ಶಿವಮೊಗ್ಗ | ಕೆರೆಯಲ್ಲಿ ಈಜಾಡಲು ತೆರಳಿದ್ದ ಬಾಲಕ ನೀರುಪಾಲು

ಅವಘಡ ದುರಂತ

ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ ಕೆರೆಯಲ್ಲಿ ಸೆಪ್ಟೆಂಬರ್ 13 ಭಾನುವಾರ ಬೆಳಿಗ್ಗೆ ಈಜಾಡಲು ತೆರಳಿದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಬುರಾನ್ (15) ನೀರನಲ್ಲಿ ಮುಳುಗಿ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಈತ ಸೋಮಿನಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ಅಭ್ಯಾಸ ಮಾಡುತ್ತಿದ್ದ.ನೀರಿನಲ್ಲಿ ಜಾನುವಾರು ಮೈ ತೊಳೆಯುತ್ತ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಅಗ್ನಿಶಾಮಕ ದಳದ ತಂಡದ ಠಾಣಾಧಿಕಾರಿ ಮಕ್ದು ಹುಸೇನ್ ಮತ್ತವರ ಸಿಬ್ಬಂದಿಗಳು ಶೋಧ ಕಾರ್ಯಾದಲ್ಲಿ ಭಾಗಿಯಾಗಿದ್ದರು.ಹಲವು ಗಂಟೆಗಳ ಶೋಧ ಕಾರ್ಯದ ನಂತರ ಸ್ಥಳೀಯ ನಿವಾಸಿಗಳು ಬಾಲಕನ ಶವ ಪತ್ತೆ ಹಚ್ಚಿದ್ದಾರೆ. ಸ್ಥಳದಲ್ಲಿ ನೂರಾರು ನಾಗರಿಕರು ನೆರೆದಿದ್ದರು.

Author