ಬೆಂಗಳೂರು | 15 ಸಾವಿರ ಶಿಕ್ಷಕರ ನೇಮಕಾತಿ : ಅಭ್ಯರ್ಥಿಗಳ ಗೊಂದಲ ನಿವಾರಣೆಗೆ FAQ ಪ್ರಕಟ

ಅಧಿಸೂಚನೆ ಹಾಗೂ FAQ ಓದಿದ ನಂತರವೂ ಯಾವುದೇ ಗೊಂದಲ ಅಥವಾ ಅನುಮಾನ ಬಗೆಹರಿಯದಿದ್ದಲ್ಲಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 080-22483145, 080-22483140 ಅಥವಾ ಮೊಬೈಲ್ ನಂಬರ್ 9449588020 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಪಾರದರ್ಶಕ ನೇಮಕಾತಿಗೆ ಕ್ರಮ : ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡುವುದು, ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಅವಕಾಶ ಕಲ್ಪಿಸುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಡುವುದು ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ […]

Continue Reading