ಫ್ರಾನ್ಸ್ ಹಿಂಸಾಚಾರ – ಭಾರತದ ಪ್ರತಿಭಟನೆಗೆ ಲಿಂಕ್; ರಾಹುಲ್ ಗಾಂಧಿ ‘ದೇಶದ್ರೋಹಿ’ ಎಂದು BJP ಕಿಡಿ

ವಿದೇಶ

ಫ್ರಾನ್ಸ್‌ನಲ್ಲಿ ನಡೆದ ಹಿಂಸಾತ್ಮಕ ಗಲಭೆಗಳು ಮತ್ತು ಇತ್ತೀಚೆಗೆ ಭಾರತದಲ್ಲಿ ನಡೆದ ಪ್ರತಿಭಟನೆಗಳ ನಡುವೆ ನಂಟು ಇರಬಹುದು ಎಂದು ಆರೋಪಿಸುವ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿದ ಬಿಜೆಪಿ, ಕಾಂಗ್ರೆಸ್ ಪಕ್ಷ ದೇಶದಲ್ಲಿ “ಅರಾಜಕತೆ ಸೃಷ್ಟಿಸಲು ಮತ್ತು ಆಡಳಿತ ಬದಲಾವಣೆ”ಗೆ ಸಂಚು ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

‘ದಿ ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಫ್ರಾನ್ಸ್‌ನಲ್ಲಿ ನಡೆದ ಗಲಭೆಗಳು ಮತ್ತು ಭಾರತದಲ್ಲಿ ಮುಖ್ಯ ಚುನಾವಣಾ ಆಯುಕ್ತ(CEC) ಜ್ಞಾನ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗಳ ನಡುವೆ ಸಂಪರ್ಕವಿರುವುದನ್ನು ‘ಫಾಕ್ಸ್ ನ್ಯೂಸ್’ನ ಡಿಜಿಟಲ್ ತನಿಖೆ ಬಹಿರಂಗಪಡಿಸಿದೆ ಎಂದು ಹೇಳಲಾಗಿದೆ.

ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, “ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಂಚು ರೂಪಿಸಿದ್ದಾರೆ. ರಾಹುಲ್ ಗಾಂಧಿ “ಗದ್ದಾರ್” (ದೇಶದ್ರೋಹಿ) ಎಂದು ಟೀಕಿಸಿದರು.

Author