ಶಿವಮೊಗ್ಗದಲ್ಲಿ ಅಖಿಲ ಕರ್ನಾಟಕ ಬಬ್ಬೂರುಕಮ್ಮೆ ಬ್ರಾಹ್ಮಣ ಮಹಾ ಸಮ್ಮೇಳನ

ಶಿವಮೊಗ್ಗ

ಶಿವಮೊಗ್ಗ ಅಖಿಲ ಕರ್ನಾಟಕ ಬಬ್ಬೂರುಕಮ್ಮೆ ಬ್ರಾಹ್ಮಣ ಮಹಾ ಸಮ್ಮೇಳನ ಜನವರಿ : 23, 24 ರಂದು ಗಾಯತ್ರಿ ಕಲ್ಯಾಣ ಮಂದಿರದಲ್ಲಿ ನಡೆಯಲಿದೆ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮ್ಮೇಳನಾಧ್ಯಕ್ಷ ಎ ವಿ ಪ್ರಸನ್ನ, ರಾಜ್ಯ ಸಮ್ಮೇಳನದ ಯಶಸ್ಸಿಗೆ ಅನೇಕ ಸಮಿತಿಗಳನ್ನು ರಚಿಸಲಾಗಿದ್ದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಯ ಬಟ್ಟೂರುಕಮ್ಮೆ ಸಮಿತಿಯ ಸದಸ್ಯರುಗಳು ಈ ಆಡಳಿತ ಮಂಡಳಿಯ ಭಾಗವಾಗಿರುತ್ತಾರೆ. ಇವೆಲ್ಲದರ ಜೊತೆಗೆ ಸಮ್ಮೇಳನದ ಯಶಸ್ವಿಗೆ ಅನೇಕ ಕಾರ್ಯಕಾರೀ ಸಮಿತಿಗಳನ್ನು ರಚಿಸಲಾಗಿದ್ದು ಶಿವಮೊಗ್ಗ, ಭದ್ರಾವತಿ ಮತ್ತು ಎಲ್ಲಾ ಜಿಲ್ಲೆ ತಾಲೂಕುಗಳ ಸಮಿತಿ ಸದಸ್ಯರುಗಳನ್ನು ಸೇರಿಸಿ ವಿಶಿಷ್ಟವಾದ ತಂಡ ರಚಿಸಲಾಗಿದೆ ಎಂದರು.

ಬಬ್ಬೂರು ಕಮ್ಮೆ ಸಮುದಾಯವು ಭಾರತದಾದ್ಯಂತ ಹಲವಾರು ಪ್ರದೇಶಗಳಲ್ಲಿ ಉಪ-ಪಂಗಡಗಳಾಗಿ ಹರಡಿಕೊಂಡಿದ್ದು, ಬ್ರಾಹ್ಮಣ ಸಮಾಜದ ಸನಾತನ ಪರಂಪರೆಯನ್ನು ಅನುಸರಿಸುವವರಾಗಿರುತ್ತಾರೆ, ಉದ್ದೇಶಿತ ಕಾರ್ಯಕ್ರಮವು ರಾಜ್ಯ ಮಟ್ಟದ ಸಮ್ಮೇಳನವಾಗಲಿದ್ದು ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಬಟ್ಟೂರುಕಮ್ಮ ಸಮುದಾಯದ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವದ ಉದ್ದೇಶವನ್ನು ಹೊಂದಿದೆ ಎಂದರು.

ನಮ್ಮ ಉಪ ಪಂಗಡಗಳ ಒಗ್ಗೂಡುವಿಕೆಯಿಂದ ಸಮಸ್ತ ಬ್ರಾಹ್ಮಣ ಶಕ್ತಿಯನ್ನು ಜಾಗೃತಗೊಳಿಸಿ ತನ್ಮೂಲಕ ದೇಶದ ಅಭಿವೃದ್ಧಿಗಾಗಿ ಹಾಗೂ ಸನಾತನ ಧರ್ಮದ ಉದ್ಧಾರಕ್ಕಾಗಿ ಮತ್ತು ಸಂಸ್ಕಾರದ ಪ್ರಚಾರಕ್ಕಾಗಿ ನಾವು ಈ ರಾಜ್ಯ ಸಮ್ಮೇಳನವನ್ನು ಮಾಡಬೇಕೆಂಬ ಆಶಯ ಹೊಂದಿದ್ದೇವೆ. ಇದರ ಜೊತೆಗೆ ನಮ್ಮ ಸಮುದಾಯ ಪ್ರತಿಭಾನ್ವಿತರಿಗೆ (ಶಿಕ್ಷಣ, ವೇದ, ಸಂಗೀತ, ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ) ಪುರಸ್ಕಾರ, ಧಾರ್ಮಿಕ ಕಾರ್ಯಕ್ರಮಗಳು, ಪ್ರಸ್ತುತ ಸಮಾಜಕ್ಕೆ ಬೇಕಾಗುವ ಮಾರ್ಗದರ್ಶಿ ವಿಷಯಗಳನ್ನು ಒಳಗೊಂಡ ಗೋಷ್ಠಿಗಳು, ಹಿರಿಯರಿಂದ ಯುವಕರಿಗೆ ಮಾರ್ಗದರ್ಶನ, ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ, ಶಿವಮೊಗ್ಗ ಜಿಲ್ಲಾ ಮತ್ತು ರಾಜ್ಯದ ಪ್ರತಿಷ್ಠಿತ ಕಲಾವಿದರಿಂದ ವಿನೂತನ ಸಾಂಸ್ಕೃತಿಕ ಮತ್ತು ಮನರಂಜನೆ ಕಾರ್ಯಕ್ರಮಗಳು, ಇನ್ನೂ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ ಎಂದರು..

ಈ ಸಂಧರ್ಭದಲ್ಲಿ ಬಿಡುಗಡೆಯಾಗುವ ಸ್ಮರಣ ಸಂಚಿಕೆಯ ಮುಖಾಂತರ ಈ ಸಮ್ಮೇಳನವನ್ನು ಸದಾ ನೆನಪಿನಲ್ಲಿಡುವಂತೆ ಮಾಡಲಾಗುತ್ತದೆ ಎಂದರು ಮಾ ಸ ನಂಜುಂಡ ಸ್ವಾಮಿ, ಜಿ ವಿ ರಮೆಶ್ ಬೆಂಗಳೂರು, ಎಚ್ ಎಸ್ ನಂಜುಂಡಯ್ಯ ಭದ್ರಾವತಿ, ಪ್ರಕಾಶ್ ಭಟ್, ಎಸ್ ಆರ್ಎಸ್ಎಮೃಶ್ ಜೋಯ್ಸ್ ಬೆಂಗಳೂರು , ನಾಗೇಶ್ ಶಿವಮೊಗ್ಗ, ಭದ್ರಾವತಿಯ ವಿದ್ಯಾಶಂಕರ್ ಹಾಜರಿದ್ದರು.

Author