ಶಿವಮೊಗ್ಗ | ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ‘ಅರಿವು’ ಶೈಕ್ಷಣಿಕ ಸಾಲ ಯೋಜನೆ : ಅರ್ಜಿ ಆಹ್ವಾನ

ಶಿವಮೊಗ್ಗ

ಶಿವಮೊಗ್ಗ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು 2026-27ನೇ ಸಾಲಿನ ‘ಅರಿವು’ ಶೈಕ್ಷಣಿಕ ಸಾಲ ಯೋಜನೆಯಡಿ ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆಯಾದ ಸಿಇಟಿ/ಎನ್ ಇ ಇ ಟಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಾದ ಎಂಬಿಬಿಎಸ್, ಬಿಡಿಎಸ್, ಬಿಇ/ಬಿ.ಟೆಕ್, ಆಯುಷ್, ಆರ್ಕಿಟೆಕ್ಚರ್, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಪಶುಸಂಗೋಪನೆ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಲು ಈ ಸಾಲ ಸೌಲಭ್ಯ ದೊರೆಯಲಿದೆ.

ಮುಸ್ಲಿಂ, ಜೈನ್, ಬೌದ್ಧ, ಸಿಖ್, ಪಾರ್ಸಿ ಮತ್ತು ಆಂಗ್ಲೋ-ಇಂಡಿಯನ್ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದುಅರ್ಜಿಗಳನ್ನು ಮೇ 08 ರಿಂದ 31 ರವರೆಗೆಆನ್‌ಲೈನ್ ಮೂಲಕ ನಿಗಮದ ವೆಬ್‌ಸೈಟ್ www.kmdconline.karnataka.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಅದರ ಪ್ರಿಂಟೌಟ್‌ನೊಂದಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅಂಕಪಟ್ಟಿಗಳು,ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು), ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರಗಳು.ಸಿಇಟಿ/ ಎನ್ ಇ ಇ ಟಿ ಹಾಲ್ ಟಿಕೆಟ್, ನೋಟರಿಯಿಂದ ದೃಢೀಕರಿಸಲ್ಪಟ್ಟ ಇಂಡೆಮ್ನಿಟಿ ಬಾಂಡ್, ವಿದ್ಯಾರ್ಥಿ ಮತ್ತು ಪೋಷಕರ ಸ್ವಯಂ ಘೋಷಣಾ ಪತ್ರ ದಾಖಲೆಗಳನ್ನು ಲಗತ್ತಿಸಬೇಕು.

ಭರ್ತಿ ಮಾಡಿದ ಅರ್ಜಿ ಮತ್ತು ದಾಖಲೆಗಳನ್ನು ಮೇ 31 ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ (ನಿ), ಅಚ್ಯುತರಾವ್ ಲೇಔಟ್, 4ನೇ ತಿರುವು, ನಂಜಪ್ಪ ಆಸ್ಪತ್ರೆ ಮುಂಭಾಗ, ಶಿವಮೊಗ್ಗ ಈ ವಿಳಾಸಕ್ಕೆ ಸಲ್ಲಿಸಲು ಕೋರಲಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-228262 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author