ಶಿವಮೊಗ್ಗ ನಗರದ ರಾಮಣ್ಣ ಶೆಟ್ಟಿ ಪಾರ್ಕ್ ಗಣಪತಿ ದೇವಸ್ಥಾನದ ಅರ್ಚಕರಾದ ವೇದ ಬ್ರಹ್ಮ ಶ್ರೀ ಪರಮೇಶ್ವರ ಭಟ್. ಇವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಪಾರ್ಥಿವ ಶರೀರ ಶನಿವಾರ ಬೆಳಗ್ಗೆ ಎಸ್ ಪಿ ಎಂ ರಸ್ತೆಯಲ್ಲಿರುವ ಅವರ ಸ್ವಗೃಹ ಕ್ಕೆ ಆಗಮಿಸಲಿದ್ದು 11ಗಂಟೆವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ ನಂತರ ಉತ್ತರಾದಿಕ್ರಿಯೆಗಳು ನಡೆಯಲಿದೆ.
ಅವರ ನಿಧಾನಕ್ಕೆ ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್ , ಶ್ರೀ ವಿಪ್ರ ವೈದಿಕ ಪರಿಷತ್, ಶ್ರೀ ತಾಲೂಕು ಬ್ರಾಹ್ಮಣ ಸೇವಾ ಸಂಘ, ಶ್ರೀ ವಿಪ್ರ ಯುವ ಪರಿಷತ್ ತೀವ್ರ ಸಂತಾಪ ಸೂಚಿಸಿದೆ.
