ನಿಖಿಲ್ ಕುಮಾರಸ್ವಾಮಿ ನೇತೃತ್ವದ ಬಿಡದಿ ಪಾದಯಾತ್ರೆಗೆ ಶಿವಮೊಗ್ಗ ನಗರ ಜೆಡಿಎಸ್‌ನಿಂದ ಭರ್ಜರಿ ಬೆಂಬಲ

ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಬಿ. ಪ್ರಸನ್ನ ಕುಮಾರ್ ಅವರು, “ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆ ರೈತರ ಹಕ್ಕುಗಳಿಗಾಗಿ ನಡೆಯುತ್ತಿರುವ ನ್ಯಾಯಯುತ ಹೋರಾಟ. ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ದೇವೇಗೌಡರಂತಹ ಹಿರಿಯ ನಾಯಕರು ಪಾಲ್ಗೊಂಡಿರುವುದು ಹೋರಾಟಕ್ಕೆ ಹೆಚ್ಚಿನ ಬಲ ನೀಡಿದೆ. ರೈತರ ಭೂಮಿಯನ್ನು ಕಬಳಿಸುವ ಯಾವುದೇ ಯೋಜನೆಯನ್ನು ನಾವು ಸಹಿಸುವುದಿಲ್ಲ. ಶಿವಮೊಗ್ಗ ನಗರ ಜೆಡಿಎಸ್ ಈ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುತ್ತದೆ. ಸರ್ಕಾರ ತಕ್ಷಣ ಟೌನ್‌ಶಿಪ್ ಯೋಜನೆಯನ್ನು ಕೈಬಿಡಬೇಕು” ಎಂದು ಹೇಳಿದರು. ನಗರ ಜೆಡಿಎಸ್ ಅಧ್ಯಕ್ಷ […]

Continue Reading

ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗಾಗಿ ಪ್ರಧಾನಿ ಮುಂದೆ ಎಚ್.ಡಿ. ದೇವೇಗೌಡರು ಪ್ರತಿಭಟನೆ ನಡೆಸಲಿ : ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಸಲಹೆ

ಹಾಸನ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಲ್ಲಿನ ರೈತರ ಸಮಸ್ಯೆಗಳ ಬಗ್ಗೆ ದೇವೇಗೌಡರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಪುತ್ರ ವ್ಯಾಮೋಹ ಬಿಟ್ಟು ರಾಜ್ಯದ ಜನರ ಸಮಸ್ಯೆಗಳ ಕಡೆ ಗಮನಹರಿಸಬೇಕು, ಕುಮಾರಸ್ವಾಮಿ, ಮತ್ತು ನಿಖಿಲ್ ಅವರನ್ನು ಮೆಚ್ಚಿಸಲು ಧರಣಿ ಕೂರಬೇಡಿ ಎಂದು ಸಲಹೆ ನೀಡಿದರು.

Continue Reading