ಶಿವಮೊಗ್ಗ | ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿ ಅಡ್ಡಗಟ್ಟಿ ಕೊಲೆ ಯತ್ನ

ಬೈಕಿನಿಂದ ಕೆಳಗೆ ಬಿದ್ದ ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿ ಮತ್ತು ಆತನ ಮಕ್ಕಳು ಮನಬಂದಂತೆ ಥಳಿಸಿದ್ದಾರೆ. ತದನಂತರ ಆರೋಪಿ ಇವನನ್ನು ಸಾಯಿಸಿಬಿಡಿ ಎಂದು ಕೂಗಿದಾಗ, ಆತನ ಮಗ ಕಾರಿನಿಂದ ಕಬ್ಬಿಣದ ರಾಡ್ ತಂದಿದ್ದಾನೆ. ಅದನ್ನು ಕಸಿದುಕೊಂಡ ಮತ್ತೊಬ್ಬ ಮಗ ದೂರುದಾರರ ತಲೆಯ ಹಿಂಭಾಗ, ಹಣೆಯ ಎಡಭಾಗ ಹಾಗೂ ಎರಡು ಮೊಣಕೈಗಳಿಗೆ ಬಲವಾಗಿ ಹೊಡೆದು ರಕ್ತಗಾಯಗೊಳಿಸಿದ್ದಾನೆ. ದೂರುದಾರರು ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ, ಸತ್ತಿದ್ದಾನೆ ಎಂದು ಭಾವಿಸಿದ ಹಂತಕರ ಗುಂಪು ಕಾರಿನಲ್ಲಿ ಪರಾರಿಯಾಗಿದೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ತಕ್ಷಣವೇ […]

Continue Reading

ಬುರ್ಖಾ ಧರಿಸಿ ರಸ್ತೆಯಲ್ಲಿ ಓಡಾಡುತ್ತಿದ್ದ ಮೂವರು ಯುವಕರು ದೊಡ್ಡಪೇಟೆ ಪೊಲೀಸರ ವಶಕ್ಕೆ

ಘಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ದೊಡ್ಡಪೇಟೆ ಠಾಣೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.ಪೊಲೀಸರ ವಿಚಾರಣೆ ವೇಳೆ, ಸೆಂಟ್ರಲ್ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೋರ್ವನ ಅಣತಿಯಂತೆ ಆತನ ಪತ್ನಿಗೆ ಬೆದರಿಕೆ ಹಾಕಲು ಬಂದಿರುವ ಮಾಹಿತಿ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

Continue Reading

ಶಿವಮೊಗ್ಗ | ಮನೆಗೆ ನುಗ್ಗಿ ವ್ಯಕ್ತಿಯ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ, ಜೀವ ಬೆದರಿಕೆ

ಈ ಭೀಕರ ದಾಳಿಗೆ ನಿಖರವಾದ ಕಾರಣ ಏನೆಂಬುದು ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

Continue Reading