ಮಾಜಿ ಸೈನಿಕರಿಗೆ ಸ್ಪರ್ಶ್ ಸಹಾಯತಾ ಶಿಬಿರ

ಶಿವಮೊಗ್ಗ

ಶಿವಮೊಗ್ಗ, ಪಿ.ಸಿ.ಡಿ.ಎ ಪ್ರತಿನಿಧಿಗಳಿಂದ ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರನಾರಿಯರು ಇವರುಗಳಿಗಾಗಿ ಸ್ಪರ್ಶ್ ಸಹಾಯತಾ ಶಿಬಿರವನ್ನು ಮಲ್ಟಿ ಪರ್ಪಸ್ ಹಾಲ್, ಪಿ.ಸಿ.ಡಿ.ಎ, ಬೆಂಗಳೂರು ಇಲ್ಲಿ ನವೆಂಬರ್ 04 ಮತ್ತು 05 ನವೆಂಬರ್ ರಂದು ಬೆಳಿಗ್ಗೆ 10.00 ರಿಂದ ಸಂಜೆ 05.00 ಗಂಟೆಯವರೆಗೆ ಆಯೋಜಿಸಲಾಗಿದೆ.

ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರ ನಾರಿಯರು ಸ್ಪರ್ಶ್ ಸಂಬಂಧಿಸಿದಂತೆ ಹಾಗೂ ಜೀವನ ಪ್ರಮಾಣ ಪತ್ರ ಸಲ್ಲಿಸುವ ಕುರಿತ ಸೂಕ್ತ ಸಲಹೆ ಮತ್ತು ಪರಿಹಾರಕ್ಕಾಗಿ ಸಂಬಂಧಿತ ಎಲ್ಲಾ ಪೂರಕ ದಾಖಲೆಗಳೊಂದಿಗೆ ಭಾಗವಹಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ(ಪ್ರ) ಡಾ. ಸಿ.ಎ ಹಿರೇಮಠ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Author