ಗೊಂದಲಗಳಿಗೆ ಕಡಿವಾಣ ಹಾಕಬೇಕು ನಾನು ಸಿಎಂ, ಡಿಸಿಎಂ ಬಣದಲ್ಲಿ ಗುರುತಿಸಿಕೊಂಡಿಲ್ಲ ಕಾಂಗ್ರೆಸ್ ಪಕ್ಷದ ನಿಜವಾದ ಬಣದಲ್ಲಿ ಇದ್ದೇನೆ ಅಂದರು.

ಧರ್ಮಸ್ಥಳ ಪ್ರಕರಣದಲ್ಲಿ ಯಾರನ್ನು ಬಿಡಬೇಡಿ ಗಲ್ಲಿಗೆ ಹಾಕಿ ಎಂದು ಹೇಳಿದ್ದೇನೆ ಈ ಹೇಳಿಕೆ ಇವತ್ತು ಬದ್ಧನಾಗಿದ್ದೇನೆ ಎಸ್ಐಟಿ ತನಿಖೆಗೆ ವಹಿಸಿದ ಮೇಲೆ ಸಮಾನತೆಯಲ್ಲಿ ಕೆಲಸ ನಡೆಯುತ್ತಿದೆ ಚಿನ್ನಯ್ಯನಿಗೆ ಜಾಮೀನು ಸಿಕ್ಕ ವಿಚಾರದಲ್ಲಿ ಕೋರ್ಟ್ ವಿಚಾರ ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲವೆಂದರು.

ಡಿಸಿಎಂ ಡಿ ಕೆ ಶಿವಕುಮಾರ್ ಐದು ಜನರ ಲೆಕ್ಕಾಚಾರ ಎಂಬ ಹೇಳಿಕೆ ನನಗೆ ಗೊತ್ತಿಲ್ಲ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು ಎಂದು ಕೇಳುವುದರಲ್ಲಿ ತಪ್ಪೇನಿಲ್ಲ ಇದನ್ನು ನಿರ್ಧಾರ ಮಾಡೋದು ಹೈಕಮಾಂಡ್ ನಾನು ಮೂರು ಬಾರಿ ಎಮ್ಎಲ್ಎ ಆಗಿದ್ದೇನೆ ಮಂತ್ರಿ ಮಾಡಿ ಎಂದು ಕೇಳಿದರಲಿ ತಪ್ಪೇನಿದೆ ಕೊಡುವುದು ಬಿಡುವುದು ಕೇಂದ್ರದ ನಾಯಕರ ಕೈಯಲ್ಲಿ ಇದೆ ಎಂದರು.

Author