ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ದೂಗೂರು ಬಳಿಯ ಕಾಡಿಗೆ ಬರಗಿಯಿಂದ ಬಂದಿರುವ ಕಾಡಾನೆಗಳು ಕಾಡಾಂಚಿನ ರೈತರ ಜಮೀನುಗಳಿಗೆ ರಾತ್ರಿ ನುಗ್ಗಿ, ಬೆಳಗಾಗುವ ವೇಳೆಗೆ ಬೆಳೆ ನಾಶ ಮಾಡಿ, ಮರಳಿ ಕಾಡಿಗೆ ಬೆಳಗ್ಗೆ ಜೋಡಿ ಕಾಡಾನೆ ಸೇರಿಕೊಳ್ಳುತ್ತಿವೆ.
ಇಂದು ಇಡೀ ದಿನ ಕುಮ್ಕಿ ಆನೆಗಳನ್ನು ಬಳಸಿ ದೂಗೂರು ಕಾಡಿನಲ್ಲಿ ಓಡಿಸೋ ಕಾರ್ಯಾಚರಣೆ ಮಾಡಿದರೂ, ಕಣ್ಣಂಚಿಗೆ ಮಾತ್ರ ಕಾಡಾನೆಗಳ ಸುಳಿವೇ ಸಿಗಲಿಲ್ಲ.ಇನ್ನೂ ಥರ್ಮಲ್ ಡ್ರೋನ್ ಬಳಸಿ ದೂಗೂರಿನ ದಟ್ಟ ಕಾನನವನ್ನು ಸ್ಕ್ಯಾನ್ ಮಾಡಿ, ಕಾಡಾನೆಗಳನ್ನು ಪತ್ತೆ ಹಚ್ಚೋಕೆ ಮಾಡಿರುವ ಮತ್ತೊಂದು ಪ್ರಯತ್ನದದಿಂದ ಆನೆ ಕಾರ್ಯಪಡೆ, ಡಿ ಆರ್ ಎಫ್ ಓ, ಗಸ್ತು ಅರಣ್ಯ ಪಾಲಕರು ಕಾಡನ್ನು ಜಾಲಾಡಿದರೂ ಕಾಡಾನೆ ಸಾಗಿರುವ ಗುರುತು ಪತ್ತೆಯಾಯಿತೇ ವಿನಹಃ ಕಣ್ಣಿಗೆ ಮಾತ್ರ ಕಾಣಲೇ ಇಲ್ಲ.
ಈ ಹಿನ್ನೆಲೆಯಲ್ಲಿ ಇಂದಿನ ಕಾಡಾನೆ ಓಡಿಸೋ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. ಮರಳಿ ಕುಮ್ಕಿ ಆನೆಗಳು ಬೇಸ್ ಕ್ಯಾಂಪ್ ಗೆ ಕೊಂಡೊಯ್ದು ಬೀಡು ಬಿಡಲಾಗಿದೆ.



