ಶಿವಮೊಗ್ಗ | ಕೆ. ಆರ್. ಪುರಂ ಸರ್ಕಾರಿ ಶಾಲೆಯನ್ನು ದೇಶಕ್ಕೆ ಪರಿಚಯ ಮಾಡಿಸಿದ, ರಾಮಾಚಾರಿ ಮಾಸ್ಟರ್ ನಿವೃತ್ತಿ ; ಹೃದಯಸ್ಪರ್ಶಿ ಬೀಳ್ಕೊಡುಗೆ

ಶಿವಮೊಗ್ಗ

ಶಿವಮೊಗ್ಗ, ಹಿತವನ್ನುಂಟು ಮಾಡುವವನೇ ಬಂಧು ಕಾಪಾಡುವವನೇ ತಂದೆ, ಒಂದಕ್ಷರ ಕಲಿಸಿದಾತನೇ ಗುರು,ವ್ಯಕ್ತಿಯೊಬ್ಬ ಕರ್ತವ್ಯಕ್ಕೆ ಹಾಜರಾಗಿ ತನಗೆ 60 ವರ್ಷಗಳ ನಂತರ ನಿವೃತ್ತಿ ಹೊಂದುವುದು ಸಹಜ ಪ್ರಕ್ರಿಯೆ ಅದರಂತೆ ಇಂದು ಸಹ ಶಿಕ್ಷಕರಾದ ರಾಮಾಚಾರಿ.ಬಿ, ಕೆ ಆರ್ ಪುರಂ ಸರ್ಕಾರಿ ಶಾಲೆ ಕರ್ತವ್ಯವನ್ನು 60 ವರ್ಷದವರೆಗೂ ಸಂಪನ್ನಗೊಳಿಸಿ ನಿನ್ನೆ ದಿವಸ ನಿವೃತ್ತಿಯಾಗಿದ್ದಾರೆ.

ಇವರು ನಡೆದು ಬಂದ ಹಾದಿ ಹಾಗೂ ಇವರಶಿಕ್ಷಣ ಹಾಗೂ ಕೌಟುಂಬಿಕ ಹಿನ್ನೆಲೆ ವಿವರ ಇಂತಿದೆ, ಇವರು ದಿನಾಂಕ 20 -12 -1965 ರಂದು ನ್ಯಾಮತಿ ಹೋಬಳಿ ಹೊನ್ನಾಳಿ ತಾಲೂಕಿನಲ್ಲಿ ವೀರಾಚಾರ್ಯ ಶಾರದಮ್ಮನವರ ಪುತ್ರನಾಗಿ ಜನಿಸಿದರು ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನ್ಯಾಮತಿಯಲ್ಲಿ, ಕಾಲೇಜಿನ ಶಿಕ್ಷಣವನ್ನು ಹರಪನಹಳ್ಳಿಯ ಮಾಡಿರುತ್ತಾರೆ ತದನಂತರ ಬಿಎ ಪದವಿಯನ್ನು ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನಲ್ಲಿ ಮುಗಿಸಿ ನಂತರ ಬಿ.ಎಡ್ ಪದವಿಯನ್ನು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾನಿಲಯದಲ್ಲಿ, ಎಂ.ಎ ಇತಿಹಾಸ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ.

1977ರಲ್ಲಿ ಕಾರಣಗಿರಿಯಲ್ಲಿ ಶಿಕ್ಷಕಿ ಗಾಯಿತ್ರಿ ಎಂಬುವರೊಂದಿಗೆವಿವಾಹವಾದರು.ಮೈತ್ರೇಯಿ.ಗಾರ್ಗಿ ಎಂಬ ಇಬ್ಬರು ಹೆಣ್ಣು ಮಕ್ಕಳು ಇವರ ಕುಟುಂಬ ರಾಮಾಚಾರಿ ಶಿಕ್ಷಕರ ಏಳಿಗೆಗೆ ಪ್ರಮುಖ ಪಾತ್ರ ವಹಿಸಿದರು.

ಇವರ ಕರ್ತವ್ಯ ನಿರ್ವಹಣೆ ವಿವರ ಇಂತಿದೆ 20.12.1993 ರಲ್ಲಿ ಶಿವಮೊಗ್ಗದ ಹೊಸನಗರ ತಾಲೂಕಿನ ಹೆಬ್ಬಯಲು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆರಂಭಿಸಿ,ಬ್ರಹ್ಮಶ್ವರ ಹನಿಯ ಮಾರುತಿಪುರ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದರು.

oplus_0

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಹಾಗೂ ಕಾರ್ಯದರ್ಶಿಯಾಗಿ CRP ಯಾಗಿ ಕರ್ತವ್ಯ.2018 ರಿಂದ ಇಂದಿನವರೆಗೆ KPS KR ಪುರಂ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕರಗಿ ಪ್ರಾಮಾಣಿಕತೆಯಿಂದ ಪಾರದರ್ಶಕತೆ ದಕ್ಷತೆ ಮತ್ತು ಶಿಕ್ಷಕರು ಸ್ಥಳೀಯ ಶಿಕ್ಷಕ ಸ್ಥಳೀಯರು ಜನಪ್ರತಿನಿಧಿಯೊಂದಿಗೆ ಹಾಗೂ ಶಾಲಾ ಹಿತೈಷಿಗಳು ಅಧಿಕಾರಿಗಳು ಪೋಷಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ ತಾಲೂಕು ಮಟ್ಟದ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿಗೆ ಪಾತ್ರರಾದ ಅಜಾತಶತ್ರುವಾಗಿದ್ದರೆ.

ಶ್ರೀಯುತ ರಾಮಚಾರಿಯವರು ಕೆ. ಆರ್. ಪುರಂ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದಾರೆ. 2018 ರಲ್ಲಿ ಕೇವಲ 14 ಮಕ್ಕಳಿದ್ದ ಶಾಲೆ. ಇಂದು 300 ಮಕ್ಕಳನ್ನೊಳಗೊಂಡು ಹೈಟಿಕ್ ಶಾಲೆಯಾಗಿ ಬದಲಾಗಿರುವುದರಲ್ಲಿ ಶಿಕ್ಷಕ ರಾಮಾಚಾರಿ ಯವರ ಪರಿಶ್ರಮ ಇಲ್ಲಿನ ಜನಪ್ರತಿನಿಧಿಗಳು, ಎಸ್ ಡಿ ಎಂಸಿ ಯವರು ಹಾಗೂ ಅಧಿಕಾರ ವರ್ಗದವರೆಲ್ಲರಿಗೂ ತಿಳಿದ ವಿಷಯವೇ ಆಗಿದೆ.

oplus_0

ದೇಶದಲ್ಲಿ ಗಮನ ಸೆಳೆಯುವಂತೆ ಕೆ. ಆರ್. ಪುರಂ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರುವುದರ ಜೊತೆಗೆ ಶಿವಮೊಗ್ಗ ಜಿಲ್ಲೆಯಲ್ಲೆ ಪಿ. ಎಂ. ಶ್ರೀ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾನ್ಯತೆ ಪಡೆದ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದಕ್ಕೆಲ್ಲ ಸಾಕ್ಷಿಯೆಂಬಂತೆ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ನಿವೃತ್ತ ಉಪನಿರ್ದೇಶಕರಾದ ಶ್ರೀ ಗಣಪತಿ,ಶ್ರೀ,ಪಾಲಾಕ್ಷಪ್ಪ, ಅಣ್ಣಪ್ಪ ಹಾಗೂ ಸುನೀತ ಅಣ್ಣಪ್ಪ ಮಾಜಿ ಮಹಾಪೌರರು ಹಾಗೂ ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ರಮೇಶ್ ನಾಯ್ಕ್.ಬಿ ಬಿ ಸ್ಟ್ರೀಟ್ ಹಿ.ಪ್ರಾ.ಶಾಲೆ ಶಿಕ್ಷಕಿ ಶ್ರೀಮತಿ ಬೇಬಿ, ದೊಡ್ಡಪೇಟೆ ಹಿ.ಪ್ರಾ. ಶಾಲೆ ಶಿಕ್ಷಕಿ ಶಶಿರೇಖಾ ಭಟ್ ಶಿಕ್ಷಕ ರಾಮಾಚಾರಿ ಯವರ ಸಮೂಹ ಶಿಷ್ಯ ವೃಂದSDMC ಯ ರಾಘವೇಂದ್ರ, ಶ್ರೀ.ಮಸ್ತಾನ್,ವಿದ್ಯಾರ್ಥಿಗಳು, ಪೋಷಕರು, ಅಡುಗೆ ಸಿಬ್ಬಂದಿ ಇವರ ನಿವೃತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉಡುಗೊರೆಗಳನ್ನು ನೀಡಿ, ಅವರ ಕಾರ್ಯವನ್ನು ಶ್ಲಾಘಿಸಿದರು.

oplus_0

ಈ ಶಾಲೆಯ ಪುಟ್ಟ ಪುಟ್ಟ ವಿದ್ಯಾರ್ಥಿಗಳು ತಾವೇ ತಯಾರಿಸಿದ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡುವುದರ ಮೂಲಕ, ಯಾವುದೇ ಖಾಸಗಿ ಶಾಲೆಗೂ ಸರ್ಕಾರಿ ಶಾಲೆಗಳ ಗುಣಮಟ್ಟ ಕಡಿಮೆಯಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ವಿದ್ಯಾರ್ಥಿನಿಯೊಬ್ಬರು ಸ್ವತಃ ತಮ್ಮ ಅಚ್ಚುಮೆಚ್ಚಿನ ಶಿಕ್ಷಕರಾದ ರಾಮಾಚಾರಿ ಅವರ ಫೋಟೋ ಪೆನ್ಸಿಲ್ ಅಲ್ಲಿ ಬಿಡಿಸುವ ಮೂಲಕ, ಹಾಗೂ ಮತ್ತೊಬ್ಬ ವಿದ್ಯಾರ್ಥಿ ರಾಮಾಚಾರಿ ಅಂದರೆ ಅರ್ಥ ಏನು ಎಂದು ತಿಳಿಸುವ ಮೂಲಕ ಹಾಗೂ ಫೋಟೋ ಫ್ರೇಮ್ ನಲ್ಲಿ ರಾಮಾಚಾರಿ ಮಾಸ್ಟರ್ ಅವರ ಶಾಲೆಯಲ್ಲಿ ಚಟುವಟಿಕೆಗಳ ಚಿತ್ರಗಳನ್ನು ಮೂಡಿಸುವ ಮೂಲಕ, ಹಾಗೂ ಇನ್ನಿತರೇ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ

ರಾಮಾಚಾರಿ ಅವರ ನಿವೃತ್ತ ಜೀವನ ಸುಖಕರವಾಗಲಿ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.

ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವ ಇಂದಿನ ಪರಿಸ್ಥಿತಿಯಲ್ಲಿ ನಿಜಕ್ಕೂ ರಾಮಾಚಾರಿ ಮಾಸ್ಟರ್ ಅವರ ಅವಿರತ ಶ್ರಮ ಸರ್ಕಾರಿ ಶಾಲೆಯಲ್ಲಿ ಇಷ್ಟೆಲ್ಲಾ ಕಾರ್ಯರೂಪಕ್ಕೆ ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ರಾಮಾಚಾರಿ ಮಾಸ್ಟರ್ ಅವರಿಗೆ ನಮ್ಮ ಇ-ಕನ್ನಡ ಮಾಧ್ಯಮ ವತಿಯಿಂದ ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸುತ್ತೇವೆ.

Author