ಶಿವಮೊಗ್ಗ | ಸುಂದರೇಶ್‌ಗೆ ಕೆಪಿಸಿಸಿಯಿಂದ ಶೋಕಾಸ್ ನೋಟೀಸ್

ರಾಜಕೀಯ

ಶಿವಮೊಗ್ಗ,ಸೆ. ೨೩ರಂದು ಖಾಸಗಿ ಹೋಟೆಲ್ ಒಂದರಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎ.ಐ.ಸಿ.ಸಿ ನಡೆಸುತ್ತಿರುವ ’ಸಂಘಟನ್ ಸೃಜನ್ ಅಭಿಯಾನ್’ ಕಾರ್ಯಕ್ರಮದ ಬಗ್ಗೆ , ಕಾಂಗ್ರೆಸ್ ಪಕ್ಷದ ಮುಖಂಡರ ಬಗ್ಗೆ ಮಾಡಿರುವ ಟೀಕೆಗಳು ಮಾಡಿದ್ದು, ಇದು ನಿಮ್ಮ ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ.

ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಸೂಚನೆಯ ಮೇರೆಗೆ ಶೋಕಾಸ್ ನೋಟೀಸನ್ನು ಜಾರಿ ಮಾಡಲಾಗುತ್ತಿದೆ. ಈ ನೋಟೀಸು ನೀಡಿದ ದಿನದಿಂದ ಏಳು ದಿನಗಳ ಒಳಗಾಗಿ ಈ ಪ್ರಕರಣದ ಬಗ್ಗೆ ಸಮಜಾಯಿಷಿ ನೀಡಬೇಕೆಂದು ಕೆಪಿಸಿ ಡಿಸಿಸಿ ಮಾಜಿ ಅಧ್ಯಕ್ಷ ಎಚ್ ಎಸ್ ಸುಂದರೇಶ್ ಅವರಿಗೆ ಸೂಚಿಸಿದೆ.

ಒಂದು ವಾರದಲ್ಲಿ ಸಮಜಾಯಿಷಿ ನೀಡಲು ತಪ್ಪಿದಲ್ಲಿ ಮುಂದಿನ ಶಿಸ್ತುಕ್ರಮ ಜರುಗಿಸಲಾಗುವುದು. ನಿಮ್ಮ ಹೇಳಿಕೆಗಳ ಬಗ್ಗೆ ಈ ಬಗ್ಗೆ ಸ್ಥಳೀಯ ಮುಖಂಡರು ಕೆಪಿಸಿಸಿಗೆ ದೂರು ನೀಡಿದ್ದಾರೆ . ನಿಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ಹಾಗೂ ಸ್ಥಳೀಯ ಮುಖಂಡರುಗಳಿಗೆ ತೀವ್ರ ಮುಜುಗರ ಉಂಟಾಗಿದೆ ಎಂದು ಕೆಪಿಸಿಸಿ ನೋಟಿಸಿನಲ್ಲಿ ಹೇಳಿದೆ.

Author