ವಿಜಯಪುರ | ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ದ ಶಾಸಕ ಯತ್ನಾಳರಿಂದ ಮುಂದುವರೆದ ವಾಗ್ದಾಳಿ..!

ರಾಜಕೀಯ

ವಿಜಯಪುರ ನಗರದಲ್ಲಿ ಮಾತನಾಡಿದ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ,ರಾಜ್ಯದ ಜಿಲ್ಲೆಗಳಲ್ಲಿ ಬಿಜೆಪಿ ಬೆಳೆಸೋ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿಲ್ಲಾ.ಬಿಜೆಪಿಗೆ ಮಾರಕವಾಗೋ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ.

ವಿಜಯಪುರದಲ್ಲಿ 2023 ರ ಚುನಾವಣೆಯಲ್ಲಿ ಹಾಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪಾ ಅಂಗಡಿ ನನ್ನ ವಿರುದ್ದ ಚುನಾವಣೆ ಮಾಡಿದರು.ಬಣಜಿಗ ಸಮಾಜ ಮತದಾರರು ಯತ್ನಾಳಗೆ ಮತ ಹಾಕಬೇಡವೆಂದು ಗುರುಲಿಂಗಪ್ಪಾ ಪ್ರಚಾರ ಮಾಡಿದ್ದವೆಂದು ಆರೋಪಿಸಿದರು.

ಬಳ್ಳಾರಿಯ ಸಮಾವೇಶದಲ್ಲಿ ಜನರೇ ಇರಲಿಲ್ಲಾ ಕುರ್ಚಿ ಖಾಲಿ ಇದ್ದವುವೆಂದು ವ್ಯಂಗ್ಯವಾಡಿದರು.ವಿಜಯೇಂದ್ರಗೆ ನೇಗಿಲನ್ನು ಯಡಿಯೂರಪ್ಪ ಕೊಡೋದು,ಪ್ರಹ್ಲಾದ್ ಜೋಶಿ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಇದ್ದರೂ ಕೊಟ್ಟಿಲ್ಲಾವೆಂದು ಆರೋಪಿಸಿದರು.

ಅಪ್ಪ ಮಗ ಇಬ್ಬರದ್ದದೇ ಪೋಟೊ ಎಂದು ಯತ್ನಾಳ್ ವಾಗ್ದಾಳಿ.

Author