ಶಿವಮೊಗ್ಗ | ತೀರ್ಥಹಳ್ಳಿಯ ಬಸವನಗದ್ದೆ ಶಾಲೆಯ ಮುಖ್ಯ ಶಿಕ್ಷಕನ ಉಪಟಳಕ್ಕೆ ಬೇಸತ್ತ ಶಿಕ್ಷಕಿ : DDPI ಮೌನವೇಕೆ?

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಸವನಗದ್ದೆ ಶಾಲೆಯ ಮುಖ್ಯ ಶಿಕ್ಷಕನ ಉಪಟಳ ಹೆಚ್ಚಾಗಿದ್ದು, ಅಲ್ಲಿನ ಶಿಕ್ಷಕಿಯೊಬ್ಬರನ್ನು ನೆಮ್ಮದಿಯಾಗಿ ಪಾಠ ಮಾಡಲು ಬಿಡದೇ ಕಿರುಕುಳ ನೀಡುತ್ತಿದ್ದು..ಬೇಸತ್ತ ಶಿಕ್ಷಕಿ ಪದೇ ಪದೇ ಹುಷಾರಿಲ್ಲದೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಎದೆನೋವು ಹೃದಯ ಸoಬoಧಿತ ಕಾಯಿಲೆಯಿಂದ ಶಿಕ್ಷಕಿ ಬಳಲುತ್ತಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಈ ಶಿಕ್ಷಕ ಬಂದು ಮುಖ್ಯ ಶಿಕ್ಷಕನ ಪ್ರಭಾರಿ ವಹಿಸಿಕೊಂಡು ತನ್ನದೇ ದರ್ಪ ಎಂಬoತೆ ಮೆರೆಯುತ್ತಿದ್ದಾರೆ.ಕಳೆದ 7 ವರ್ಷದಲ್ಲಿ ಮೊದಲಿದ್ದ ಮುಖ್ಯಶಿಕ್ಷಕಿ ಪೋಷಕರು ಗ್ರಾಮಸ್ಥರು ದಾನಿಗಳಿoದ ಶಾಲಾಭಿವೃದ್ಧಿ ಹಾಗೂ ಉತ್ತಮ ಗುಣಾತ್ಮಕ ಕಲಿಕೆಯನ್ನು ಮಕ್ಕಳಿಗೆ ನೀಡಿರುವ ಅoಶ ಪೋಷಕ ವಲಯದಿಂದ ತಿಳಿದುಬಂದಿದೆ.

ಕ್ರಿಯಾಶೀಲ ಶಿಕ್ಷಕಿಯ ಕೆಲಸ ವರ್ಚಸ್ಸನ್ನು ಸಹಿಸಲಾರದೆ ಮುಖ್ಯಶಿಕ್ಷಕ ಶಿಕ್ಷಕಿಗೆ ತೇಜೋವಧೆಕರ ಮಾತುಗಳು, ಶಿಕ್ಷಕಿಗೆ ಮಾಟ ಮಂತ್ರ ಮಾಡುವoತ ಕೆಲವು ವಿಚಿತ್ರ ವರ್ತನೆಯನ್ನು ಶಾಲೆಯಲ್ಲಿ ಮಾಡಿರುತ್ತಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಶಿಕ್ಷಕಿಗೆ ಸತತ ಕಿರುಕುಳ ನೀಡಿದ್ದರಿಂದ ಶಿಕ್ಷಕಿ ಬೇರೆ ಶಾಲೆಗೆ ನಿಯೋಜನೆ ಹೋಗಿದ್ದರು ಕೂಡ ಮುಖ್ಯಶಿಕ್ಷಕ ಕಳೆದ ಒಂದೂವರೆ ವರ್ಷದಲ್ಲಿ ಬಂದ ಶಾಲಾನುದಾನ ಕುಡಿಯುವ ನೀರು ಸ್ವಚ್ಚತೆ ಅನುದಾನ, ಇಕೋ ಕ್ಲಬ್ ಅನುದಾನ, ಶಿಕ್ಷಕರ ವಿಶೇಷ ಅನುದಾನ ಬಂದಿದ್ದನ್ನು ಸಮರ್ಥವಾಗಿ ಬಳಸದೇ ಎಸ್ ಡಿ ಎಮ್ ಸಿ ಸದಸ್ಯರ ಗಮನಕ್ಕೆ ತರದೇ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕ ಇಬ್ಬರೇ ಹಣ ಡ್ರಾ ಮಾಡಿರುವ ಅoಶ ಬೆಳಕಿಗೆ ಬಂದಿದೆ ಎಂಬ ಆರೋಪ ಕೇಳಿಬಂದಿದೆ.

ಈ ವಿಚಾರ ಶಿಕ್ಷಕಿಗೆ ತಿಳಿಯುತ್ತದೆ ಎಂದು ಮುಖ್ಯ ಶಿಕ್ಷಕ, ಸತತವಾಗಿ ಶಿಕ್ಷಕಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದು ಆರೋಪವಾಗಿದೆ.ಶಿಕ್ಷಕಿ ಹಲವು ಬಾರಿ ಜಿಲ್ಲೆಯ ಉಪನಿರ್ದೇಶಕರು , ಶಾಲಾ ಶಿಕ್ಷಣ ಇಲಾಖೆ, ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ತೀರ್ಥಹಳ್ಳಿ ಇವರ ಗಮನಕ್ಕೆ ಲಿಖಿತ ದೂರು ನೀಡಿದರು ಇಲ್ಲಿವರೆಗೂ ಯಾವುದೇ ವಿಚಾರಣೆ ಇಲಾಖೆ ಮಾಡಿರುವುದಿಲ್ಲ ಎಂಬ ನೋವಾಗಿದೆ.

ಇಲ್ಲಿ ಪ್ರಾಮಾಣಿಕ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ ಎಂಬ ಮಾಹಿತಿಯಾಗಿದೆ, ಹಣ ನುoಗುವ ಶಾಲೆ ಅಕ್ಕಿ ಎಣ್ಣೆ ಬೇಳೆ ಕದಿಯುವ ಶಿಕ್ಷಕರನ್ನು ಉಳಿಸುವ ಕೆಲಸ ಇಲಾಖೆಯಲ್ಲಿ ಆಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಮುಖ್ಯ ಶಿಕ್ಷಕ ಮಕ್ಕಳಿoದ ಮೊಟ್ಟೆಗೆ ಹಣ ವಸೂಲಿ ಮಾಡುತ್ತಿದ್ದ ಕುರಿತಾಗಿ ದೂರು ಕೇಳಿ ಬರುತ್ತಿದೆ. ಈ ಹಿಂದಿನ ಶಾಲೆಯಲ್ಲೂ ಎಣ್ಣೆ ಪ್ಯಾಕೆಟ್ ಕದ್ದು ತೆಗೆದುಕೊಂಡು ಹೋದ ದೂರು ಈ ಶಿಕ್ಷಕನ ಮೇಲಿದೆ ಎನ್ನಲಾಗಿದೆ.

ಶಾಲೆಯ ಅಕ್ಕಿ,ತೆoಗಿನಕಾಯಿ ಕದ್ದು ತೆಗೆದುಕೊಂಡು ಹೋಗುವುದು ಇದೇ ಚಾಳಿ ಆಗಿದೆ ಎಂದು ಆರೋಪವಿದೆ.

ಈ ಶಾಲೆಗೆ 2023 ರಲ್ಲಿ ಸರ್ವತೋಮುಖ ಅಭಿವೃದ್ಧಿ ಗುಣಾತ್ಮಕ ಕಲಿಕೆಯನ್ನು ಗುರುತಿಸಿ ಶಿಕ್ಷಣ ಇಲಾಖೆ ತಾಲೂಕು ಉತ್ತಮ ಶಾಲೆ ಪ್ರಶಸ್ತಿಯನ್ನು ನೀಡಿದೆ.ಇದಕ್ಕೆ ಮೊದಲಿದ್ದ ಶಿಕ್ಷಕಿಯ ಶ್ರಮ ಕಾರಣವಾಗಿರುತ್ತದೆ.

ಈ ಮುಖ್ಯ ಶಿಕ್ಷಕನ ಬಗ್ಗೆ ಹಣದ ಅವ್ಯವಹಾರದ ಬಗ್ಗೆ ಇನ್ನಾದರೂ ಇಲಾಖೆ ವಿಚಾರಣೆ ಕೈಗೊಳ್ಳುತ್ತದೇಯೇ ಇಲ್ಲವೇ…??? ಕಾದು ನೋಡಬೇಕಿದೆ.

ಸರ್ಕಾರಿ ಶಾಲೆಗಳ ಉಳಿಯುವಿಕೆಯಲ್ಲಿ ಪ್ರಾಮಾಣಿಕ ಶಿಕ್ಷಕರುಮುಖ್ಯ. ಆದರೆ ಇಲ್ಲಿ ಮುಖ್ಯ ಶಿಕ್ಷಕನ ಉಪಟಳದಿಂದ ಸರಿಯಾಗಿ ಪಾಠ ಮಾಡದೇ ಇರುವುದರಿಂದ 14 ಮಕ್ಕಳಿರುವ ಶಾಲೆ ಬಾಗಿಲು ಹಾಕುವ ಪರಿಸ್ಥಿತಿಗೆ ಬಂದಿದೆ ಎಂಬ ಆರೋಪಗಳು ಕೇಳಿಬಂದಿದೆ.

ಅದು ಅಲ್ಲದೇ 65 ವರ್ಷದ ಹಳೆಯ ಶಾಲೆ, ಕಟ್ಟಡ ಆಗಿದ್ದು,ಮೇಲ್ಛಾವಣಿ ದುರಸ್ತಿ ಆಗಬೇಕಿದೆ.ಆದರೆ ಈ ಮುಖ್ಯ ಶಿಕ್ಷಕ ಶಾಲೆಯೇ ಬಿದ್ದು ಹೋಗುವ ಹಾಗಿದೆ ಎಂದು ಸುಳ್ಳು ವದoತಿ ಹಬ್ಬಿಸಿರುವುದು ಗ್ರಾಮಸ್ಥರಿಗೆ ಬೇಸರವನ್ನುoಟು ಮಾಡಿದೆ.

ಇಷ್ಟೇಲ್ಲಾ ಘಟನೆಗಳು ನಡೆದರೂ ಈ ಭಾಗದ ಸಿ.ಅರ್. ಪಿ ಶಾಲೆಗೆ ಭೇಟಿ ಮಾಡುತ್ತಿಲ್ಲವೇ ಎಂಬ ಪ್ರಶ್ನೆಯಾಗಿದೆ?

ಈ ಶಾಲೆಯಲ್ಲಿನ ಆರೋಪಗಳ ಕುರಿತಾಗಿ ಶಿಕ್ಷಣ ಸಚಿವರು ಗಮನಹರಿಸುವ ಮೂಲಕ ಕ್ರಮಕ್ಕೆ ಮುಂದಾಗುತ್ತಾರ ಎಂಬ ಪ್ರಶ್ನೆಯಾಗಿದೆ?

Author