ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ, ಶಿವಮೊಗ್ಗ ಇವರ ಜಂಟಿ ಆಯೋಜನೆಯಲ್ಲಿ ಸೆಪ್ಟೆಂಬರ್ 20 ರ ಭಾನುವಾರ ಸಂಜೆ 6.00 ಗಂಟೆಗೆ ಅಶೋಕನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ಅಗಲಿದ ಹಿರಿಯ ರಂಗಚೇತನ ಶ್ರೀ ಚಿದಂಬರರಾವ್ ಜಂಬೆ ಹಾಗೂ ಶ್ರೀ ಪಿ. ಗಂಗಾಧರ ಸ್ವಾಮಿ ಅವರನ್ನು ಸ್ಮರಿಸುತ್ತಾ, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ‘ನುಡಿ ನಮನ’ ಕಾರ್ಯಕ್ರಮ ನಡೆಯಲಿದೆ.
‘ಪಾರ್ಟಿ’ ನಾಟಕ ಪ್ರದರ್ಶನ:’ನುಡಿ ನಮನ’ ಕಾರ್ಯಕ್ರಮದ ನಂತರ ಸಂಜೆ 6.30ಕ್ಕೆ ಮೈಸೂರಿನ ‘ನಿರಂತರ ರಂಗ ತಂಡ’ದ ಕಲಾವಿದರಿಂದ ದಿ. ಚಿದಂಬರರಾವ್ ಜಂಬೆ ಅವರ ನಿರ್ದೇಶನದ ಕೊನೆಯ ನಾಟಕವಾದ ‘ಪಾರ್ಟಿ’ ಪ್ರದರ್ಶನಗೊಳ್ಳಲಿದೆ. ಈ ನಾಟಕ ಪ್ರದರ್ಶನಕ್ಕೆ ಪ್ರವೇಶ ಶುಲ್ಕವಾಗಿ ತಲಾ ಒಬ್ಬರಿಗೆ ರೂ.30/- ದರವನ್ನು ನಿಗದಿಪಡಿಸಲಾಗಿದೆ.
ಶಿವಮೊಗ್ಗದ ಸಮಸ್ತ ರಂಗಾಸಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ರಂಗಾಯಣದ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.





