ಶಿರಾಳಕೊಪ್ಪ | ಯುವತಿ ಕಾಣೆ: ಪತ್ತೆಗೆ ಮನವಿ

ಶಿವಮೊಗ್ಗ

ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳುವಾಣಿ ಗ್ರಾಮದ ಕೀರ್ತನಾ ಎಂಬ 20 ವರ್ಷದ ಯುವತಿ ಅ.23 ರಂದು ಮನೆ ಬಳಕೆ ವಸ್ತು ತರಲೆಂದು ಶಿರಾಳಕೊಪ್ಪಕ್ಕೆ ಹೋದವರು ಮನೆಗೆ ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈಕೆ 5.5 ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋಧಿಮೈಬಣ್ಣ, ಕೋಲುಮುಖ ಹೊಂದಿದ್ದು, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ.

ಈ ಯುವತಿಯ ಕುರಿತು ಸುಳಿವು ಇದ್ದಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ದೂ.ಸಂ.: 8722983310, 9480803367 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ

Author