Category: ಶಿವಮೊಗ್ಗ
ಶಿವಮೊಗ್ಗ | ಕಾಂಗ್ರೆಸ್ ಮುಖಂಡೆ ನಾಜಿಮರಿಂದ, ಸಚಿವ ಮಧು ಬಂಗಾರಪ್ಪ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ
ಘಟನೆ ವಿವರ : ಸಂತ್ರಸ್ತೆಯ ಆರೋಪ ಈ ಕೆಳಗನಂತಿದೆ, ನಾನು ಬಿ.ಎ. ಪದವಿ ವ್ಯಾಸಂಗ ಮಾಡುತ್ತಿದ್ದು, ನನ್ನ ಗಂಡ ಕೂಲಿಕೆಲಸ ಮಾಡಿಕೊಂಡಿದ್ದಾರೆ,ಕಷ್ಟದ ಜೀವನ ನಡೆಸುತ್ತಿದ್ದೇವೆ. ನಮಗೆ 3 ಜನ ಹೆಣ್ಣುಮಕ್ಕಳಿರುತ್ತಾರೆ. ಮನೆಯ ಆರ್ಥಿಕ ಪರಿಸ್ಥಿತಿಯು ಸರಿಯಿಲ್ಲದ ಕಾರಣ ವಯಸ್ಸಾದ ಅತ್ತೆ ಮಾವಂದಿರು ಇರುತ್ತಾರೆ. ಇವರ ಯೋಗಕ್ಷೇಮಕ್ಕಾಗಿ ನನಗೆ ಕೆಲಸದ ಅವಶ್ಯಕತೆಯಿದ್ದು, ನಮ್ಮ ಮಾವನವರಾದ ಜಪ್ಪು ಎಂಬುವವರಿಗೆ ಪರಿಚಯವಾದ ಶಿವಮೊಗ್ಗ ನಿವಾಸಿ ಶ್ರೀಮತಿ ನಾಜಿಮ ಎಂಬುವವರನ್ನು ಭೇಟಿ ಮಾಡಿಸಿ ಕೆಲಸಕ್ಕಾಗಿ ಬೇಡಿಕೆ ಇಟ್ಟಾಗ ನಮ್ಮಿಂದ ಸಂಪೂರ್ಣ ದಾಖಲಾತಿಗಳನ್ನು ಪಡೆದುಕೊಂಡು, […]
Continue Readingಶಿವಮೊಗ್ಗ | ಪ್ರಧಾನಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ; ರಾಷ್ಟ್ರಪ್ರೇಮಿ ವಕೀಲರ ಬಳಗದಿಂದ ದೂರು
ಈ ನೆಲದಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಂದನ್ನು ಪ್ರಶ್ನಿಸುವ ವಿಶ್ಲೇಸಿಸುವ ಮತ್ತು ವಿಮರ್ಶಾತ್ಮಕವಾಗಿ ಟೀಕೆಗೆ ಒಳಪಡಿಸುವ ಹಕ್ಕನ್ನು ಭಾರತ ಸಂವಿಧಾನವು ನೀಡಿದೆ ಆದರೆ ಅಂತಹ ಟೀಕೆ ಟಿಪ್ಪಣಿಗಳು ಮತ್ತೊಬ್ಬರ ಮಾನ ಮರ್ಯಾದೆ ಮತ್ತು ಗೌರವಕ್ಕೆ ಧಕ್ಕೆ ಉಂಟುಮಾಡಬಾರದು. ಟೀಕೆ ಮಾಡುವ ಭರದಲ್ಲಿ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಈ ರೀತಿ ಅಶ್ಲೀಲ ಮತ್ತು ಅವೇಳನಕಾರಿಯಾಗಿ ಚಿತ್ರಿಸುವುದು ಈ ದೇಶದ ಸಂವಿಧಾನದಲ್ಲಿ ನಂಬಿಕೆ ಇಟ್ಟ ಪ್ರತಿಯೊಬ್ಬ ಭಾರತೀಯನಿಗೂ ನೋವು ಮಾಡಿದೆ ಉನ್ನತ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಪ್ರಧಾನಮಂತ್ರಿಯವರಿಗೆ ಮಾಡಿದ ಅವಮಾನ […]
Continue Readingಶಿವಮೊಗ್ಗ | ಎಫ್‌ಎಂ ಪ್ರಸಾರಕ ಉದ್ಘಾಟನೆ ; ಯಡಿಯೂರಪ್ಪನವರ 84ನೇ ಜನ್ಮದಿನಕ್ಕೆ ಸಮರ್ಪಣೆ ಎಂದ ಬಿ.ವೈ. ಆರ್
2009ರಲ್ಲಿ ಶಿವಮೊಗ್ಗಕ್ಕೆ ಎಫ್‌ಎಂ ಕೇಂದ್ರ ಅಗತ್ಯವಿದೆ ಎಂಬ ಬೇಡಿಕೆಯನ್ನು ಯಡಿಯೂರಪ್ಪನವರು ಮುಂದಿಟ್ಟಿದ್ದು, ಆ ಪ್ರಯತ್ನದ ಫಲವಾಗಿ ಇಂದು ಸರ್ಕಾರದಿಂದ ಈ ಯೋಜನೆ ಸಾರ್ಥಕಗೊಂಡಿದೆ ಎಂದು ಅವರು ವಿವರಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
Continue Readingಶಿಕಾರಿಪುರ | ಯಡ್ಯೂರಪ್ಪನವರ ಹುಟ್ಟುಹಬ್ಬದ ಸಂಭ್ರಮಕ್ಕೆ ಸಿದ್ಧತೆ
ಕಳೆದ ಚುನಾವಣೆಗಿಂತ ಮುಂಬರುವ ದಿನಗಳಲ್ಲಿ ತಮ್ಮ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತಂದೆಯ ಮೊರೆ ಹೋಗಿದ್ದಾರೆ. ಶಿಕಾರಿಪುರ ಭದ್ರಕೋಟೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಲು, ಬಿಎಸ್‌ವೈ ಅವರ ರಾಜಕೀಯ ವರ್ಚಸ್ಸು, ಜಾತಿ ಬಲ, ಆರ್‌ಎಸ್‌ಎಸ್ ಹಾಗೂ ಪಕ್ಷದ ಸಂಪೂರ್ಣ ಬೆಂಬಲವನ್ನು ತಮ್ಮದಾಗಿಸಿಕೊಳ್ಳಲು ಈ ಬರ್ತ್‌ಡೇ ಸೆಲೆಬ್ರೇಷನ್ ಅನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಬಿಎಸ್‌ವೈ ಹುಟ್ಟುಹಬ್ಬದ ಅದ್ದೂರಿ ಆಚರಣೆಗೆ ಸ್ವಪಕ್ಷದ ಕೆಲವು ನಾಯಕರ ಸಲಹೆಯಂತೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಆದರೆ ಈ ಬಾರಿ ಯಾವುದೇ ಅಡೆತಡೆಗಳಿಲ್ಲದೆ ಬೃಹತ್ ಕಾರ್ಯಕ್ರಮ […]
Continue Readingಶಿವಮೊಗ್ಗ | ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಹತ್ಯೆ ; ಕಾನೂನು ಸುವ್ಯವಸ್ಥೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಂಸದ ಬಿ. ವೈ. ರಾಘವೇಂದ್ರ
ಜನರ ಭದ್ರತೆ ಸರ್ಕಾರದ ಮೊದಲ ಆದ್ಯತೆಯಾಗಬೇಕು. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕಾನೂನು ಸುವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಮೋಹನ್ ರೆಡ್ಡಿ, ಶ್ರೀಮತಿ ಸಂಗೀತ ನಾಗರಾಜ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಾಲತೇಶ್ ಸಂತೋಷ್ ಬಳ್ಳೇಕೆರೆ ರಾಜೇಶ್ ಕಾಮತ್ ದಿವಾಕರ್ ಶೆಟ್ಟಿ ಹಾಗೂ ಮಾಧ್ಯಮ ಪ್ರಮುಖವಾದ ಚಂದ್ರಶೇಖರ್ ಎಸ್. ಉಪಸ್ಥಿತರಿದ್ದರು.
Continue Readingಶಿವಮೊಗ್ಗ | ಕೋಟೆ ಮಾರಿಕಾಂಬ ದೇವಿಯ ಜಾತ್ರೆ ; ಎಸ್ಪಿ ನಿಖಿಲ್ ರಿಂದ ಭದ್ರತಾ ವ್ಯವಸ್ಥೆ ಪರಿಶೀಲನೆ
ಈ ಸಂದರ್ಭದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶ್ರೀ ಸತ್ಯನಾರಾಯಣ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
Continue Readingಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಿರುದ್ದ ABVP ಪ್ರತಿಭಟನೆ
ABVP ಆರೋಪವೇನು? ಅಖಿಲ ಭಾರತೀಯ ವಿದ್ಯಾರ್ಥಿ ಸಂಘ AISA ಪ್ರಾಯೋಜಿತ SPARK ಎನ್ನುವ ಸಂಸ್ಥೆಯ ಮೂಲಕ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಚಿಂತನೆಗಳ ಕೂಟಗಳನ್ನು ನಡೆಸಿದೆ. ದೇಶದ ಗಡಿ ಕಾಯುವ ಸೈನಿಕರನ್ನು(Indian Army) ಅತ್ಯಾಚಾರಿಗಳು, ಹಿಂಸಾಚಾರಿಗಳು ಎನ್ನುವಂತೆ ಬಿಂಬಿಸುವ ಕಾರ್ಯಕ್ರಮ ಮಾಡಿದ್ದಾರೆ. ಭಾರತದ ಮುಕುಟಮಣಿ ಕಾಶ್ಮೀರ ಭಾರತದ ಭಾಗವಲ್ಲ,ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಎನ್ನುವ ದೇಶವಿರೋಧಿ ಕಾರ್ಯಕ್ರಮಗಳ ಮೂಲಕ ಭಾರತದ ಸಮಗ್ರತೆಗೆ ಧಕ್ಕೆ ತರುವ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಅಪರೇಷನ್ ಸಿಂಧೂರ ಸೈನಿಕ ಕಾರ್ಯಾಚರಣೆಯನ್ನು ಖಂಡಿಸುವ ಚಟುವಟಿಕೆಗಳು ನಡೆಸುತ್ತಿದ್ದರು. […]
Continue Readingಶಿವಮೊಗ್ಗ | ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯ ಅವಶ್ಯಕತೆಯಿದ್ದಲ್ಲಿ ಸೂಕ್ತ ಭದ್ರತೆ ಒದಗಿಸಿ ; ಕರವೇ ಸ್ವಾಭಿಮಾನಿ ಬಣ ಅಗ್ರಹ
ಶಾಲೆಗಳ ವಿದ್ಯಾರ್ಥಿಗಳ ಫಲಿತಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ವಿಶೇಷ ತರಗತಿಗಳನ್ನು ನಡೆಸುವ ಅಗತ್ಯವಿದ್ದಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿ ಅಗತ್ಯ ನಿಯಮಗಳು ಮತ್ತು ಶರತ್ತುಗಳನ್ನು ವಿಧಿಸಬೇಕು. ಆ ನಿಯಮಗಳಿಗೆ ಒಪ್ಪಿಗೆ ನೀಡಿದ ಶಾಲೆಗಳಿಗೆ ಮಾತ್ರ ಇಂತಹ ವಿಶೇಷ ತರಗತಿಗಳನ್ನು ನಡೆಸಲು ಅನುಮತಿ ನೀಡಬೇಕು. ಜೊತೆಗೆ, ವಿಶೇಷ ತರಗತಿಗಳು ಮುಗಿದ ನಂತರ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆಗೆ ತಲುಪುವವರೆಗೆ ಶಾಲಾ ಆಡಳಿತ ಮಂಡಳಿಯೇ ಸಂಪೂರ್ಣ ಜವಾಬ್ದಾರಿಯಾಗಿರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಿಳಿಸಿದೆ. ಈ […]
Continue Readingಶಿವಮೊಗ್ಗ | ಸೂಳೆಬೈಲಿನಲ್ಲಿ ಉಪಪೊಲೀಸ್ ಠಾಣೆ ತೆರೆಯಲು ಕ್ರಮ : ಎಸ್ಪಿ ನಿಖಿಲ್
ಪೊಲೀಸರ ಮಾಹಿತಿ ಪ್ರಕಾರ, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಂಕೇತ್ ಸೋಮವಾರ ಸ್ಪೆಷಲ್ ಕ್ಲಾಸ್ ಮುಗಿಸಿ ಬರ್ತಿದ್ದನಂತೆ. ಈ ವೇಳೆ ಕೆಲ ವಿದ್ಯಾರ್ಥಿಗಳ ನಡುವೆ ಜಗಳವಾಗುತ್ತಿತ್ತು. ಅವರ ಜಗಳವನ್ನು ಬಿಡಿಸಲು ಹೋದಾಗ ಸಂಕೇತ್ ಮೇಲೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಅನ್ಯಕೋಮಿನ ಬಾಲಕರು ಸಂಕೇತ್ ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ್ದಾರೆ. ಪರಿಣಾಮ ಸಂಕೇತ್ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು ಪ್ರಾಣ ಉಳಿಯಲಿಲ್ಲ. ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸಂಕೇತ್ ಸಾವಿನ […]
Continue Reading

