ಶಿವಮೊಗ್ಗ | ಹಿಜಾಬ್ ನಿಷೇದ ಹಿಂಪಡೆದ ಕಾಂಗ್ರೆಸ್ ಸರ್ಕಾರ ; ಮುಸ್ಲಿಮರ ಸಂಘಟನಾತ್ಮಕ ಹೋರಾಟಕ್ಕೆ ಸಿಕ್ಕ ಜಯ
: ಸಯ್ಯದ್ ಮುಜಿಬುಲ್ಲ

ಶಿವಮೊಗ್ಗ

ಶಿವಮೊಗ್ಗ, ಹಿಜಾಬ್ ಕೇವಲ ವಸ್ತ್ರವಲ್ಲ. ಅದೊಂದು ಧಾರ್ಮಿಕ ಆಚರಣೆಯ ಭಾಗ. ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಅವರವರ ಧರ್ಮಚಾರಣೆ ಮಾಡಲು ಮುಕ್ತ ಅವಕಾಶ ಇದೆ.ಹಿಜಾಬ್ ನಿಷೇಧದಿಂದಾಗಿ ಹಲವಾರು ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತೀರಿಕ್ತ ಪರಿಣಾಮಬೀರಿತ್ತು ಮತ್ತು ಮುಸ್ಲಿಮರ ಧಾರ್ಮಿಕ ಸ್ವಾತಂತ್ರದ ಮೇಲೆ ದಾಳಿಯಾಗಿತ್ತು.

ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ಕಾನೂನನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರಾಜ್ಯಾಧ್ಯoತ ಮುಸ್ಲಿಂ ಸಮುದಾಯ ಸಂಘಟನಾತ್ಮಕವಾಗಿ ಹೋರಾಟ ಮಾಡಿತ್ತು.

ಇದರ ಫಲವಾಗಿ ಸರ್ಕಾರ ಈಗ ಶಾಲಾಕಲೇಜುಗಳಲ್ಲಿ ಇದ್ದ ಹಿಜಾಬ್ ನಿಷೇದದ ಕಾನೂನನ್ನು ಹಿಂಪಡೆದಿದೆ.

ಸರ್ಕಾರದ ಈ ನಿರ್ಧಾರವನ್ನು ವೇದಿಕೆಯು ಸ್ವಾಗತಿಸುತ್ತದೆ ಹಾಗೂ ಸಂಘಟನೆ ಮತ್ತು ಹೋರಾಟದಿಂದ ನಮಗೆ ಸಿಗಬೇಕಾದ ಹಕ್ಕುಗಳು ಸಿಗುತ್ತವೆ ಹಾಗಾಗಿ ಮುಸ್ಲಿಂ ಸಮಾಜವು ತಮ್ಮ ಹಕ್ಕುಗಳಿಗಾಗಿ ಸಂಘಟನೆ ಮತ್ತು ಹೊರಾಟಗಳನ್ನು ಜೀವಂತವಾಗಿಡುವುದು ಅತ್ಯಾವಶ್ಯಕವಾಗಿದೆ ಎಂದು ಕ. ರಾ. ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮುಸ್ಲಿಂ ಮುಖಂಡ ಸಯ್ಯದ್ ಮುಜಿಬುಲ್ಲ ತಿಳಿಸಿದ್ದಾರೆ

Author