ಶಿವಮೊಗ್ಗ ,ಬ್ರಾಹ್ಮಣ ಸಮಾಜ ಆರ್ಥಿಕವಾಗಿ ಇನ್ನಷ್ಟು ಸದೃಢವಾಗಬೇಕಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ೧೦೦ ಕೋಟಿ ರೂ. ಆಪತ್ ನಿಧಿ ಸಂಗ್ರಹಿಸುವ ಗುರಿಯನ್ನು ಅಖಿಲಕ ರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ಹೊಂದಿದೆ ಎಂದು ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಭಾನುವಾರ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಘಟಕದಿಂದ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ, ಸುವರ್ಣ ದಾಂಪತ್ಯ ಸನ್ಮಾನ,ಸಂಘದ ನಿರ್ದೇಶಕರಿಗೆ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಬ್ರಾಹ್ಮಣ ಸಮಾಜದಲ್ಲಿ ಬಡವರು ಮತ್ತು ಸ್ಥಿತಿವಂತರೂ ಇದ್ದಾರೆ.
ಆ ಸ್ಥಿತಿವಂತರನ್ನುಸಂಪರ್ಕಿಸಿ ತಲಾ ಒಂದು ಲಕ್ಷ ರೂ. ದೇಣಿಗೆ ಪಡೆಯಲಾಗುತ್ತದೆ. ಈಗಾಗಲೇ ೮೫ ಲಕ್ಷ ರೂ.ಸಂಗ್ರಹವಾಗಿದ್ದು, ದ್ದೇಶದಿತ ನಿಧಿ ಸಂಗ್ರಹವಾಗುವವರೆಗೆ ಭಿಕ್ಷೆ ಬೇಡಲುಸಿದ್ಧನಿದ್ದೇನೆ. ಸಮಾಜದ ಮ್ಕಕಳ ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆದನ್ನು ಬಳಸಲಾಗುತ್ತದೆ ಎಂದರು.ಬ್ರಾಹ್ಮಣ ಮಹಾಸಭಾ ೩೩ ಜಿಲ್ಲೆಯನ್ನಾಗಿ ಮಾಡಿಕೊಂಡಿದ್ದು, ಒಂದೊಂದು ಜಿಲ್ಲೆಯಲ್ಲಿತಲಾ ೬ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಲಾ ೧೦ಸಾವಿರ ರೂ. ಸ್ಕಾಲರ್‌ಶಿಪ್ ನೀಡಲು ನಿರ್ಧರಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದ ೧೯೮ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ನಿರ್ಧರಿಸಲಾಗಿತ್ತು. ಆದರೆ ಈಬಾರಿ ೧೫೭ ಮಾತ್ರ ಅರ್ಜಿಗಳು ಬಂದಿವೆ ಎಂದರು.

ಆರೇಳು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಅರ್ಜಿಯನ್ನೇ ಹಾಕಿಲ್ಲ. ಇದೇ ವೇಳೆ ನಿವೃತ್ತನ್ಯಾಯಾಧೀಶ ಎನ್.ಕುಮಾರ ಹೆಸರಿನಲ್ಲಿ ೧ ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೂ ತಲಾ ೧ಸಾವಿರ ರೂ. ನೀಡಲಾಗುವುದು. ಒಟ್ಟಾರೆ ಜು.೩೧ರೊಳಗೆ ೨೨೬ ವಿದ್ಯಾರ್ಥಿಗಳಿಗೆಸ್ಕಾಲರ್‌ಶಿಪ್ ನೀಡಲಾಗುವುದು ಎಂದರು.ಪ್ರಾಸ್ತಾವಿಕ ಮಾತನಾಡಿದ ವಿಪ್ರ ನೌಕರರ ಕ್ಷೇಮಾಭಿವೃದ್ಧ ಸಂಘ ಜಿಲ್ಲಾಧ್ಯಕ್ಷಎಚ್.ಕೆ.ಕೇಶವಮೂರ್ತಿ, ೨೦೦೪ರಲ್ಲಿ ಪೇಜಾವರ ಶ್ರೀಗಳ ಆಶೀರ್ವಾದದಿಂದ ಆರಂಭಗೊಂಡ ಸಂಘವು೨೨ನೇ ವರ್ಷಕ್ಕೆ ಕಾಲಿಟ್ಟಿದೆ ಎಂದರು.
ಇದುವರೆಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕ ಪಡೆದ೧,೮೦೦ ವಿಪ್ರ ವಿದ್ಯಾರ್ಥಿಗಳಿಗೆ ಪತ್ರಿಭಾ ಪುರಸ್ಕಾರ, ಆರ್ಥಿಕ ಸಹಾಯದ ಅಗತ್ಯವಿರುವ೧,೩೦೦ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ, ೫೦ ವರ್ಷ ದಾಂಪತ್ಯ ಜೀವನ ನಡೆಸಿದನೂರಕ್ಕೂ ಹೆಚ್ಚು ದಂಪತಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಗಿದೆ. ಇದುವರೆಗೆ ೧.೧೦ ಕೋಟಿರೂ. ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾನಿಧಿ ವಿತರಣೆ ಮಾಡಲಾಗಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಸಂಘದ ಜಿಲ್ಲಾ ಗೌರವಾಧ್ಯಕ್ಷ ಆರ್.ಅಚ್ಚುತ್‌ರಾವ್,ಉಪಾಧ್ಯಕ್ಷ ಎಚ್.ಎನ್.ಛಾಯಾಪತಿ, ಕಾರ್ಯದರ್ಶಿ ಬಿ.ಕೆ.ರವೀಂದ್ರನಾಥ್, ಸಂಘಟನಾಕಾರ್ಯದರ್ಶಿಗಳಾದ ಎಚ್.ಸಿ.ರವಿಕುಮಾರ್, ಕೆ.ಎನ್.ವಿಶ್ವನಾಥ್, ಕೆ.ಕೆ.ಶಶಿರೇಖಾ,ಲಕ್ಷ್ಮೀ ಶ್ರೀಧರ್, ಎಸ್.ನಾಗೇಶ್ ಇದ್ದರು.
