ಟೆಲ್ ಅವಿವ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿನ್ನೆ (ಅ.3-ಶನಿವಾರ) ಫ್ಲೈದುಬೈ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರು ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ. ಸ್ಮಿತ್ ಮಚ್ಚಾರ್ ಅವರನ್ನು ‘ನ್ಯಾಷನಲ್ ಹೀರೋ’ ಎಂದು ಕರೆದಿರುವ ನೆತನ್ಯಾಹು, ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸುವಂತೆ ಅವರಿಗೆ ಆಹ್ವಾನ ನೀಡಿದ್ದಾರೆ.
“ನೀವು ಇಸ್ರೇಲ್, ಭಾರತ ಮತ್ತು ಇಡೀ ಜಗತ್ತಿಗೆ ಹೀರೋ. ನಿಮ್ಮನ್ನು ಇಸ್ರೇಲ್ ದಿನಾಚರಣೆಯ ಸಮಾರಂಭಕ್ಕೆ ಆಹ್ವಾನಿಸಲು ನಮಗೆ ಬಹಳ ಹೆಮ್ಮೆ ಎನಿಸುತ್ತಿದೆ” ಎಂದು ದೂರವಾಣಿ ಕರೆ ಸಂದರ್ಭದಲ್ಲಿ ಬೆಂಜಮಿನ್ ನೆತನ್ಯಾಹು ಅವರು ಸ್ಮಿತ್ ಮಚ್ಚಾರ್ ಅವರನ್ನು ಉದ್ದೇಶಿಸಿ ಹೇಳಿದರು.
ಇದೇ ವೇಳೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ, ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವಂತೆ, ನೆತನ್ಯಾಹು ಆಹ್ವಾನ ನೀಡಿದ್ದಾರೆ.”ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಟಾರ್ಚ್ ಹಚ್ಚಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ” ಎಂದು ಇಸ್ರೇಲ್ ಪ್ರಧಾನಿ ಹೇಳಿದರು.
ಇದು ಇಸ್ರೇಲ್ ತನ್ನ ಸ್ವಾತಂತ್ರ್ಯ ದಿನದಂದು ನೀಡುವ ಅತ್ಯುನ್ನತ ಗೌರವವಾಗಿದೆ. ಫ್ಲೈದುಬೈ ಪಿತೂರಿಗಾರರನ್ನು ಶಿಕ್ಷಿಸುವ ಭರವಸೆ ನೀಡಿರುವ ನೆತನ್ಯಾಹು, ಇಸ್ರೇಲಿ ನಾಗರಿಕರ ಜೀವ ಉಳಿಸಿದ ಸ್ಮಿತ್ ಮಚ್ಚಾರ್ ಅವರನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
