ಶಿವಮೊಗ್ಗ,“ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮನುಷ್ಯನಿಗೆ” ಎಂಬ ಶ್ರೀ ನಾರಾಯಣ ಗುರುಗಳ ಮಹತ್ವದ ಸಂದೇಶವನ್ನು ಸ್ಮರಿಸುತ್ತಾ, ಚೆಬಳಂದಿಯ ಚಂದ್ರನುದಿಯಿಸಿದ ದಿನಾಂಕ 28/08/2026 ಅಂದರೆ ಸಿಂಹ ಮಾಸದ ಓಣಂ ದಿನದಂದು ಶ್ರೀ ನಾರಾಯಣ ಗುರು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಮಲಯಾಳಿ ಶ್ರೀ ನಾರಾಯಣ ಗುರು ಸೇವಾ ಸಮಿತಿ, ಶಿವಮೊಗ್ಗ ನಿರ್ಣಯಿಸಿದೆ.
ಗುರು ಜಯಂತಿಯ ಅಂಗವಾಗಿ ಮೆಗ್ಗಾನ್ ಆಸ್ಪತ್ರೆಯ ಮುಂಭಾಗ 500 ಜನರಿಗೆ ಮಧ್ಯಾಹ್ನ 12:30ಕ್ಕೆ ಅನ್ನಪ್ರಸಾದವನ್ನು ವಿತರಿಸುವ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಮಿತಿ ತೀರ್ಮಾನಿಸಿದೆ.
ಈ ಪುಣ್ಯಕಾರ್ಯದಲ್ಲಿ ಸಮಿತಿಯ ಸದಸ್ಯರು, ಭಕ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಕೈಲಾದ ಸಹಕಾರವನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.
“ಸೇವೆ, ಸಮಾನತೆ ಮತ್ತು ಸಹೋದರತ್ವದ ಮೂಲಕ ಮಾನವೀಯತೆಯನ್ನು ಬೆಳೆಸೋಣ” — ಇದೇ ಗುರುಗಳಿಗೆ ಸಲ್ಲಿಸುವ ನಿಜವಾದ ಗೌರವ.ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ನಾರಾಯಣ ಗುರು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಸಮಿತಿ ಕೋರಿದೆ.





