ಶಿವಮೊಗ್ಗ,ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿನ ‘ಡೆವಲಪ್ಮೆಂಟ್ ಆಫ್ ಸ್ಟ್ರಿಪ್ ಬೇಸಡ್ ರ್ಯಾಪಿಡ್ ಅಂಡ್ ಸ್ಪೆಸಿಫಿಕ್ ಡೆಯಾಗ್ನೊಸ್ಟಿಕ್ ಕಿಟ್ ಫಾರ್ ಡಿಟೆಕ್ಷನ್ ಆಫ್ ಕ್ಯಾಸನೂರ್ ಫಾರೆಸ್ಟ್ ಡಿಸೀಸ್’ ಸಂಶೋಧನಾ ಯೋಜನೆಗಾಗಿ ‘ಪ್ರೊಜೆಕ್ಟ್ ಅಸಿಸ್ಟೆಂಟ್’ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಂ.ಎಸ್ಸಿ. ಸೂಕ್ಷ್ಮಾಣು ಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ಜೀವ ರಸಾಯನಶಾಸ್ತ್ರ ಅಥವಾ ಜೀವವಿಜ್ಞಾನದ ಇತರ ವಿಷಯಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಮಾಲಿಕ್ಯುಲರ್ ಬಯಾಲಜಿ ಟೆಕ್ನಿಕ್ಸ್ ನಲ್ಲಿ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗೆ ವಿಜಿಎಸ್ ಟಿ-ಜಿ ಆರ್ ಇ ಮಾರ್ಗದರ್ಶಿಯಂತೆ ಪ್ರತಿ ತಿಂಗಳು ರೂ. 25,000/- ಫೆಲೋಶಿಪ್ ನೀಡಲಾಗುತ್ತದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ, ಸ್ವ-ವಿವರಗಳು ಮತ್ತು ಅಗತ್ಯ ಶೈಕ್ಷಣಿಕ ದಾಖಲೆಗಳೊಂದಿಗೆ 15/09/2026 ರೊಳಗಾಗಿ ಪ್ರೊ. ಎನ್. ಬಿ. ತಿಪ್ಪೇಸ್ವಾಮಿ, ಪ್ರಧಾನ ಸಂಶೋಧಕರು, ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ ಇವರಿಗೆ ಅಥವಾ ಇ-ಮೇಲ್ nbtmicro@gmail.com ಮೂಲಕ ತಲುಪಿಸಬೇಕಾಗಿದೆ.
ಹೆಚ್ಚಿನ ವಿವರಗಳು ಮತ್ತು ಅರ್ಜಿ ನಮೂನೆಗಾಗಿ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ http://www.kuvempu.ac.in ಗೆ ಭೇಟಿ ನೀಡಬಹುದು ಎಂದು ಕುವೆಂಪು ವಿವಿಯ ಪ್ರಧಾನ ಸಂಶೋಧಕರಾದ ಪ್ರೊ. ಎನ್.ಬಿ.ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿದಿದ್ದಾರೆ.





