ಶಿವಮೊಗ್ಗ | ಈದ್ ಮಿಲಾದ್ ಮೆರವಣಿಗೆಯಲ್ಲಿ ನಿಯಮ ಉಲ್ಲಂಘಿಸಿ ಡಿ.ಜೆ ಸಿಸ್ಟಮ್ ಹಾಗೂ ಲೇಸರ್ ಲೈಟ್ ಬಳಕೆ : ಪ್ರಕರಣಗಳ ಸಂಖ್ಯೆ 5ಕ್ಕೆ ಏರಿಕೆ

ಕ್ರೈಂ

ಶಿವಮೊಗ್ಗ,ಈದ್ ಮಿಲಾದ್ ಮೆರವಣಿಗೆ ನಿಯಮ ಉಲ್ಲಂಘಿಸಿ ಡಿ.ಜೆ ಸಿಸ್ಟಮ್ಹಾಗೂ ಲೇಸರ್ ಲೈಟ್ ಬಳಸಿದ್ದಕ್ಕೆ ಬಂಧಿಸಿದಂತೆ ಪೊಲೀಸರು ಒಟ್ಟು 5 ಪ್ರಕರಣಗಳನ್ನು ದಾಖಲಿಸಿ ದ್ದಾರೆ. ವಿನೋಬನಗರ ಪೊಲೀಸ್ ಠಾಣೆಗಳಲ್ಲಿ ಮೂರು ಹೊಸ ಪ್ರಕರಣಗಳು ಮತ್ತೆ ದಾಖಲಾಗಿವೆ.

ಈ ಹಿಂದೆ ಕೋಟೆ ಪೊಲೀಸ್ ಎರಡು ಪ್ರಕರಣಗಳು ದಾಖಲಗಿವೆ . ಇದೀಗ ತುಂಗಾನಗರ ಠಾಣಾ ವ್ಯಾಪ್ತಿಯ ಸೂಳೆಬೈಲಿನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಟ್ರ್ಯಾಕ್ಟರ್‌ನಲ್ಲಿ ಡಿಜೆ ಹಾಗೂ ಲೇಸರ್ ಲೈಟ್ ಬಳಸಿ ಶಬ್ದ ಮಾಲಿನ್ಯ ಉಂಟುಮಾಡಿದ ಆರೋಪದಡಿ ಡಿಜೆ ಮಾಲೀಕ, ಚಾಲಕ ಹಾಗೂ ಸ್ಥಳೀಯ ವ್ಯಕ್ತಿಯವಿರುದ್ಧ ಪ್ರಕರಣ ದಾಖಲಾಗಿದೆ. ವಿನೋಬನಗರ ಠಾಣಾ ವ್ಯಾಪ್ತಿಯ ಬಸವನಗಂಗೂರು ಹಾಗೂ ಬೊಮ್ಮನಕಟ್ಟೆ ಕೊನೆ ಬಸ್‌ ನಿಲ್ದಾಣದ ಬಳಿ ಅನುಮತಿ ಇಲ್ಲದೆ ಲಾರಿ ಮತ್ತು ಬೊಲೆರೋ ವಾಹನಗಳಲ್ಲಿ ಡಿಜೆ ಸೌಂಡ್ ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ನಿಯಮ ಉಲ್ಲಂಘಿಸಿದ ಆಯೋಜಕರು, ವಾಹನ ಹಾಗೂ ಡಿಜೆ ಸಿಸ್ಟಮ್‌ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Author