ಶಿಕಾರಿಪುರ | ಅಡಿಕೆ ಕಳ್ಳತನ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ಶಿಕಾರಿಪುರ ಇನ್ಸ್‌ಪೆಕ್ಟರ್‌ ಸಂತೋಷ್‌ ಎಂ.ಪಾಟೀಲ್‌, ಶಿರಾಳಕೊಪ್ಪ ಪಿಎಸ್ಐ ಪ್ರಶಾಂತ ಕುಮಾರ ಟಿ.ಬಿ. ನೇತೃತ್ವದ ತಂಡವು ತನಿಖೆ ನಡೆಸಿತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಕಳುವಾಗಿದ್ದ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ್ದ ಗೂಡ್ಸ್‌ ವಾಹನವನ್ನು ವಶಕ್ಕೆ ಪಡೆದ ಶಿರಾಳಕೊಪ್ಪ ಠಾಣೆ ಪೊಲೀಸರು. ಆರೋಪಿ 1: ಮಹಮ್ಮದ್ ಮನ್ಸೂರ್ (30), ಕುಂಬಾರ್ ಗುಂಡಿ ಕೊಪ್ಪಲು, ಶಿಕಾರಿಪುರ ಟೌನ್.ಆರೋಪಿ 2: ಷಹಾದ ಉಲ್ಲಾ (35), ಗಬ್ಬೂರು, ಶಿಕಾರಿಪುರ […]

Continue Reading

ಸಾಗರ | ಬೀಗ ಹಾಕಿದ್ದ ಮನೆಯಿಂದ 50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳ್ಳತನ

ಇಂದು ಮನೆಗೆ ಮರಳಿದ ಕುಟುಂಬಸ್ಥರಿಗೆ ಬಾಗಿಲು ಮುರಿದಿರುವುದು ಮತ್ತು ಮನೆಯೊಳಗಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ. ಕೂಡಲೇ ನಂದನ ಕುಮಾರ್ ಅವರು ಸಾಗರ ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

ಶಿವಮೊಗ್ಗ | ಪೊಲೀಸರು, ತಮ್ಮ ಆರೋಗ್ಯ ಜೋಪಾನ ಮಾಡಿಕೊಳ್ಳಬೇಕು : ಎಸ್ ಪಿ ಮನವಿ

ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾ ಎ.ಜಿ. ರಕ್ಷಣಾಧಿ ಕಾರಿ ಕಾರಿಯಪ್ಪ, ಡಿ.ವೈ.ಎಸ್.ಪಿ. ಬಾಬು ಅಂಜನಪ್ಪ, ಜಿಲ್ಲಾ ಪೊಲೀಸ್ ಇಲಾಖೆಯ ಆಪ್ತ ಸಮಾಲೋಚಕರಾದ ವಿ.ಪಿ. ಮಲ್ಲಪ್ಪ, ಬಿ.ಎಸ್.ಎನ್.ಎಲ್. ನಿವೃತ್ತ ಅಧಿಕಾರಿ ಹೆಚ್.ಸಿ. ಕೃಷ್ಣಮೂರ್ತಿ, ಸರ್ಜಿ ಆಸ್ಪತ್ರೆಯ ಡಯಟಿಷಿಯನ್ ಶ್ರೇಯಸ್, ರಾಘವೇಂದ್ರ ಯೋಗ ಕೇಂದ್ರದ ಸಂಸ್ಥಾಪಕರು, ಯೋಗ ತಜ್ಞರು ಯೋಗ ಸಾಮ್ರಾ ಎಸ್.ಗೋಪಾಲಕೃಷ್ಣ, ಹೆಚ್ಚುವರಿ ಎಸ್.ಪಿ. ಆಪ್ತಸಹಾಯಕರು ಹಾಗೂ ಕಾರ್ಯಕ್ರಮದ ನಿರೂಪಕಿಯಾದ ಅನಿತಾ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಸಕಾರ್ಯಕ್ರಮದಲ್ಲಿ ಮೂತ್ರಕೋಶ ತಜ್ಞ ಡಾ. ಚಂದ್ರಶೇಖರ್ ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರು ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಜಂಟಿ ಆಪರೇಷನ್ ಫುಟ್ ಪಾತ್ ತೆರವು ಕಾರ್ಯಾಚರಣೆ ಯಶಸ್ವಿ

ಸತತವಾಗಿ ಒಂದೆರಡು ತಿಂಗಳಿಂದ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರು ತಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕರಾದ ದೇವರಾಜ್ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪರಿಶ್ರಮದ ಸಹಕಾರದ ಫಲ ಕಾರ್ಯಾಚರಣೆಯಿಂದಾಗಿ ಆಲ್ಕೋಳ ವೃತ್ತದಿಂದ ಬಂಗಾರಪ್ಪ ರಸ್ತೆ ಹಾಗೂ ಡಿವಿಜಿ ವೃತ್ತದವರೆಗೂ ಈ ರಸ್ತೆಯಲ್ಲಿ ಆಪರೇಷನ್ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಒಂದು ಕಾರ್ಯಾಚರಣೆಯಲ್ಲಿ ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ, ಅಧಿಕಾರಿಗಳು, ಸಿಬ್ಬಂದಿಗಳು , ಪಶ್ಚಿಮ […]

Continue Reading

ಹೊಸನಗರ | ಬಾಕಿ ಹಣ ಕೇಳಿದ್ದಕ್ಕೆ ಫ್ಯಾನ್ಸಿ ಸ್ಟೋರ್ ನೌಕರನ ಮೇಲೆ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ ; ದೂರು ದಾಖಲು

ಆರೋಪಿ ರಮೇಶ್ ತನ್ನ ಅಂಗಡಿಗೆ ಮಾಜೀಷಾ ಫ್ಯಾನ್ಸಿ ಸ್ಟೋರ್‌ನಿಂದ ಆಗಾಗ್ಗೆ ವಸ್ತುಗಳನ್ನು ಖರೀದಿಸುತ್ತಿದ್ದ. ಆದರೆ, ಆ ವಸ್ತುಗಳ ಬಾಕಿ ಹಣವನ್ನು ಪಾವತಿಸಿರಲಿಲ್ಲ ಎನ್ನಲಾಗಿದೆ. ಹಲವು ಬಾರಿ ಹಣ ಕೇಳಿದರೂ ಆತ ಕೊಟ್ಟಿರಲಿಲ್ಲ. ಏಪ್ರಿಲ್ 27ರಂದು ಮಾಜೀಷಾ ಫ್ಯಾನ್ಸಿ ಸ್ಟೋರ್‌ನ ಮಾಲೀಕರಾದ ಬಾಲು ಭಾರತಿ ಅವರು ಊರಿನಲ್ಲಿ ಇರಲಿಲ್ಲ. ಈ ವೇಳೆ ಅಂಗಡಿಯ ಸಂಪೂರ್ಣ ಉಸ್ತುವಾರಿಯನ್ನು ವಿನಯ್ ನೋಡಿಕೊಳ್ಳುತ್ತಿದ್ದರು.​ಮಧ್ಯಾಹ್ನ 12 ಗಂಟೆ ಸುಮಾರಿಗೆ ಏಕಾಏಕಿ ಅಂಗಡಿಯೊಳಗೆ ನುಗ್ಗಿದ ರಮೇಶ್, ವಿನಯ್‌ಗೆ ಅವಾಚ್ಯ ಶಬ್ದಗಳಿಂದ ಬೈದು, ಎಡ ಕಪಾಳಕ್ಕೆ ಬಲವಾಗಿ […]

Continue Reading

ಶಿವಮೊಗ್ಗ | ಎನ್.ಎಸ್.ಯು.ಐ ನಿಂದ ಬೃಹತ್ ಪ್ರತಿಭಟನೆ ; ಕುವೆಂಪು ವಿವಿ ಕುಲಪತಿ ಕಚೇರಿ ಧ್ವಂಸ

ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಕುಲಪತಿಗಳು ಸ್ಪಂದಿಸದೆ, ಕೇವಲ ಅಧಿಕಾರಿಗಳ ಆಂತರಿಕ ಕಚ್ಚಾಟದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಗಂಭೀರವಾಗಿ ಆರೋಪಿಸಿದರು. ವಿಶ್ವವಿದ್ಯಾಲಯವು ಏಕಾಏಕಿ ಪರೀಕ್ಷಾ ಶುಲ್ಕ ಹಾಗೂ ಪ್ರವೇಶ ಶುಲ್ಕವನ್ನು ಸಾವಿರಾರು ರೂಪಾಯಿಗಳಷ್ಟು ಹೆಚ್ಚಿಸಿರುವುದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನವಾಗಿದೆ. ಇದರ ಜೊತೆಗೆ ಡಿಜಿಟಲ್ ಮೌಲ್ಯಮಾಪನದಲ್ಲಿನ ತಾಂತ್ರಿಕ ಲೋಪಗಳಿಂದಾಗಿ ಫಲಿತಾಂಶಗಳಲ್ಲಿ ಗೊಂದಲ ಏರ್ಪಟ್ಟಿದ್ದು, ಪಾಸ್ ಆದವರು ಫೇಲ್ ಎಂದು ತೋರಿಸುತ್ತಿರುವುದು ವಿದ್ಯಾರ್ಥಿಗಳ ನಿದ್ದೆ ಗೆಡಿಸಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು […]

Continue Reading

ಶಿವಮೊಗ್ಗ | ಇಬ್ಬರು ಸರಗಳ್ಳರು ಈಗ ಪೊಲೀಸರ ಅತಿಥಿ

ಕಾರ್ಯಾಚರಣೆ ನಡೆಸಿದ ತಂಡವು ಏಪ್ರಿಲ್​ 24 ರಂದು ಆರೋಪಿಗಳಾದ ಮನೋಜ್ ಶಿರಮಣ ಸಿ. ಮತ್ತು ವಿಜಯ್ ಕುಮಾರ್ ಎಂಬುವವರನ್ನು ಬಂಧಿಸಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 40,000/- ರೂ. ಮೌಲ್ಯದ ಸ್ಪ್ಲೆಂಡರ್ ಬೈಕ್ ಹಾಗೂ ಸುಮಾರು 2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

Continue Reading

ಅಂಗಡಿ ರಜಾ ಎಂದು ಬೋರ್ಡ್ ಹಾಕುವ ಮುನ್ನ ಇರಲಿ ಎಚ್ಚರ..!

ಇದನ್ನೇ ಗಮನಿಸಿದ ಕಳ್ಳರು ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಕೈಚಳಕ ತೋರಿದ್ದಾರೆ. ಲಕ್ಷಾಂತರ ಮೌಲ್ಯದ ದೋಚಿದ ಖದೀಮರು ಏಪ್ರಿಲ್ 26ರಂದು ಕುಟುಂಬವು ಪ್ರವಾಸ ಮುಗಿಸಿ ಹಿಂತಿರುಗಿದಾಗ ಮನೆಯ ಮುಂಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಮನೆಯ ಒಳಗಿದ್ದ ಅಲ್ಮೇರಾವನ್ನು ಒಡೆದ ಕಳ್ಳರು, ಸುಮಾರು 22 ಗ್ರಾಂ ತೂಕದ ಚಿನ್ನದ ಸರ ಹಾಗೂ 90,000 ರೂಪಾಯಿ ನಗದನ್ನು ಅಪಹರಿಸಿದ್ದಾರೆ. ಒಟ್ಟು ನಷ್ಟದ ಮೌಲ್ಯ ಲಕ್ಷಾಂತರ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಕಾರ್ಗಲ್ ಪಿಎಸ್‌ಐ ನಾಗರಾಜು, ಶ್ವಾನದಳ ಹಾಗೂ ಬೆರಳಚ್ಚು […]

Continue Reading

ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ಕುಸಿತ ; ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ : ಸಚಿವ ಮಧು ಬಂಗಾರಪ್ಪ

ಹೊಸನಗರ ತಾಲೂಕಿನ ತೀರ್ಥಹಳ್ಳಿ – ಕುಂದಾಪುರ ರಾಷ್ಟ್ರೀಯ ಹೆದ್ದಾರಿ ೫೨ರ ಸರಪಳಿ ೩೮.೦೦ ಕಿ.ಮೀ ನಿಂದ ೪೩.೫೮ ಕಿ.ಮೀ ವರೆಗಿನ ಸುಮಾರು ೫.೫೮ ಕಿ.ಮೀ ಉದ್ದದ ರಸ್ತೆ ಹುಲಿಕಲ್ ಘಾಟ್ ವ್ಯಾಪ್ತಿಯಲ್ಲಿ ಬರಲಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಹೇರ್ ಪಿನ್ ತಿರುವುಗಳ ಸುಧಾರಣೆ: ರಸ್ತೆಯ ಸರಪಳಿ ೪೨.೦೫ ಕಿ.ಮೀ ನಿಂದ ೪೨.೨೫ ಕಿ.ಮೀ ವರೆಗಿನ ಭಾಗವು ಪ್ರಸ್ತುತ ಅತ್ಯಂತ ಕಿರಿದಾದ ಹೇರ್ ಪಿನ್ ತಿರುವುಗಳಿಂದ ಕೂಡಿದ್ದು, ಈ ಭಾಗದ ಸುಧಾರಣೆಗೂ ಆದ್ಯತೆ ನೀಡಲಾಗಿದೆ ಎಂದರು. ಇದೇ […]

Continue Reading