ಬೆಂಗಳೂರು | ಹೊಸದಾಗಿ 53 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿ ಸರ್ಕಾರ ಆದೇಶ

ಬೆಂಗಳೂರು

ಬೆಂಗಳೂರು, ರಾಜ್ಯದಲ್ಲಿ ಹಿಂದೆಂದೂ ಕಾಣದ ಬರಗಾಲ ತಲೆದೂರಿದ್ದು, ಘೋಷಿಸಲಾಗಿರುವ ಬರಪೀಡಿತ ತಾಲೂಕುಗಳ‌ ಪಟ್ಟಿಗೆ ಇಂದು 53 ತಾಲೂಕಗಳನ್ನ‌ ಸೇರ್ಪಡೆಗೊಳಿಸಿ ಇಂದೇ ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸದನಕ್ಕೆ ಮಾಹಿತಿ ನೀಡಿದ್ದಾರೆ.

ಬರ ಸಂಬಂಧ ವಿಶೇಷ ಚರ್ಚೆ ಹಿನ್ನೆಲೆ ವಿಧಾನಪರಿಷತ್​ನಲ್ಲಿ ಮಾತನಾಡಿದ ಪರಮೇಶ್ವರ್, ಮೊದಲ‌ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಕೆಲ ಶಾಸಕರು ಹಾಗೂ ರೈತರು ತಮ್ಮ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಲ್ಲ ಏಕೆ ಎಂದು ಅಸಮಾಧಾನ ವ್ಯಕ್ತಿಪಡಿಸಿದ್ದರು.

ಬಳಿಕ ಮುಂದಿನ ಹಂತದ ಪರಿಶೀಲನೆ ವೇಳೆ 23 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆವು. ಇಂದು 53 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡುತ್ತೇವೆ. ಈ ಮೂಲಕ ಒಟ್ಟು 177 ತಾಲೂಕು ಬರಪೀಡಿತ ತಾಲೂಕು ಘೋಷಣೆ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಒಟ್ಟು 210ರವರೆಗೆ ತಾಲೂಕು ಘೋಷಣೆ ಮಾಡಬಹುದು ಎಂದರು.

Author