ತೀರ್ಥಹಳ್ಳಿ | ಮುಖ್ಯಮಂತ್ರಿಗಳು ಅಡಿಕೆ ಬೆಳೆಗಾರರು, ರೈತರ ಕಲ್ಯಾಣ ಬಯಸಬೇಕು ; ಶಾಸಕ ಆರಗ ಜ್ಞಾನೇಂದ್ರ

ಬೆಂಗಳೂರು

ತೀರ್ಥಹಳ್ಳಿ,ರಾಜ್ಯದಲ್ಲಿ ಒಂದು ವರ್ಷ ಗುಟ್ಕಾ ಪಾನ್ ಮಸಾಲ ನಿಷೇಧ ಸಂಬಂಧ ತೀರ್ಥಹಳ್ಳಿ ಶಾಸಕರು ಹಾಗೂ ಮಾಜಿ ಸಚಿವರಾದ ಆರಗ ಜ್ಞಾನೇಂದ್ರ ಮಾತನಾಡಿ ಕರ್ನಾಟಕ ವು ಅತೀ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶವಾಗಿದೆ ಹಾಗೂ ಇಷ್ಟು ವರ್ಷಗಳ ಕಾಲ ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರಿಗೆ ರಕ್ಷಣೆ ನೀಡಿತ್ತು ಆದರೆ ಪ್ರಸ್ತುತ ಈಗಿನ ಸರ್ಕಾರದ ಆದೇಶದಿಂದ ಅಡಿಕೆ ಬಳೆಗಾರರಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದು ಅಡಿಕೆ ಮಾರುಕಟ್ಟೆ ಮೇಲೆ ಸಹ ದುಷ್ಟಪರಿಣಾಮ ಬೀರಲಿದೆ ಎಂದರು. ಮತ್ತು ಅಡಿಕೆ ಬೆಳೆಯುವ ಪ್ರದೇಶದಲ್ಲಿ ನಿಷೇಧ ಆದಾಗ ರೈತರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ ಎಂದರು.

ರಾಜ್ಯದ 12 ಜಿಲ್ಲೆಗಳಲ್ಲಿ ಅದಿಕೆಯನ್ನು ವ್ಯಾಪಾಕವಾಗಿ ಬೆಳೆಯಲಾಗುತ್ತಿದೆ. ತರಿ ಪ್ರದೇಶವನ್ನು ತೆಗೆದು ಅಡಿಕೆಯನ್ನು ಬೆಳೆಯಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಡಿಕೆ ಬೆಳೆಯನ್ನು ಕಡಿದು ಹಾಕಲು ಬರುವುದಿಲ್ಲವೆಂದು ತಿಳಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ರೈತರ ಕಲ್ಯಾಣ ಬಯಸಬೇಕು ಎಂದು ವಿನಂತಿಸುತ್ತೇನೆ ಎಂದರು.

ಅಡಿಕೆ ಬೆಳೆಗಾರರ ಹಿತಾಸಕ್ತಿಯೇ ನಮ್ಮ ಆದ್ಯತೆ.ರಾಜ್ಯದ ಲಕ್ಷಾಂತರ ಅಡಿಕೆ ಬೆಳೆಗಾರರ ಜೀವನೋಪಾಯಕ್ಕೆ ಧಕ್ಕೆಯಾಗುವಂತೆ ಆಹಾರ ಸುರಕ್ಷತಾ ಆಯುಕ್ತರು ಹೊರಡಿಸಿರುವ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರೈತರ ಹಕ್ಕು ಮತ್ತು ಬದುಕಿನ ರಕ್ಷಣೆಗಾಗಿ ನಮ್ಮ ಹೋರಾಟ ನಿರಂತರ ಎಂದು ಶಾಸಕರು ತಿಳಿಸಿದ್ದಾರೆ.

Author