ಚೊಚ್ಚಲ ಮಹಿಳಾ ಅಂಧರ ಟಿ 20 ವಿಶ್ವಕಪ್ ವಿಜೇತ ತಂಡವನ್ನು ಅಭಿನಂಧಿಸಿದ ಬಿ. ವೈ. ವಿ

ಕ್ರೀಡೆ

ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ ಕಪ್ ಗೆದ್ದ ಹರ್ಷ ಇನ್ನೂ ತಣ್ಣಗಾಗುವ ಮೊದಲೇ, ಮತ್ತೊಂದು ಐತಿಹಾಸಿಕ ಕ್ಷಣ—ಮಹಿಳಾ ಅಂಧರ T20 ವಿಶ್ವಕಪ್ ಪ್ರಶಸ್ತಿಯನ್ನು ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡ ಮೊದಲ ಬಾರಿಗೆ ಮುಡಿಗೇರಿಸಿಕೊಂಡಿದೆ.

ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಅನೇಕ ಗಣ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಧ್ಯಕ್ಷರಾದ ಬಿ ವೈ ವಿಜಯೇಂದ್ರ ರವರು ಇಂದು ಚೊಚ್ಚಲ ಮಹಿಳಾ ಅಂಧರ ಟಿ 20 ವಿಶ್ವಕಪ್ ವಿಜೇತ ತಂಡವನ್ನು ಬೆಂಗಳೂರಿನ ಚಾನ್ಸೆರಿ ಪೆವಿಲಿಯನ್ ಹೋಟೆಲ್ ನಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

Author