ನವದೆಹಲಿ | ಕೇಂದ್ರ ಸಂಪುಟ ಪುನರಚನೆ ಆಗುವ ಸಾಧ್ಯತೆ : ರಾಜ್ಯದಿಂದ ತೇಜಸ್ವಿ ಸೂರ್ಯ ಬಿ. ವೈ ರಾಘವೇಂದ ಹೆಸರು

ಅಮಿತ್ ಶಾ, ಜೆ.ಪಿ. ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್, ಎಚ್.ಡಿ. ಕುಮಾರಸ್ವಾಮಿ, ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಮನ್ಸುಖ್ ಮಾಂಡವಿಯಾ ಸೇರಿದಂತೆ ಅನೇಕ ಸಚಿವರು ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಹೊಸಬರು ಬಂದರೆ ಈ ಖಾತೆಗಳಲ್ಲಿ ಕೆಲವು ಮರುಹಂಚಿಕೆಯಾಗುವ ಸಾಧ್ಯತೆ ಇದೆ.ಕರ್ನಾಟಕದ ಮಟ್ಟಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರರವರ ಅವರ ಹೆಸರು ಸಂಭವನೀಯ ಹೊಸ ಮುಖಗಳ ಚರ್ಚೆಯಲ್ಲಿ ಕಾಣಿಸಿಕೊಂಡಿದೆ. ತೇಜಸ್ವಿ ಸೂರ್ಯ […]

Continue Reading

ಶಿವಮೊಗ್ಗ | ಕಸ್ತೂರಿರಂಗನ್ ವರದಿ ಜಾರಿ ಅಧಿಸೂಚನೆ ವಿರೋಧಿಸಿ ಹೊಸನಗರದಲ್ಲಿ ನಾಳೆ ಪಾದಯಾತ್ರೆ, ಬಹಿರಂಗ ಸಭೆ : ಆರ್.ಎಂ.ಮಂಜುನಾಥಗೌಡ

ಸೂಕ್ಷ್ಮಪ್ರದೇಶವೆಂದು ಗುರುತಿಸಲ್ಪಡುವ ಜಾಗಗಳಲ್ಲಿ ಹತ್ತಾರು ದಶಕಗಳಿಂದ ಕೃಷಿ ಮಾಡುತ್ತಿರುವ ಸಾವಿರಾರು ರೈತ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ವಾಸವಿರುವ ಮನೆಗಳಿಗೂ ದಾಖಲೆಗಳನ್ನು ನೀಡಲಾಗಿಲ್ಲ. ಅರ್ಜಿ ನಮೂನೆ 50,53,57 ಮತ್ತು ಮನೆಗಳಿಗಾಗಿ 94C ರಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಕಾದಿರುವ ಕುಟುಂಬಗಳು ಸೂಕ್ಷ್ಮ ಪ್ರದೇಶ ಘೋಷಣೆಯಿಂದ ತಾವು ವಾಸವಿರುವ ಮತ್ತು ಕೃಷಿ ಮಾಡುತ್ತಿರುವ ಜಾಗದ ಮೇಲಿನ ಹಕ್ಕು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದರು.

Continue Reading

ಬ್ರಹ್ಮ ಶ್ರೀ ನಾರಾಯಣ ಗುರು ಮತ್ತು ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ : ಮಾನವನಿಗೆ ಒಂದೇ ಜಾತಿ-ಮತ ಮತ್ತು ಕಾಯಕ ಮುಖ್ಯ ಎಂದು ಸಾರಿದ ದಾರ್ಶನಿಕರು : ಬಿ.ವೈ.ರಾಘವೇಂದ್ರ

ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಅಂದು ಸಮಾಜದಲ್ಲಿ ತಾಂಡವವಾಡುತ್ತಿದ್ದ ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ತಾರತಮ್ಯಗಳು ವಿರುದ್ದ ಹೋರಾಡಿದ ನಾರಾಯಣ ಗುರುಗಳು ದೇಶ ಸೇವೆಯೇ ಈಶ ಸೇವೆ ಎಂದು ಅರ್ಥ ಮಾಡಿಸಿದವರು.ಅತ್ಯಂತ ನಿಷ್ಠೆಯಿಂದ ಹಗ್ಗ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡ ನುಲಿಯ ಚಂದಯ್ಯನವರು ಒಂದೇ ನೂಲನ್ನು ಒಟ್ಟುಗೂಡಿಸಿ ಹಗ್ಗ ಹೊಸೆಯುವ ಮೂಲಕ ನಮ್ಮ ಸಾಮೂಹಿಕ ಶಕ್ತಿಯ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ. ಅವರು ಕಾಯಕವೇ ಕೈಲಾಸ ಎಂದು ನಂಬಿ, ಬಸವಣ್ಣನವರೊಂದಿಗೆ ಕೆಲಸ ಮಾಡಿದ ಮಹಾನ್ ಶರಣರು. ಮನುಕುಲಕ್ಕಾಗಿ ಕಾಯಕ ಮಾಡಿದವರು […]

Continue Reading

ಅಸಮಾನತೆಯನ್ನು ತೊಡೆಯಲು ಕ್ರಾಂತಿಕಾರಕ ಮಾರ್ಗವನ್ನು ಸೃಷ್ಟಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೆ ಜಯಂತಿ

ಶ್ರೀ. ನಾರಾಯಣ ಗುರು ಭಾರತೀಯ ಸಾಮಾಜಿಕ ಸುಧಾರಕ :- ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು,’ ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, ” ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು,” ಎಂಬ ಸತ್ಯವಾಕ್ಯವನ್ನು. ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ಅವರು ಬೋಧಿಸಿದ್ದು, ದೇಶಸೇವೆಯೇ […]

Continue Reading

ನೇಪಾಳ ದುರಂತ : ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ

ಸಾರ್ವಜನಿಕರು +977 9851316807, +977 9709107500 ಅಥವಾ +977 9810326117 ಸಂಖ್ಯೆಗಳನ್ನು ನೇರವಾಗಿ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲು ಹಾಗೂ ನೆರವು ಕೋರಲು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading