ತೀರ್ಥಹಳ್ಳಿ | ರಸ್ತೆ ಅಪಘಾತದಲ್ಲಿ ಚಿರತೆ ಮರಿ ಸಾವು

ಶಿವಮೊಗ್ಗ

ತೀರ್ಥಹಳ್ಳಿ ವಲಯಾರಣ್ಯದ ವ್ಯಾಪ್ತಿಯ ಮೇಳಿಗೆ ಸಮೀಪದ ಕೌರಿಬೈಲು ಗ್ರಾಮದಲ್ಲಿ ರಸ್ತೆ ಅಪಘಾತ ಸಂಭವಿಸಿ ಎರಡು ವರ್ಷದ ಮರಿ ಚಿರತೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗುತ್ತಿದೆ.

ಸ್ಥಳೀಯರ ಪ್ರಕಾರ ಈ ಭಾಗದಲ್ಲಿ ಅನೇಕ ಚಿರತೆಗಳು ವಾಸಿಸುತ್ತಿವೆ. ಚಿರತೆಗಳು ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಮರಿ ಚಿರತೆ ಸಾವನ್ನಪ್ಪಿರಬಹುದು. ಮರಿಯಾಗಿರುವ ಹಿನ್ನಲೆಯಲ್ಲಿ ತಾಯಿ ಚಿರತೆ ಕೂಡ ಇಲ್ಲಿರುವ ಸಾಧ್ಯತೆ ಇದೆ. ಚಿರತೆಗಳು ಕೂಗುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Author