ಶಿವಮೊಗ್ಗದಲ್ಲಿ ಕುಸ್ತಿ ಕ್ರೀಡಾ ಶಾಲೆ ಮುಂದುವರಿಕೆ ಹಾಗೂ ಮಿಳಘಟ್ಟ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಶಾಸಕ ಎಸ್.ಎನ್. ಚನ್ನಬಸಪ್ಪ ಮನವಿ

ಶಿವಮೊಗ್ಗ ಜಿಲ್ಲೆಯು ಕುಸ್ತಿ ಕ್ರೀಡೆಗೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಇಲ್ಲಿನ ನೂರಾರು ಕ್ರೀಡಾಪಟುಗಳು ದೇಶ-ವಿದೇಶಗಳಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಗೌರವ ತಂದಿದ್ದಾರೆ. ಈ ಕ್ರೀಡೆಯನ್ನು ಜೀವಂತವಾಗಿಡಲು ಮತ್ತು ಮುಂದಿನ ಪೀಳಿಗೆಯ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು ಶಿವಮೊಗ್ಗ ನಗರದಲ್ಲಿ ‘ಕುಸ್ತಿ ಕ್ರೀಡಾ ಶಾಲೆ’ಯನ್ನು ಮುಂದುವರಿಸಲು ಅಗತ್ಯ ಅನುದಾನ ಹಾಗೂ ಮೂಲಸೌಕರ್ಯ ಒದಗಿಸಬೇಕು ಎಂದು ಶಾಸಕರು ಕ್ರೀಡಾ ಇಲಾಖೆಯ ಪರವಾಗಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಮಿಳಘಟ್ಟ ನಿವಾಸಿಗಳ ಹಿತರಕ್ಷಣೆ: ಶಿವಮೊಗ್ಗ ತಾಲೂಕು ಕಸಬಾ-01 ಹೋಬಳಿಯ ಮಿಳಘಟ್ಟ ಗ್ರಾಮದ […]

Continue Reading