ಶಿವಮೊಗ್ಗ | ನ. 13 ರಿಂದ ಡಿ.13ರ ವರೆಗೆ : ಚಿಂತನ ಕಾರ್ತಿಕ

ಶಿವಮೊಗ್ಗ

ಶಿವಮೊಗ್ಗ, ಬಸವಕೇಂದ್ರದ 20ನೇ ವರ್ಷದ ಚಿಂತನ ಕಾರ್ತಿಕ ನವೆಂಬರ್ 13 ರಿಂದ ಡಿಸೆಂಬರ್ 13 ರವರೆಗೆ . ಬಸವ ಮರುಳಸಿದ್ಧ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಗರದ ವಿವಿಧೆಡೆ ಒಂದು ತಿಂಗಳು ನಿರಂತರವಾಗಿ ನಡೆಯಲಿದೆ. ನಾಡಿನ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಅನನ್ಯ ವ್ಯಕ್ತಿತ್ವದೊಂದಿಗೆ ಮುಖಾಮುಖಿ ಆಗುವ ನಿಟ್ಟಿನಲ್ಲಿ ಈ ಭಾರಿಯ ಚಿಂತನ ಕಾರ್ತಿಕದ ಕಾರ್ಯಕ್ರಮ ವಿನ್ಯಾಸಗೊಂಡಿದೆ.

ಡಿಸೆಂಬರ್ 12 ಮತ್ತು 13 ರಂದು ಕ್ರಮವಾಗಿ ಸಮಾರೋಪ ಸಮಾರಂಭ ಹಾಗೂ ಗಣಪರ್ವ ಜರುಗುವುದರೊಂದಿಗೆ ಈ ಬೃಹತ್ ಚಿಂತನ ಕಾರ್ತಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.20ನೇ ವರ್ಷದ ಚಿಂತನ ಕಾರ್ತಿಕ ಉದ್ಘಾಟನಾ ಸಮಾರಂಭ ಇದೇ ತಿಂಗಳ 13ರ ಶುಕ್ರವಾರ ಸಂಜೆ 6.30ಕ್ಕೆ ವೆಂಕಟೇಶ ನಗರದಲ್ಲಿರುವ ಬಸವಕೇಂದ್ರದಲ್ಲಿ ನಡೆಯಲಿದೆ. ಈ ಬಾರಿಯ ಚಿಂತನ ಕಾರ್ತಿಕವನ್ನು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಎಂ.ವಿ. ಧನಂಜಯ ಉದ್ಘಾಟಿಸಲಿದ್ದಾರೆ. ಬಸವಕೇಂದ್ರ ಅಧ್ಯಕ್ಷ ಶರಣ ಜಿ. ಬಿನಕಪ್ಪ ಅಧ್ಯಕ್ಷತೆವಹಿಸಲಿದ್ದಾರೆ.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಕೆ.ಸಿ. ಶಶಿಧರ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶರಣ ಸಿ.ಜಿ. ಮಧುಸೂಧನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶರಣ ಎಸ್. ಜಿ. ಶಶಿಧರ್, ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಶರಣ ಎಂ. ಆರ್. ಜಯದೇವಪ್ಪ ಕಾರ್ಯಧ್ಯಕ್ಷರು ಉಪಸ್ಥಿತರಿರುತ್ತಾರೆ.

ಈ ದಿನದ ಕಾರ್ಯಕ್ರಮವು ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಬಸವಕೇಂದ್ರ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ.

Author