ಶಿವಮೊಗ್ಗ,ದಸರಾ ಜಂಬೂ ಸವಾರಿಗೆ ಆಗಮಿಸಿದ್ದ ಸಕ್ರೆಬೈಲಿನ ಸಾಗರ್, ಸೋಮಣ್ಣ ಮತ್ತು ಬಹದ್ದೂರ್ ಅನೆಗಳು ತವರಿಗೆ ಮರಳಿದವರು. ಕಳೆದ ರಾತ್ರಿಯೇ ಆನೆಗಳನ್ನು ಬಿಡರಾಕ್ಕೆ ಕರೆದೊಯ್ಯಲಾಯಿತು. ಈ ಸಂದರ್ಭ ಅಲ್ಲಿದ್ದ ಜನರು ಅನೆಗಳ ಹಸರು ಕೂಗಿ ಶುಭ ಕೋರಿ ಬೀಳ್ಕೊಟ್ಟರು.
ಅಂಬಾರಿ ಸಹಿತ ಓಡಿದ್ದ ಸೋಮಣ್ಣ ಆನೆ ಕೆಲವು ಹೊತ್ತು ಎಲ್ಲರನ್ನು ದಿಗಿಲುಗೊಳಿಸಿತ್ತು. ಆನಂತರ ಆನೆಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಜಿಲ್ಲಾ ತರಬೇತಿ ಸಂಸ್ಥೆ ಆವರಣಕ್ಕೆ ಆನೆಗಳನ್ನು ಕರೆದೊಯ್ದು ವಿಶ್ರಾಂತಿ ನೀಡಲಾಗಿತ್ತು. ಬಳಿಕ ರಾತ್ರಿ 10:30ಕ್ಕೆ ಆನೆಗಳನ್ನು ವಾಸವಿ ಶಾಲೆ ಎದುರು ಖಾಲಿ ಜಾಗಕ್ಕೆ ಕರೆತಂದು ಅಲ್ಲಿ ನಿರ್ಮಿಸಿದ್ದ ರಾಂಪ್ ಮೂಲಕ ಲಾರಿಗಳಿಗೆ ಹತ್ತಿಸಲಾಯಿತು.
ಆ ಹೊತ್ತಿನಲ್ಲಿಯು ಕೋಟೆ ರಸ್ತೆಯಲ್ಲಿ ಜನ ಸೇರಿದ್ದರು. ಲಾರಿಯಲ್ಲಿ ಆನೆಗಳನ್ನು ಕರೆದೊಯ್ಯುವಾಗ ಅವುಗಳ ಹೆಸರು ಕರೆದು ಶುಭ ಕೋರಿದರು. ಸದ್ಯ ಸೋಮಣ್ಣ ಆನೆ ನಿಯಂತ್ರಣದಲ್ಲಿದ್ದು ಜನರು ಹೆಸರು ಕರೆದಾಗ ಸೊಂಡಿಲನ್ನು ಮೇಲೆತ್ತಿ ಪ್ರತಿಕ್ರಿಯೆ ನೀಡಿತು.
