ಶಿವಮೊಗ್ಗ | ಯುವತಿಗೆ 67 ಲಕ್ಷ ರೂ. ಸೈಬರ್ ವಂಚನೆ

ಶಿವಮೊಗ್ಗ

ಶಿವಮೊಗ್ಗ, ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ, ಶಿವಮೊಗ್ಗದ ಯುವತಿಯೊಬ್ಬರಿಗೆ ವಂಚನೆ ಮಾಡಲಾಗಿದೆ.

ಆನ್‌ಲೈನ್ ಹೂಡಿಕೆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ ನಗರದ 22 ವರ್ಷದ ಯುವತಿ 67 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಮೊದಲು ಯುವತಿಗೆ ಪ್ಯೂನಿನ್ ಎಕ್ಸ್‌ಚೆಂಜ್ ಕಂಪನಿ ಹೆಸರಿನಲ್ಲಿ ಸಂದೇಶ ಒಂದು ಬಂದಿತ್ತು. ಅದರಲ್ಲಿ ಯುವತಿ ಹೆಸರಿನಲ್ಲಿ ಖಾತೆ ತೆರೆದು ಐಡಿ ರಚಿಸಿ, ಲಾಭದ ಭರವಸೆ ನೀಡಲಾಗಿತ್ತು.

ಇದನ್ನು ನಂಬಿದ ಯುವತಿ ಜೂನ್ 9 ರಿಂದ ನವೆಂಬರ್ 26ರ ನಡುವೆ ಒಟ್ಟು 559 ಹಂತಗಳಲ್ಲಿ 67,78,100 ರೂ. ಗಳನ್ನು ಕಂಪನಿಗೆ ವರ್ಗಾವಣೆ ಮಾಡಿದ್ದರು.

ಹೂಡಿಕೆ ಮಾಡಿದ ಹಣ ವಾಪಸ್ ಬರದಿದ್ದಾಗ ಯುವತಿಗೆ ಅನುಮಾನ ಬಂದಿದೆ. ಆಕೆಯ ಐಡಿಯಲ್ಲಿ ಡೆಪಾಸಿಟ್ ಹಾಗೂ ವಿತ್ ಡ್ರಾ ಆಯ್ಕೆಗಳು ಸಹ ಬ್ಲಾಕ್ ಆಗಿದ್ದವು.

ಈ ಬಗ್ಗೆ ಯುವತಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Author