ಹಾಸನದ ಹರದನಹಳ್ಳಿಯಲ್ಲಿ ಮಾತನಾಡಿದ ಏಚ್. ಡಿ. ಕುಮಾರಸ್ವಾಮಿ ಕಾವೇರಿ ಪ್ರಾಧಿಕಾರದ ತೀರ್ಪಿನ ಬಗ್ಗೆ ಅಸಮಾಧಾನ ಸೂಚಿಸಿದರು. ಇದೊಂದು ಅವೈಜ್ಞಾನಿಕ ಮತ್ತು ರಾಜ್ಯದ ಜನತೆಗೆ ಮಾರಕವಾದ ತೀರ್ಪು ಎಂದು ಅಭಿಪ್ರಾಯಪಟ್ಟರು.
ರೈತರು ಈಗಾಗಲೇ ಬರಗಾಲಕ್ಕೆ ತುತ್ತಾಗಿ ಬೆಳೆದ ಬೆಳೆ ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ನೆನ್ನೆ ಬಂದಿರುವ ಕಾವೇರಿನ ಪ್ರಾಧಿಕಾರದ ಆದೇಶ ಮುಂದಿನ ದಿನಗಳಲ್ಲಿ ಮಳೆ ಆಗದಿದ್ದರೆ ನಮ್ಮ ರಾಜ್ಯದ ರೈತರಿಗೆ ಮರಣ ಶಾಸನವಾಗಲಿದೆ ಎಂದರು. ಹಾಗೂ ಈ ತೀರ್ಪಿನ ವಿರುದ್ಧ ನಾವೆಲ್ಲರೂ ಒಗ್ಗಟಾಗಿ ಹೋರಾಟ ಮಾಡಬೇಕಿದೆ ಎಂದರು. ಈ ಒಂದು ವಿಚಾರಕ್ಕೆ ಹಲವಾರು ಸಂಘ ಸಂಸ್ಥೆಗಳು ರೈತರು ಹೋರಾಟಕ್ಕೆ ಕರೆಗಳನ್ನು ನೀಡಿದ್ದಾರೆ ಎಂದರು.
ಇದರ ಮಧ್ಯೆ ತಮಿಳುನಾಡು ಅವರು ಒತ್ತಡ ಹಾಕುತ್ತಿದ್ದರೆ ಆದರೆ ನಮ್ಮ ನಾಡಿನ ಪರಿಸ್ಥಿತಿಯನ್ನು ನಾವು ಕಾವೇರಿ ಪ್ರಾಧಿಕಾರಕ್ಕೆ ಅರ್ಥ ಮಾಡಿಸಬೇಕು ಹಾಗೂ ಈ ವಿಚಾರ ಸಂಬಂಧ ಸರಿಯಾಗಿ ವಾದ ಮಾಡಿಲ್ಲ ಅನ್ನೋದಕ್ಕಿಂತ ಕಳೆದ ವರ್ಷ ಮೂರು ಬಾರಿ ನಮ್ಮ ಜಲಾಶಯ ತುಂಬಿದ್ದವು ಆ ಸಂದರ್ಭದಲ್ಲಿ ಕೆಲಸವನ್ನು ನಾವು ಮುಂಜಾಗ್ರತೆಯಿಂದ ಮಾಡಬೇಕಿತ್ತು ಎಂದು ಇದೇ ವೇಳೆ ತಿಳಿಸಿದರು.
