ಶಿವಮೊಗ್ಗ,ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಬಿಜೆಪಿ ಗಾಜನೂರು ಮಹಾಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾದ ಎರಡನೇ ದಿನದ ಜನಪರ ಪಾದಯಾತ್ರೆ ಹಾಗೂ ಜನಜಾಗೃತಿ ಸಭೆಯಲ್ಲಿ ಜಿಲ್ಲಾ ಸಂಸದರಾದ ಬಿ ವೈ ರಾಘವೇಂದ್ರರವರು ಭಾಗವಹಿಸಿದರು.

ಗಾಜನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 15ಕ್ಕೂ ಹೆಚ್ಚು ಗ್ರಾಮಗಳು ಮತ್ತು ನಮ್ಮ ಮಲೆನಾಡಿನ ರೈತರ, ಕೃಷಿಕರ ಹಾಗೂ ಸ್ಥಳೀಯರ ಹಕ್ಕುಗಳನ್ನು ಎತ್ತಿಹಿಡಿಯಲು ಈ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಯ ಹೆಸರಿನಲ್ಲಿ ಶ್ರಮಜೀವಿ ರೈತರ ಜಮೀನು ಮತ್ತು ಜನವಸತಿ ಪ್ರದೇಶಗಳಿಗೆ ಯಾವುದೇ ಧಕ್ಕೆಯಾಗದಂತೆ ತಡೆಯುವುದು ಹಾಗೂ ಕಂದಾಯ-ಅರಣ್ಯ ಇಲಾಖೆಗಳ ನಡುವಿನ ಗೊಂದಲಗಳನ್ನು ಬಗೆಹರಿಸಿ ರೈತರಿಗೆ ಶಾಶ್ವತ ನ್ಯಾಯ ಒದಗಿಸುವುದು ನಮ್ಮ ಆದ್ಯತೆಯಾಗಿದೆ.
ನಮ್ಮ ಮಲೆನಾಡಿನ ಜನರ ಹಿತರಕ್ಷಣೆ ಮತ್ತು ಬದುಕಿನ ಭದ್ರತೆಗಾಗಿ ಬಿಜೆಪಿ ಸದಾ ಮುಂಚೂಣಿಯಲ್ಲಿ ನಿಂತು ಹೋರಾಡಲಿದೆ.

ಈ ಪಾದಯಾತ್ರೆ ಮತ್ತು ಸಭೆಯಲ್ಲಿ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ದಾವಣಗೆರೆ ವಿಭಾಗ ಪ್ರಭಾರಿ ಟಿ. ಡಿ ಮೇಘರಾಜ್, ತೀರ್ಥಹಳ್ಳಿ ಬಿಜೆಪಿ ಅಧ್ಯಕ್ಷರಾದ ನವೀನ್ ಹೆದ್ದೂರು,ಪಾದಯಾತ್ರೆ ಪ್ರಮುಖರಾದ ಎಂ ಬಿ ಹರಿಕೃಷ್ಣ, ಶಿವನಂಜಪ್ಪ, ಗಾಜನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾದ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಸಿ ಹೆಚ್,ಜಿಲ್ಲಾ ಕಾರ್ಯದರ್ಶಿಗಳಾದ ಸುರೇಖಾ ಮುರಳಿಧರ್, ಶಾಂತ ಸುರೇಂದ್ರ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಬಿಳಕಿ,ಪ್ರಮುಖರಾದ ಪೆರುಮಾಳ್,ಹಾಗೂ ಗ್ರಾಮದ ಪ್ರಮುಖರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.





