ಶಿವಮೊಗ್ಗ, ಹೌದು ಇಂದು ಭದ್ರಾವತಿ VISL ಕಾರ್ಖಾನೆ ಪುನಃಶ್ಚೇತನ ಕುರಿತಾಗಿ ಮಹತ್ತರ ಮಾಹಿತಿಗಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗಮಿಸಿದ್ದು ಅದರಂತೆ ಭದ್ರಾವತಿ ಗೆಸ್ಟ್ ಹೌಸ್ ಗೆ ಆಗಮಿಸಿದ್ದರು.ಇದೆ ವೇಳೆಯಲ್ಲಿ ಕುಮಾರಸ್ವಾಮಿ ಅವರೊಂದಿಗೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯ ನಾಯ್ಕ್ ಹಾಗೂ ಭದ್ರಾವತಿ ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಹಾಗೂ ಬೋಜೆ ಗೌಡ ಆಗಮಸಿದ್ದರು.
ಈ ಹಿನ್ನಲೆಯಲ್ಲಿ ಭದ್ರಾವತಿ ಸ್ಥಳೀಯ ಪತ್ರಕರ್ತರು VISL ಕಾರ್ಖಾನೆ ಮುಂಭಾಗದ ಗೇಟ್ ಬಳಿ ಕಾಯುತ್ತಿದ್ದರು.ಇದೆ ವೇಳೆ ಶಿವಮೊಗ್ಗ ವಾರ್ತಾ ಇಲಾಖೆಯಿಂದ ಶಿವಮೊಗ್ಗ ಪತ್ರಕರ್ತರು ಸಹ ಗೇಟ್ ಮುಂದೆ ಆಗಮಿಸಿದರು.ಈ ವೇಳೆಯಲ್ಲಿ ಗೇಟ್ ಮುಂಭಾಗ ನಿಂತಿದ್ದ ಸೆಕ್ಯೂರಿಟಿ ಪತ್ರಕರ್ತರನ್ನ ತಡೆದು ವಾಹನವನ್ನ ಸಹ ಒಳ ಪ್ರವೇಶಿಸಿದಂತೆ ತಡೆಗಟ್ಟಿದರುಇದೆ ವೇಳೆಯಲ್ಲಿ ಭದ್ರಾ ಗೆಸ್ಟ್ ಹೌಸ್ ನಲ್ಲಿ ಕುಮಾರಸ್ವಾಮಿ ಹಾಗೂ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯ ನಾಯ್ಕ್ ಹಾಗೂ ಎಂ ಎಲ್ ಸಿ ಬೋಜೆ ಗೌಡ ಹಾಗೂ ಜೆಡಿಎಸ್, ಬಿಜೆಪಿ ಮುಖಂಡರೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಗೇಟ್ ಸೆಕ್ಯೂರಿಟಿ ನಡುವೆ ಮಾತಿನ ಚಕಮಕಿ ನಡೆಯಿತು.ನಂತರ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯ ನಾಯ್ಕ್ ಅವರು ಸಹ ಪತ್ರಕರ್ತರನ್ನ ಒಳಗೆ ಬಿಡಿ ಎಂದು ಮಾಡಿದ ಮನವಿಗೆ VISL ಸಿಬ್ಬಂದಿಗಳು ಸ್ಪಂದಿಸಲಿಲ್ಲ.
ನಂತರ ವಾರ್ತಾ ಇಲಾಖೆ ಅಧಿಕಾರಿ ಮಾರುತಿ ಅವರ ಮಾತಿಗೂ ಬೆಲೆ ಕೊಡದೆ ಪತ್ರಕರ್ತರನ್ನ ತಡೆದ VISL ಸಿಬ್ಬಂದಿಗಳು, ನಂತರ ಭದ್ರಾ ಗೆಸ್ಟ್ ಹೌಸ್ ಬಳಿ ಸಭೆ ನಡೆಯುತ್ತಿರುವ ಮಾಹಿತಿ ಪಡೆದುಕೊಂಡು, ಅಲ್ಲಿಗೆ ಬಂದಾಗಲೂ ಸಹ ಅಲ್ಲಿಯೂ ಗೆಸ್ಟ್ ಹೌಸ್ ನ ಗೇಟ್ ಹೊರಭಾಗದಲ್ಲಿಯೇ ಪತ್ರಕರ್ತರನ್ನ ತಡೆದರು.

ನಂತರ ಶಿವಮೊಗ್ಗ ಸಂಸದ ರಾಘವೇಂದ್ರ ಮೀಟಿಂಗ್ ಗೆ ಆಗಮಿಸಿದ್ದರು. ಗೇಟ್ ಹೊರಗೆ ಪತ್ರಕರ್ತರ ವಾಹನವನ್ನು ತಡೆದಿದ್ದನ್ನು ಕಂಡು ಪತ್ರಕರ್ತರನ್ನು ಒಳಗೆ ಬರುವಂತೆ ಹಾಗೂ ಸಿಬ್ಬಂದಿಗಳಿಗೆ ಒಳಗೆ ಬಿಡುವಂತೆ ಸೂಚಿಸಿದರು.
ಇಷ್ಟಾದ ಮೇಲೆ ವಿ ಐ ಎಸ್ ಎಲ್ ಸಿಬ್ಬಂದಿಗಳು ಬಿಡುವುದೋ ಬೇಡವೋ ಎಂದು ಮೀನಾ ಮೇಷ ಎಣಿಸುತ್ತಾ ಕೊನೆಗೂ ಪತ್ರಕರ್ತರನ್ನು ಒಳಗೆ ಬಿಟ್ಟರು. ಪತ್ರಕರ್ತರು ಭದ್ರ ಗೆಸ್ಟ್ ಹೌಸ್ ಪ್ರವೇಶಿಸುತ್ತಿದ್ದಂತೆ ಅಲ್ಲಿಯೂ ಎಚ್ಡಿಕೆ ಸಭೆ ನಡೆಯುವ ಸ್ಥಳಕ್ಕೆ ಒಳ ಹೋಗಲು ಬಾರಿ ಹರಸಾಹಸವನ್ನೇ ಮಾಡಬೇಕಾಯಿತು.
ವಿ ಐ ಎಸ್ ಎಲ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆಯ ಆರಂಭದಲ್ಲಿ ನೂಕು ನುಗ್ಗುಲು ಉಂಟಾಗಿ ಈ ವೇಳೆಯಲ್ಲಿ ಮತ್ತೆ ಯಾರಿಗೂ ಕೂಡ ಒಳಗೆ ಬಿಡದೇ ಮಾತಿನ ಚಕಮಕಿ ಕೂಡ ನಡೆಯಿತು .
ಹಾಗೂ ಹೀಗೂ ನೂಕು ನುಗ್ಗಲಿನ ನಡುವೆ ಎಚ್ ಡಿ ಕೆ ಸಭೆಗೆ ಒಳ ಪ್ರವೇಶಿಸಿದ ಪತ್ರಕರ್ತರಿಗೆ ಖುದ್ದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕೂಡ ಒಂದೆರಡು ಫೋಟೋ ಸ್ವಲ್ಪ ವಿಡಿಯೋ ಮಾಡಿ ತಕ್ಷಣ ಹೊರಡಿ ಎಂದು ಹೇಳಿದ್ದೆ ಪ್ರಚೋದನೆ ನೀಡಿದಂತಾಗಿತ್ತು ಇದನ್ನೇ ಸದುಪಯೋಗ ಪಡಿಸಿಕೊಂಡ VISL ಸಿಬ್ಬಂದಿಗಳು ಪತ್ರಕರ್ತರನ್ನ ಆಚೆ ದಬ್ಬಿದರು.

ಇದೆ ವೇಳೆ ಭದ್ರಾವತಿ ಸ್ಥಳೀಯ ಪತ್ರಕರ್ತರು ಸಹ ಯಾವಾಗಲೂ ಹೀಗೆ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಇಷ್ಟೆಲ್ಲದರ ಮಧ್ಯೆ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮಂಗೋಟೆ ರುದ್ರೇಶ್, ಶಾರದಾ ಅಪ್ಪಾಜಿ ಸೇರಿದಂತೆ ಅನೇಕರು ಇರುವುದನ್ನು ನೋಡಿ VISL ಕಾರ್ಮಿಕರ ಖಾಯಂ ನೌಕರರ ಅಧ್ಯಕ್ಷ ಜಗದೀಶ್ , ಜೆಡಿಎಸ್ ಸ್ಥಳೀಯ ಮುಖಂಡ ಮಧುಕುಮಾರ್ ನಮ್ಮನ್ನು ಕೂಡ ಹೊರಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಪ್ರತಿನಿಧಿ ಅಲ್ಲದವರೆಲ್ಲ ಸೇರಿ ಸಭೆ ಮಾಡುತ್ತಿದ್ದಾರೆ ಎಂದು ಕಾರ್ಖಾನೆಯ ಕಾರ್ಮಿಕರು ಆಕ್ರೋಶ ಹೊರಹಾಕಿದ್ದು ಕಂಡು ಬಂತು. ಕೇಂದ್ರ ಸಚಿವರ ಕಾರ್ಯಕ್ರಮಕ್ಕೆ ಶಿವಮೊಗ್ಗದಿಂದ ತೆರಳಿದ ಪತ್ರಿಕರ್ತರು ಹಾಗೂ ಭದ್ರಾವತಿಯ ಪತ್ರಕರ್ತರು ಮೂರು ಮೂರು ಬಾರಿ ಅವಮಾನಕ್ಕೆ ಒಳಗಾದ ಪತ್ರಕರ್ತರು ಎಚ್. ಡಿ ಕುಮಾರಸ್ವಾಮಿ ಕಾರ್ಯಕ್ರಮದಿಂದ ಹೊರ ನಡೆದರು.
ಇದೆ ವೇಳೆ ಎಚ್ಡಿಕೆ ಮಾಧ್ಯಮ ವಿಭಾಗದ ಅಧಿಕಾರಿಯೊಬ್ಬರು ಮಾಧ್ಯಮದವರನ್ನ ಸಮಾಧಾನ ಮಾಡಲು ಯತ್ನಿಸಿದರಾದರೂ ಸತತ ಮೂರು ನಾಲ್ಕು ಬಾರಿ ಅವಮರ್ಯಾದೆಗೆ ಒಳಗಾಗಿದ್ದ ಪತ್ರಕರ್ತರು ಬೇಸರಿಸಿ ಕೊಂಡು ಹೊರಟೇಬಿಟ್ಟರು.
ಈ ಸಂದರ್ಭದಲ್ಲಿ ಭದ್ರಾವತಿ ಸ್ಥಳೀಯ ಪತ್ರಕರ್ತರು ಈ ವಿ ಎಸ್ ಎಲ್ ಅಧಿಕಾರಿಗಳು ಯಾವಾಗಲೂ ಹೀಗೆ ಮಾಡುತ್ತಾರೆ ನಮಗೆ ಹೇಳಿಕೊಳ್ಳಲು ಬೇಸರಾಗುತ್ತದೆ ಶಿವಮೊಗ್ಗದಿಂದ ಬಂದಿದ್ದಾರೆ ಅವರಿಗಾದರೂ ಮರ್ಯಾದೆ ಕೊಡಬಹುದಾಗಿತ್ತು ಎಂದು ನಡೆದ ಘಟನೆಗಳನ್ನು ನೋಡುತ್ತಾ ಅಸಹಾಯಕರಾಗಿ ಉಳಿದರು.
ರಾಷ್ಟ್ರೀಯ ಪ್ರಮುಖ ಉದ್ದಿಮೆಯಾದ VISL ಪುನಃ ಚೇತನಕ್ಕಾಗಿ ಕೇಂದ್ರ ಸಚಿವ ಹೆಚ್ ಟಿ ಕೆ ಬಂದಾಗ ಅವರಿಗೆ ಮುಜುಗರ ಆಗುವಂತೆ ವಿಐಎಸ್ಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡೆದು ಕೊಂಡಿದ್ದು ಪತ್ರಕರ್ತರನ್ನ ಸಭೆಯಲ್ಲಿ ಬಿಟ್ಟುಕೊಳ್ಳದೆ ಆಚೆ ಇಟ್ಟು ಈ ರೀತಿ ನಡೆಸಿರುವುದು ಅವರ ಹುಳುಕು ಮುಚ್ಚಿಕೊಳ್ಳುವ ಕಾರ್ಯ ನಾ? ಎಂಬ ಪ್ರಶ್ನೆ ಉದ್ಭವವಾಗಿದೆ.
ಈ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಸಹ ಮುಜುಗರಕ್ಕೆ ಈಡಾಗುವಂತೆ ಮಾಡಿರುವುದು ಸುಳ್ಳಲ್ಲ.ಇದೆಲ್ಲದರ ನಡುವೆ ಈ ಘಟನೆ ಕುರಿತಂತೆ ಸಚಿವರು VISL ಅಧಿಕಾರಿಗಳ ಮೇಲೆ ಗಂಭೀರ ಕ್ರಮ ಜರುಗಿಸುತ್ತಾರಾ ಎಂಬ ಪ್ರಶ್ನೆಗೆ ಸಚಿವರಿಂದಲೇ ಉತ್ತರ ನಿರೀಕ್ಷೆ ಮಾಡಬೇಕಾದ ಅನಿವಾರ್ಯ ಇದೆ ?



