ಶಿವಮೊಗ್ಗ, ಕರ್ನಾಟಕ ಸರ್ಕಾರದ ವಿವಿಧ ಜಿಲ್ಲೆಗಳ ಪಟ್ಟಣ ಪಂಚಾಯಿತಿಗಳಿಗೆ Road Network Grid Plan ಪ್ರಕಟಣೆ ಹೊರಡಿಸಿದ್ದು, ಇದು ಅವೈಜ್ಞಾನಿಕವಾಗಿದೆ ಎಂದು ರಾಜ್ಯ ರೈತ ಸಂಘ ಹೇಳಿದೆ. ಈ ಬಗ್ಗೆ ಇಂದು ಪ್ರತಿಭಟನೆ ನಡೆಸಿ ಸಂಬಂಧೀತರಿಗೆ ಮನವಿ ಸಲ್ಲಿಸಿದ ಸಂಘದವರು, ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತಕರಾರು ಅರ್ಜಿ ಸಲ್ಲಿಸಲು ನಿರ್ಧಾರಿಸಲಾಗಿದೆ.

Road Network Grid Plan ಅಧಿಸೂಚನೆ ಹೊರಡಿಸಿ 1 ತಿಂಗಳಾದರೂ ಬಾಧಿತ ಗ್ರಾಮಗಳಿಗೆ ಮತ್ತು ಸಂಬಂಧಪಟ್ಟ ರೈತರಿಗೆ ಈ ವಿಚಾರ ಗಮನಕ್ಕೆ ಬಂದಿಲ್ಲ. ಯಾವ ಯಾವ ಗ್ರಾಮಗಳಲ್ಲಿ ಯಾವ ಸರ್ವೆ ನಂಬರ್‌ನಲ್ಲಿ ಹೊಗುತ್ತದೆ. ಆ ಜಮೀನಿನ ರೈತರಿಗೆ ತಿಳುವಳಿಕೆಗೆ ಬಂದಿಲ್ಲ ಎಂದರು.
ಈಗಿರುವ Road Network Grid Plan ಅವೈಜ್ಞಾನಿಕವಾಗಿ ಕೆರೆಗಳ ಮೇಲೆ, ಗುಡ್ಡದ ಮೇಲೆ, ಹಳ್ಳ ಕೊಳ್ಳಗಳ ಮೇಲೆ ಹಾಲಿ ಇರುವ ಮುಖ್ಯ ರಸ್ತೆಗಳ ಅಕ್ಕಪಕ್ಕದಲ್ಲೇ ಹಾದು ಹೋಗುವುದರಿಂದ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದರಲ್ಲಿ ಸಣ್ಣ ಅತೀ ಸಣ್ಣ ರೈತರೇ ಇದ್ದಾರೆ. ಅವರೆಲ್ಲರೂ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ರಸ್ತೆ ಮಾಡಿದರೆ ಆರ್ಥಿಕ ನಷ್ಟಕ್ಕೊಳಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ.

ಆದ್ದರಿಂದ ಯಾವ ರೈತರ ಜಮೀನಿನಲ್ಲಿ ಹಾದು ಹೋಗುತ್ತದೆಯೋ ಅವರಿಗೆ ರಿಜಿಸ್ಟರ್ ಅಂಚೆ ಮೂಲಕ ಪತ್ರ ಕಳುಹಿಸಿ ಅವರಿಂದ ಅಭಿಪ್ರಾಯ ಪಡೆದು ಮುಂದಿನ ಕ್ರಮಕ್ಕೆ ಮುಂದಾಗಬೇಕು ಎಂದರು.. ಮೇಲ್ಕಂಡ ಎಲ್ಲಾ ಕಾರಣದಿಂದ ಅವೈಜ್ಞಾನಿಕವಾದ ರಸ್ತೆಯನ್ನು ಕೈಬಿಡಬೇಕಾಗಿ ಕೋರಿದ್ದಾರೆ .





