ರೈತ ಮಹಿಳೆಯರ ಅಕ್ಕರೆಯ ಸತ್ಕಾರ – ಅನ್ನದಾತ ತಾಯಂದಿರ ವಾತ್ಸಲ್ಯಕ್ಕೆ ಎಂದೆಂದಿಗೂ ಋಣಿ.. ಎಂದು ವಿಜಯೇಂದ್ರ ಯೆಡಿಯೂರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಇವರು ಇಂದಿನ ಪಾದಯಾತ್ರೆಯಲ್ಲಿ ಕುನ್ನಟಗಿ ಗ್ರಾಮದ ಮೂಲಕ ನಾವು ನಡೆಯುತ್ತಿದ್ದಾಗ, ಊಟದ ಸಮಯವಾದದ್ದರಿಂದ ಅಲ್ಲಿನ ರೈತ ಮಹಿಳೆಯರು ಬಹಳ ಪ್ರೀತಿಯಿಂದ ಕರೆದು,

ತಾವು ತಂದಿದ್ದ ಬುತ್ತಿಯನ್ನು ತಮ್ಮ ಕೈಯಾರೆ ಅವರಿಗೆ ಉಣಬಡಿಸಿದರು. ರೈತರೊಂದಿಗೆ,ಅವರ ಹೊಲದಲ್ಲಿ ಅಕ್ಕರೆಯಿಂದ ನೀಡಿದ ಅವರ ಮನೆಯೂಟದ ಸವಿಯನ್ನು, ಆ ಸಂತೃಪ್ತಿಯನ್ನು ವರ್ಣಿಸಲು ಸಾಧ್ಯವಿಲ್ಲ ಎಂದರು.

ಮಣ್ಣನ್ನೇ ನಂಬಿ ಸರಳವಾಗಿ ಬದುಕುವ ರೈತರ ಮತ್ತು ತಾಯಂದಿರ ಅಪ್ಯಾಯತೆ ಮತ್ತು ವಾತ್ಸಲ್ಯ ದಣಿವನ್ನು ದೂರ ಮಾಡಿರುವುದಷ್ಟೇ ಅಲ್ಲ, ಹೊಸ ಚೈತನ್ಯವನ್ನು ನಮಗೆ ತುಂಬಿದೆ.ನಮ್ಮ ರೈತ ತಾಯಂದಿರ ಋಣ ತೀರಿಸಲು,ಅವರ ನೆಮ್ಮದಿಗಾಗಿ,ಅನ್ನದಾತರ ಹಕ್ಕಿಗಾಗಿ ಇನ್ನಷ್ಟು ಬದ್ಧತೆಯಿಂದ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.





