ಶಿವಮೊಗ್ಗ | ಹಿರಿಯ ಪತ್ರಕರ್ತ ನಂಜುಂಡಪ್ಪ ನಿಧನಕ್ಕೆ ಸಚಿವರ ಸಂತಾಪ

ಶಿವಮೊಗ್ಗ

ಶಿವಮೊಗ್ಗ,ಹಿರಿಯ ಪತ್ರಕರ್ತ ವಾಯ್ಸ್‌ ಆಫ್‌ ಶಿವಮೊಗ್ಗ ಸಂಪಾದಕರಾದ ಬಂಡಿಗಡಿ ನಂಜುಂಡಪ್ಪ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿರುವ ನಂಜಂಡಪ್ಪ ಅವರ ಸೇವೆ ಅನನ್ಯವಾದುದು. ಜಿಲ್ಲಾ ಮಟ್ಟದ ಪತ್ರಿಕೆಗಳನ್ನು ನಡೆಸುವುದೇ ಕಷ್ಟ ಸಾಧ್ಯವಾಗಿರುವ ಈ ಕಾಲದಲ್ಲಿ ಸತತ 42 ವರ್ಷಗಳಿಂದ ಪತ್ರಿಕೆ ಮುನ್ನಡೆಸಿಕೊಂಡು ಬಂದಿದ್ದ ನಂಜುಂಡಪ್ಪ ಅವರದ್ದು ದೊಡ್ಡ ಸಾಧನೆಯಾಗಿದೆ. ಪತ್ರಕರ್ತರು ಮತ್ತು ಸಂಪಾದಕರ ಸಂಘಟನೆಗಳಲ್ಲಿಯೂ ಅವರು ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.

Author