ರಾಜೀನಾಮೆ ಹಿಂಪಡೆದ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್
‘ಇಂಡಿಗೆ ಮುಖ್ಯಮಂತ್ರಿ ಬಂದರೆ ಲಕ್ಷ, ಲಕ್ಷ ಜನ ಸೇರುತ್ತಿರುವನ್ನು ನನ್ನ ರಾಜಕೀಯ ವೈರಿಗಳಿಗೆ ಸಹಿಸಲಾಗಲಿಲ್ಲ. ಶಾಸಕನಾಗಿಯೇ ಇಷ್ಟೊಂದು ಜನರ ಪ್ರೀತಿ, ವಿಶ್ವಾಸ ಗಳಿಸಿರುವಾಗ ಇನ್ನು ಮಂತ್ರಿಯಾದರೆ ವಿಜಯಪುರ ರಾಜಕಾರಣದ ‘ಶಕ್ತಿ ಕೇಂದ್ರ’ ಆಗುತ್ತಾನೆ ಎಂಬ ಕಾರಣಕ್ಕೆ ಆತಂಕಗೊಂಡು ಹಗಲು, ರಾತ್ರಿ ಮಲಗದೇ ಪ್ರಯತ್ನ ಮಾಡಿ ಕೊನೆಗೂ ಸಚಿವ ಸ್ಥಾನ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ, ಅವರಿಗೆ ಒಳ್ಳೆಯದಾಗಲಿ’ ಎಂದು ಹೇಳಿದರು.
Continue Readingಶಿವಮೊಗ್ಗ | ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ
ಯೋಜನೆಯ ಪ್ರಮುಖ ಪ್ರಗತಿ ಮತ್ತು ಸೌಲಭ್ಯಗಳ ವಿವರ ಇಂತಿದೆ: ಪೂರ್ಣಗೊಂಡಿರುವ ಕಾಮಗಾರಿಗಳು: ಕೋಟೆಗಂಗೂರಿನ ರೈಲ್ವೆ ನಿಲ್ದಾಣದ ಕಟ್ಟಡ (Station Building) ಹಾಗೂ ಸೇವಾ ಕಟ್ಟಡ (Service Building) ನಿರ್ಮಾಣ ಕಾರ್ಯ; ರೈಲು ಬೋಗಿಗಳ ದುರಸ್ತಿ ಮತ್ತು ನಿರ್ವಹಣೆಗೆ ಅಗತ್ಯವಿರುವ ಸಿಕ್ ಲೈನ್ ಕವರ್ಡ್ ಶೆಡ್‌ನ ಪಾಯದ (Foundation) ಕಾಮಗಾರಿ ಪೂರ್ಣಗೊಂಡಿದೆ. ಚಾಲನೆಯಲ್ಲಿರುವ ಕಾಮಗಾರಿಗಳು: 24 ಬೋಗಿಗಳ ಸುಸಜ್ಜಿತ ರೈಲುಗಳನ್ನು ತಪಾಸಣೆ ಮಾಡುವ 2 ಫಿಟ್ ಲೈನ್‌ಗಳು (Pit Lines), 2 ಸ್ಟೇಬ್ಲಿಂಗ್ ಲೈನ್‌ಗಳು (Stabling Lines), 1 […]
Continue Readingಶಿವಮೊಗ್ಗದಿಂದ ಜೋಗ್‌ಫಾಲ್ಸ್‌ಗೆ ಕೆಎಸ್‌ಆರ್‌ಟಿಸಿ ವಿಶೇಷ ಪ್ಯಾಕೇಜ್ ಬಸ್ ಸೇವೆ ಆರಂಭ
ಶಿವಮೊಗ್ಗದಿಂದ ಹೊರಡುವ ಸಮಯ ಬೆಳಿಗ್ಗೆ 08:00 ಗಂಟೆ, ಜೋಗ್‌ಫಾಲ್ಸ್ ತಲುಪುವ ಸಮಯ ಮಧ್ಯಾಹ್ನ 02 ಗಂಟೆ.ಜೋಗ್‌ಫಾಲ್ಸ್‌ನಿಂದ ಹಿಂತಿರುಗುವ ಸಮಯ ಸಂಜೆ 05 ಗಂಟೆ. ಶಿವಮೊಗ್ಗ ತಲುಪುವ ಸಮಯ ರಾತ್ರಿ 07:30 ಗಂಟೆ.ಪ್ರಯಾಣ ದರ: ವಯಸ್ಕರಿಗೆ ರೂ. 450/-ಮಕ್ಕಳಿಗೆ: ರೂ.250/- ಮಳೆಗಾಲದಲ್ಲಿ ಸುಂದರ ಜಲಪಾತ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳನ್ನು ವೀಕ್ಷಿಸಲು ಬಯಸುವ ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ವಿಶೇಷ ಪ್ಯಾಕೇಜ್ ಸಾರಿಗೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಕೆಎಸ್ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
Continue Readingಸಾಗರ | ಬಸ್ಸಿನಲ್ಲಿ ಗಾಢ ನಿದ್ರೆಗೆ ಜಾರಿದ ಮಹಿಳೆ: 17 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ
ಕಳ್ಳತನವಾದ ಒಟ್ಟು ಸ್ವತ್ತುಗಳಲ್ಲಿ ₹5 ಲಕ್ಷ ಮೌಲ್ಯದ ಎರಡು ಎಳೆಯ ಮಾಂಗಲ್ಯ ಸರ, ₹5 ಲಕ್ಷ ಮೌಲ್ಯದ ಲಾಂಗ್ ಚೈನ್, ₹4 ಲಕ್ಷ ಮೌಲ್ಯದ ಎರಡು ಬಳೆಗಳು, ₹1.40 ಲಕ್ಷ ಮೌಲ್ಯದ ಜುಮುಕಿ-ಬೆಂಡೋಲೆ, ₹80,000 ಮೌಲ್ಯದ ಬ್ರೇಸ್‌ಲೆಟ್, ₹60,000 ಮೌಲ್ಯದ ಮೂರು ಉಂಗುರಗಳು, ₹30,000 ಮೌಲ್ಯದ ಓಲೆಗಳು ಹಾಗೂ ₹45,000 ನಗದು ಸೇರಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕುಟುಂಬದೊಂದಿಗೆ ಚರ್ಚಿಸಿ ತಡವಾಗಿ ದೂರ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Readingಶಿವಮೊಗ್ಗ | ಆ. 8 : ಶಾಸಕರ ಕಚೇರಿ ಎದುರು ನಾಗರಿಕ ಹಿತರಕ್ಷಣಾ ವೇದಿಕೆ ಧರಣಿ
ನಗರಕ್ಕೆ, ಹೆಚ್ಚಿನ ಸಾಮರ್ಥ್ಯದ ನೀರು ಶುದ್ದೀಕರಣ ಘಟಕ, ಸರಕಾರ ಪುಸ್ತಾವನೆ ಸಲ್ಲಿಸಿಲ್ಲ : ಶಿವಮೊಗ್ಗದಲ್ಲಿ ಕೈಗೊಳ್ಳಬೇಕಾದ ಅತ್ಯಂತ ಪ್ರಮುಖ ಹಾಗೂ ಅತ್ಯಗತ್ಯಗಳಲ್ಲಿ ಇದೂ ಒಂದಾಗಿದೆ. ಶಿವಮೊಗ್ಗದ ಮನೆಗಳಿಗೆ ಸರಬರಾಜು ಆಗುವ ನೀರಿನ ಕಳಪೆ ಗುಣಮಟ್ಟ ಮತ್ತು ಕಡಿಮೆ ಪುಮಾಣದ ಬಗ್ಗೆ, ನಗರದ ಪ್ರತಿಯೊಬ್ಬ ನಾಗರಿಕರಿಗೂ ಅರಿವಿದೆ. ಈ ಯೋಜನೆಯ ಕುರಿತು ಚರ್ಚಿಸುವುದು ತುರ್ತು ಅಗತ್ಯವಾಗಿತ್ತು. ಕನಿಷ್ಠ ವೆಚ್ಚದಲ್ಲಿ ಪ್ರಸ್ತುತ ವ್ಯವಸ್ಥೆಯನ್ನು ಹೇಗೆ ಉನ್ನತೀಕರಿಸಬಹುದು ಎಂಬುದರ ಕುರಿತು ಚರ್ಚಿಸಬೇಕಿದೆ. ಈ ಸಂಬಂಧವಾಗಿ ಮಾದರಿ ಘಟಕಗಳಿಗೆ ಭೇಟಿ ನೀಡುವ ವ್ಯವಸ್ಥೆ […]
Continue Readingಶಿವಮೊಗ್ಗ | ಮಧು ಬಂಗಾರಪ್ಪ ಜಿಲ್ಲಾ ಪ್ರವಾಸ ಆ. 7ರಿಂದ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್
ಅಜೀಮ್ ಪ್ರೇಮ್‌ಜಿ ಅವರಿಂದ ಶಾಲೆಗಳಲ್ಲಿ ಮೊಟ್ಟೆ ವಿತರಿಸಲು 1,580 ಕೋಟಿ ರೂ. ನೆರವು ತಂದಿದ್ದಾರೆ ಹಾಗೂ ಸಿಎಸ್‌ಆರ್ ಫಂಡ್‌ನಿಂದ ಕೆಪಿಎಸ್ ಶಾಲೆಗಳಿಗೆ ಹಣ ಒದಗಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಈಗಲೂ ಅವರಿಗೆ ಶಿಕ್ಷಣ ಖಾತೆಯೇ ಸಿಗಬಹುದು ಎನ್ನುವ ನಿರೀಕ್ಷೆ ನಮಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 1.2 ಲಕ್ಷ ಮತದಾರರು ಡಿಲೀಟ್? ಜಿಲ್ಲೆಯಲ್ಲಿ ಸುಮಾರು 120000 ವೋಟರ್ ಐಡಿ ಕಡಿಮೆಯಾಗಿವೆ. ಈ ಹಿಂದೆ ಅನೇಕ ಕಡೆ ಜೀವಂತ ಇದ್ದವರನ್ನು ಸಹ ಮೃತಪಟ್ಟಿದ್ದಾರೆ ಎಂದು ತೋರಿಸಲಾಗಿತ್ತು. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ […]
Continue Readingಶಿವಮೊಗ್ಗ | ಆಗಸ್ಟ್ 10 ರಂದು ‘ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ’ ಕಾರ್ಯಾಚರಣೆ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ
ಆದ್ದರಿಂದ 1 ವರ್ಷದಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಉಚಿತವಾಗಿ ನೀಡಲಾಗುವ ಆಲ್ಬೆಂಡಜೋಲ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು.ಆಗಸ್ಟ್ 10 ರಂದು ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಶಿಕ್ಷಕರು ಮಾತ್ರೆಗಳನ್ನು ನೀಡಲಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡಿ ಮಾತ್ರೆ ವಿತರಿಸಲಿದ್ದಾರೆ ಎಂದು ತಿಳಿಸಿದರು.
Continue Reading




