ಹಾಸನದ ಹರದನಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ನಾಳೆ ತಮ್ಮ ತಾಯಿ ದಿ.ಚೆನ್ನಮ್ಮ ಅವರ 11 ನೆ ದಿನದ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಂಡರು. ನಮ್ಮ ತಾಯಿಯ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.ನೂರಾರು ಕಾರ್ಮಿಕರ ಶ್ರಮದಲ್ಲಿ ಕಾರ್ಯ ರೂಪುಗೊಂಡಿದೆ. ಹಾಗೂ ನಿರೀಕ್ಷೆಗೂ ಮೀರಿ ಜನ ಆಗಮಿಸುವ ಸಾಧ್ಯತೆಯಿದೆ ಎಂದರು.
ನಾಳೆ ಬೆಳಿಗ್ಗೆ 10 ಗಂಟೆಯಿಂದ ಪೂಜೆಯ ವಿಧಿ ವಿಧಾನಗಳೆಲ್ಲ ಪ್ರಾರಂಭವಾಗಲಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಬರುವಂತ ಎಲ್ಲ ಅಭಿಮಾನಿಗಳಿಗೂ ಪ್ರಸಾದದ ವ್ಯವಸ್ಥೆ ಇರಲಿದೆ ಎಂದರು.ನಮ್ಮ ತಂದೆ ತಾಯಿಗಳಿಸಿರುವ ಪ್ರೀತಿಯಿಂದಾಗಿ ಜನರು ಬರುತ್ತಾರೆ ಎಂಬ ನಿರೀಕ್ಷೆ ಎಂದರು.
ಯಾವದೇ ಸಮಸ್ಯೆಗಳು ಆಗದ ನಿಟ್ಟಿನಲ್ಲಿ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಿದ್ದೇವೆ ಹಾಗೂ ಪ್ರಸಾದ ತಯಾರು ಮಾಡಲು ಐದಾರು ತಂಡಗಳ ನಿಯೋಜನೆ ಮಾಡಿದ್ದೇವೆ ಎಂದರು ಹನ್ನೊಂದನೇ ದಿನದ ಕಾರ್ಯಕ್ಕೆ ಎಲ್ಲರೂ ಕೂಡ ಆಗಮಿಸಿ ಎಂದರು.
ತಮ್ಮ ತಾಯಿಯವರು ಜೀವಂತವಿದ್ದ ವೇಳೆ ಅವರು ನಡೆದುಕೊಂಡ ನಡವಳಿಕೆಗಳನ್ನು ನೆನಪಿಸಿಕೊಂಡು ಅವರ ಅಭಿಮಾನಿಗಳು ಆಗಮಿಸುತ್ತಾರೆ. ಅವರಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಕೊನೆಯದಾಗಿ ಹಲವು ಜನ ನಮ್ಮ ಪಕ್ಷದ ಮುಖಂಡರು, ಶಾಸಕರುಗಳು,ಮಾಜಿ ಮಂತ್ರಿಗಳು ಸರ್ಕಾರದ ಮಂತ್ರಿಗಳು ಎಲ್ಲರೂ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಎಚ್ಡಿಕೆ ಹೇಳಿದರು.
