ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ತಾಲೂಕಿನ ಜೈಭೀಮ್ ನಗರದಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಈ ಗಲಾಟೆಯಲ್ಲಿ ಓರ್ವ ಗಾಯಗೊಂಡಿದ್ದು ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಗರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಜೈಭೀಮ್ ನಗರದಲ್ಲಿ ಮಂಜುನಾಥ್ (46) ಕಿರಣ್ (26) ಇಬ್ಬರ ಕೊಲೆಯಾಗಿದೆ. ಸುರೇಶ್ ಎಂಬಾತನಿಗೆ ಚಾಕು ಇರಿತದಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಪ್ರೀತಿಯ ವಿಚಾರದಲ್ಲಿ ಮರ್ಡರ್ ಆಗಿದೆ. ಜೈಭೀಮ್ ನಗರದ ನಿವಾಸಿಯಾಗಿದ್ದ ಶೃತಿ ಮತ್ತು ನಂದೀಶ್ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಸುತ್ತಿದ್ದ ಯುವತಿ ಮತ್ತು ಯುವಕ ಎರಡು ದಿನ ನಾಪತ್ತೆಯಾಗಿದ್ದರು.
ಇಂದು ಭದ್ರಾವತಿಗೆ ವಾಪಾಸ್ ಆದ ಯುವಕ ಯುವತಿ ನೇರವಾಗಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಗೆ ಹೋಗಿದ್ದರು. ಯುವಕ ಪೊಲೀಸ್ ಠಾಣೆಯಲ್ಲಿದ್ದು ಯುವಕನ ಪ್ರೀತಿಗೆ ಸಹಕರಿಸಿದ್ದ ಆರೋಪದ ಮೇಲೆ ಯುವತಿಯ ಅಣ್ಣ ಕಿರಣ್ ಗೆ ಹಲ್ಲೆ ನಡೆಸಿದ್ದನು. ಇದನ್ನ ಬಿಡಿಸಲು ಹೋದ ಜೈಭೀಮ್ ನಗರದ ನಿವಾಸಿ ಮಂಜುನಾಥ್ ಗೆ ಲಾಂಗು ಬೀಸಿದ ಪರಿಣಾಮ ಕಿರಣ್ ಹಾಗೂ ಮಂಜುನಾಥ್ ಕೊಲೆಯಾಗಿದ್ದಾರೆ.

ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಂಜುನಾಥನ ದೇಹವನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ಕೇಂದ್ರದಲ್ಲಿರಿಸಲಾಗಿದೆ.
ಕೊಲೆ ಮಾಡಿದ್ದ ಶಶಿ , ಕೆಂಚ ಮತ್ತು ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.



