ಶಿವಮೊಗ್ಗ, ನಗರದ ಅತಿ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಯಾರೂ ಕ್ರಮ ಕೈಗೊಳ್ಳುತ್ತಿಲ್ಲವಾದ್ದರಿಂದ ಹಾಗೂ ಆಡಳಿತದ ವೈಫಲ್ಯವನ್ನು ಖಂಡಿಸಲು, ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವೇದಿಕೆಯ ಪ್ರ. ಕಾರ್ಯದರ್ಶಿ ಕೆ ವಿ ವಸಂತಕುಮಾರ್, ಪ್ರತಿಭಟನೆಗಳನ್ನು ಸತತ ಮುಂದುವರಿಸಲು ನಿರ್ಧರಿಸಲಾಗಿದೆ.ಮೊದಲ ಆ. 08 ರ ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಶಾಸಕರ (MLA) ಕಚೇರಿಯ ಮುಂದೆ ‘ಪ್ರತಿಭಟನೆ’ ನಡೆಸಲಾಗುವುದು .
ಮುಂದಿನವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು. ಅವರಿಂದ ಯಾವುದೇ ಭರವಸೆಗಳು ಸಿಗದಿದ್ದಲ್ಲಿ, ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ, ಕಪ್ಪು ಪಟ್ಟಿ, ಪ್ರದರ್ಶನ, ಕಚೇರಿಗಳಿಗೆ ಮುತ್ತಿಗೆ, ಮುಂತಾದ ತೀವು ಸ್ವರೂಪದ ಹೋರಾಟವನ್ನು ನಡೆಸಲಾಗುವುದು ಎಂದರು.
ನಗರಕ್ಕೆ, ಹೆಚ್ಚಿನ ಸಾಮರ್ಥ್ಯದ ನೀರು ಶುದ್ದೀಕರಣ ಘಟಕ, ಸರಕಾರ ಪುಸ್ತಾವನೆ ಸಲ್ಲಿಸಿಲ್ಲ :
ಶಿವಮೊಗ್ಗದಲ್ಲಿ ಕೈಗೊಳ್ಳಬೇಕಾದ ಅತ್ಯಂತ ಪ್ರಮುಖ ಹಾಗೂ ಅತ್ಯಗತ್ಯಗಳಲ್ಲಿ ಇದೂ ಒಂದಾಗಿದೆ. ಶಿವಮೊಗ್ಗದ ಮನೆಗಳಿಗೆ ಸರಬರಾಜು ಆಗುವ ನೀರಿನ ಕಳಪೆ ಗುಣಮಟ್ಟ ಮತ್ತು ಕಡಿಮೆ ಪುಮಾಣದ ಬಗ್ಗೆ, ನಗರದ ಪ್ರತಿಯೊಬ್ಬ ನಾಗರಿಕರಿಗೂ ಅರಿವಿದೆ. ಈ ಯೋಜನೆಯ ಕುರಿತು ಚರ್ಚಿಸುವುದು ತುರ್ತು ಅಗತ್ಯವಾಗಿತ್ತು. ಕನಿಷ್ಠ ವೆಚ್ಚದಲ್ಲಿ ಪ್ರಸ್ತುತ ವ್ಯವಸ್ಥೆಯನ್ನು ಹೇಗೆ ಉನ್ನತೀಕರಿಸಬಹುದು ಎಂಬುದರ ಕುರಿತು ಚರ್ಚಿಸಬೇಕಿದೆ. ಈ ಸಂಬಂಧವಾಗಿ ಮಾದರಿ ಘಟಕಗಳಿಗೆ ಭೇಟಿ ನೀಡುವ ವ್ಯವಸ್ಥೆ ಮಾಡುವಂತೆ ಶಾಸಕರೊಂದಿಗೆ ಚರ್ಚಿಸಿದೆವು; ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಬೇಸರಿಸಿದರು.
ತೆಗೆಯದ ಹಳೆಯ ವಿದ್ಯುತ್ ಕಂಬಗಳು :
ರೂ. 300 ಕೋಟಿಗೂ ಅಧಿಕ ವೆಚ್ಚ ಆದರೂ ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ವೇದಿಕೆಯು ಸಾಕಷ್ಟು ಹೋರಾಟಗಳನ್ನು ನಡೆಸಿದೆ. ಹಳೆಯ ಕಂಬಗಳನ್ನು ತೆರವುಗೊಳಿಸುವ ಪ್ರಕ್ರಿಯೆಯು ಅತ್ಯಂತ ನಿಧಾನಗತಿಯಲ್ಲಿದೆ. ನಮಗೆ ತಿಳಿದಿರುವಂತೆ ಕೇವಲ 400 ಕಂಬಗಳನ್ನು ಮಾತ್ರ ತೆರವುಗೊಳಿಸಲಾಗಿದೆ. ಮತ್ತು ಇನ್ನೂ 800 ಕಂಬಗಳನ್ನು ತೆರವುಗೊಳಿಸಬೇಕಿದೆ. ಮೆಸ್ಕಾಂ (MESCOM) ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ಅನಗತ್ಯವಾಗಿ ಪರಸ್ಪರರ ಮೇಲೆ ಆರೋಪಗಳನ್ನು ಹೊರಿಸುತ್ತಿದ್ದಾರೆ.
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಸ್ಮಾರ್ಟ್ ಟಾಯ್ಲೆಟ್ಟಗಳು ಬಳಕೆಗೆ ಬಾರದಿರುವ ಬಗ್ಗೆ :
ಶಿವಮೊಗ್ಗ ನಗರದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ 20ಕ್ಕೂ ಹೆಚ್ಚು ‘ಸ್ಮಾರ್ಟ್ ಶೌಚಾಲಯ’ಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳಲ್ಲಿ ಒಂದೂ ಕೂಡ ಬಳಕೆಯಲ್ಲಿಲ್ಲ. ನಮ್ಮ ಒತ್ತಾಯದ ಮೇರೆಗೆ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಈ ಶೌಚಾಲಯಗಳನ್ನು ಸಾರ್ವಜನಿಕ ಬಳಕೆಗೆ ಒದಗಿಸುವುದಾಗಿ ಶಿವಮೊಗ್ಗ ಮಹಾನಗರ ಪಾಲಿಕ ಭರವಸೆ ನೀಡಿತ್ತು. ಆದಾಗ್ಯೂ, ಈ ನಿಟ್ಟಿನಲ್ಲಿನ ಪ್ರಗತಿ ಅತ್ಯಂತ ನಿರಾಶಾದಾಯಕವಾಗಿದೆ.
ನಗರ ಪಾಲಿಕೆಯಿಂದ ‘ಖಾತೆ ಬದಲಾವಣೆ ಶುಲ್ಕ,’ ಹೆಸರಿನಲ್ಲಿ, ಅವಿರತವಾಗಿ ನಡೆಯುತ್ತಿರುವ ವಸೂಲಾತಿ :
ಅಕ್ರಮ ಮತ್ತು ಅತಿಯಾದ ಶುಲ್ಕ ಶಿವಮೊಗ್ಗ ಮಹಾನಗರ ಪಾಲಿಕೆಯು ಖಾತಾ (ಸ್ವತ್ತು ನೋಂದಣಿ) ವರ್ಗಾವಣೆ ಶುಲ್ಕದ ಹೆಸರಿನಲ್ಲಿ ನಿಗದಿತ ದರಕ್ಕಿಂತ 5 ರಿಂದ 6 ಪಟ್ಟು ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದೆ; ಇದು ಕರ್ನಾಟಕ ಸರ್ಕಾರದ ಸುತ್ತೋಲೆಗೆ ವಿರುದ್ಧವಾಗಿದೆ. ಹೆಚ್ಚುವರಿ ಸಂಗ್ರಹಿಸಿದ ತೆರಿಗೆ ಹಣ ಮರುಪಾವ್ತಿಸಬೇಕು.
ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ನಿರ್ವಹಣೆಗೆ ವಹಿಸಿ :
ಈ ಸಂಬಂಧ ಸಂವಾದ ಕಾರ್ಯಕ್ರಮ ನಡರಸಿ 45 ದಿನಗಳು ಕಳೆದರೂ ‘ಸ್ಮಾರ್ಟ್ ಸಿಟಿ’ ವತಿಯಿಂದ ಯಾವುದೇ ಸಣ್ಣ ಕ್ರಮವನ್ನೂ ಕೈಗೊಂಡಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಯ ಲೋಪದೋಷಗಳನ್ನು ಕೂಡಲೇ ಸರಿಪಡಿಸಬೇಕು.
ರಸ್ತೆಯಲ್ಲಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಶೆಡ್ ತೆರವು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದೇವೆ ಎಂದು ಶಾಸಕರಿಗೆ ತಿಳಿಸಿದಾಗ, ಅವರು ಸಭೆಯೊಂದನ್ನು ನಡೆಸಿ ಸಮಸ್ಯೆಯನ್ನು ಸ್ಥಳೀಯವಾಗಿಯೇ ಬಗೆಹರಿಸುವುದಾಗಿ ಭರವಸೆ ನೀಡಿದರು; ಆದರೆ ಇಲ್ಲಿಯವರೆಗೆ ಯಾವುದೇ ಸಭೆ ನಡೆದಿಲ್ಲ ಅಥವಾ ಆ ಶೆಡ್ ಅನ್ನು ತೆರವುಗೊಳಿಸಲಾಗಿಲ್ಲ ಎಂದರು.







