ಬಿಜೆಪಿಗೆ ಗುನ್ನ ಇಟ್ಟರ ಈಶ್ವರಪ್ಪ..?!

ರಾಜಕೀಯ

ಶಿವಮೊಗ್ಗದಲ್ಲಿ ಮೊನ್ನೆ ದಿವಸ ಪತ್ರಿಕಾಗೋಷ್ಠಿ ಉದ್ದೇಶಿಸಿ ವಿಧಾನ ಪರಿಷತ್ ಅಡ್ಡ ಮತದಾನ ಸಂಬಂಧ ಕೆ. ಎಸ್. ಈಶ್ವರಪ್ಪ ಹೇಳಿದ ಆ ಒಂದು ಹೇಳಿಕೆ ರಾಜ್ಯ ರಾಜಕೀಯ ಹಾಗೂ ಬಿಜೆಪಿ ಪಾಳಯದಲ್ಲಿ ಈಗ ಭಾರಿ ಚರ್ಚೆಗೀಡಾಗಿದೆ.

ಅದೇನಂದರೆ ಈ ಹಿಂದೆ 17 ಜನ ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾಗಿ ದುಡ್ಡು ತೆಗೆದುಕೊಂಡು ಚುನಾವಣೆಯಲ್ಲಿ ಗೆದ್ದರು ಹಾಗಾಗಿ ಬಿಜೆಪಿ ಹಾಳಾಗಿ ಹೋಯಿತು ಎಂಬ ಈ ಸ್ಟೇಟ್ಮೆಂಟ್ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ.

ಈಶ್ವರಪ್ಪ ಅವರ ಈ ಒಂದು ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿರುವುದು ಸತ್ಯ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಅಡ್ಡ ಮತದಾನ ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷ ಅಂತೆಲ್ಲ ಮುಂದಕ್ಕೆ ಹೇಳಿದರು ಆದರೆ ಈಗ ರಾಜಕೀಯ, ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆ ಅಂದು ಇದೆ ಈಶ್ವರಪ್ಪ ಕೂಡ ಬಿಜೆಪಿಯಲ್ಲಿ ಇದ್ದರು ಹಾಗಿದ್ದರು ಸಹ ಅಂದು ಯಾಕೆ ಈ ಬಗ್ಗೆ ಮಾಹಿತಿ ಬಹಿರಂಗಪಡಿಸಲಿಲ್ಲ ಎಂಬುದು ಪ್ರಸ್ತುತ ಪ್ರಶ್ನೆ? ಜನಸಾಮಾನ್ಯರಲ್ಲಿ ಕೇಳಿಬರುತ್ತಿದೆ.

ಬಿ.ಸಿ ಪಾಟೀಲ್ ವಾರ್ನಿಂಗ್ :

ಇನ್ನು ಈ ಸಂಬಂಧ ಈಶ್ವರಪ್ಪಗೆ ವಾರ್ನಿಂಗ್ ಕೊಟ್ಟ ಮಾಜಿ ಸಚಿವ ಬಿ.ಸಿ ಪಾಟೀಲ್ ನಮ್ಮ ಶ್ರಮದಿಂದ ನೀವು ಮಂತ್ರಿಯಾಗಿ ಲಂಚವನ್ನು ಪಡೆದು ಬೆಳಗಾವಿನಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಕಾರಣರಾದಿರಿ ಈಗ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಿ. ನಮ್ಮಿಂದ ಬಿಜೆಪಿ ಹಾಳಾಗಲಿಲ್ಲ ನಿಮ್ಮಂತವರಿಂದ ಬಿಜೆಪಿ ಹಾಳಾಗಿದೆ.

ನಾವು ಬರದೆ ಹೋಗಿದ್ದರೆ ನೀವು ಮಂತ್ರಿಯಾಗುತ್ತಿರಲಿಲ್ಲ ಮಂತ್ರಿಯಾಗಿ ಎಲ್ಲ ಸೌಲಭ್ಯಗಳನ್ನು ಪಡೆದು ಈಗ ನಮ್ಮಗಳ ಮೇಲೆ ಗೂಬೆ ಕೂರಿಸುತ್ತಿದ್ದೀರಿ ಯಾವಾಗ ಎಷ್ಟು ಹಣ ಕೊಟ್ರು ಅದನ್ನ ಪೂವ್ ಮಾಡಬೇಕು ಇಲ್ಲದೆ ಹೋದ್ರೆ ರಾಜಕೀಯದಿಂದ ನಿವೃತ್ತಿ ಘೋಷಿಸಿ ಎಂದು ತಿಳಿಸಿದ್ದಾರೆ.

ಇದೆಲ್ಲ ವಿಚಾರ ಹಿಂದೆ ಈಶ್ವರಪ್ಪ ಯಾರ ಮೇಲೆ ಸೇಡು ತೀರಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿರಬಹುದು? ಎಂಬುದು ರಾಜಕೀಯ ವಲಯದ ವಿಚಾರವಾದರೆ ಮತ್ತೊಂದು ಕಡೆ ಬಿಜೆಪಿ ಸೇರ್ಪಡೆ ಬಗ್ಗೆ ಈಶ್ವರಪ್ಪ ಮಾತನಾಡುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿಗೆ ಗುನ್ನ ಇಡುತ್ತಿದ್ದಾರ? ಎಂಬಂತೆ ಅವರ ಹೇಳಿಕೆಗಳಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ.

ಈ ರೀತಿ ಹೇಳಿಕೆ ನೀಡುವ ಮೂಲಕ ಈಶ್ವರಪ್ಪ ಅವರು ಇನ್ನು ಸಹ ಯಡ್ಯೂರಪ್ಪನವರು ಹಾಗೂ ಅವರ ಮಕ್ಕಳ ಮೇಲೆ ಕೆಂಡಕಾರುತ್ತಿದ್ದಾರೆ ಎಂಬುದು ರಾಜಕೀಯವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ..! ಇನ್ನು ಅಂದು ಬಿಜೆಪಿಯಲ್ಲಿ ಇದ್ದಾಗ ಈಶ್ವರಪ್ಪನವರು ಯಡ್ಯೂರಪ್ಪನವರ ಮೇಲೆ ರಾಜಭಾವನಕ್ಕೆ ತೆರಳಿ ದೂರು ಸಹ ನೀಡಿದ್ದರು.

ಇನ್ನು ಸಂತೋಷ್ ಪಾಟೀಲ್ ಪ್ರಕರಣ,ಗುತ್ತಿಗೆದಾರ 40%, ಪೆಸಿಎಂ, ಕಾಂಗ್ರೆಸ್ ಬ್ಯಾನರ್ ಪ್ರತಿಭಟನೆ ನಂತರ ಬಿಜೆಪಿ ಹೈ ಕಮಾಂಡ್ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುವವರೆಗೂ, ಇದೆಲ್ಲದರ ಪರಿಣಾಮ ಬಿಜೆಪಿ ಎಂದರೆ ಭ್ರಷ್ಟರ ಕೂಟ ಎಂಬಂತೆ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಈಶ್ವರಪ್ಪ ಬಿಸಿ ತುಪ್ಪ ಆಗಿದ್ದು ಅಲ್ಲದೆ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿತು. ಈಶ್ವರಪ್ಪ ಪ್ರಸ್ತುತ ಎಲ್ಲವನ್ನು ಮರೆತುಹೋಗಿದ್ದಾರೆ.

ಇನ್ನು ಈಶ್ವರಪ್ಪ ಹಾಗೂ ಬಿ. ಸಿ. ಪಾಟೀಲ್ ಹೇಳಿಕೆ ಸಂಬಂಧ ಲೋಕಾಯುಕ್ತ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಬೇಕಾಗಿದೆ. ಯಾವುದು ಸತ್ಯ ಅನ್ನುವುದು ಸಾರ್ವಜನಿಕರ ಮುಂದೆ ದಾಖಲೆ ಸಹಿತ ಬಹಿರಂಗವಾಗಬೇಕಿದೆ. ಇನ್ನು ಕಾಂಗ್ರೆಸ್ ಪಕ್ಷ ಈಶ್ವರಪ್ಪ ವಿರುದ್ಧ ಗುತ್ತಿಗೆದಾರರ ಕೇಸ್ ಮತ್ತೊಮ್ಮೆ ತನಿಖೆಗೆ ಅಗ್ರಹಿಸಿದಲ್ಲಿ ಇದರಿಂದ ಬಿಜೆಪಿ ಹಾಗೂ ಈಶ್ವರಪ್ಪ ಇಬ್ಬರಿಗೂ ತಲೆನೋವಾಗಲಿದೆ.

ಹಾಗೂ ಬಿ.ಸಿ. ಪಾಟೀಲ್ ಹಾಗೂ ಉಳಿದ 16 ಜನ ಈಶ್ವರಪ್ಪ ಹೇಳಿಕೆ ಬಗ್ಗೆ ಉತ್ತರ ನೀಡಬೇಕಾಗಿದೆ. ಹಾಗೂ ಉಳಿದ 16 ಶಾಸಕರು ಈಶ್ವರಪ್ಪ ಹೇಳಿಕೆ ವಿರುದ್ಧ ತಿರುಗಿ ಬೀಳುತ್ತಾರ? ಏನಾಗಬಹುದು ಮುಂದಿನ ತಿರುವು ಅನ್ನುವುದು ಸದ್ಯದ ರಾಜಕೀಯ ವಲಯದಲ್ಲಿ ಪ್ರಶ್ನೆಯಾಗಿ ಉಳಿದಿದೆ?!

ಇನ್ನು ಈಶ್ವರಪ್ಪ ಈ ರೀತಿ ಹೇಳಿಕೆ ಕೊಟ್ಟಿರುವುದರ ಹಿಂದೆ ಬಿಜೆಪಿಗೆ ಗುನ್ನ ಇಟ್ಟು ಕಾಂಗ್ರೆಸ್ ಸೇರ್ಪಡೆಯಾಗುತ್ತಾರ? ಅನ್ನುವುದು ರಾಜಕೀಯ ವಲಯದಲ್ಲಿ ಅನುಮಾನಕ್ಕೀಡಾಗಿದೆ..!?

ಇನ್ನು ಮಾಜಿ ಗೃಹ ಸಚಿವರು ಹಾಗೂ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈಶ್ವರಪ್ಪ ಅವರೇ ಅವರು ನೀಡಿರುವ ಹೇಳಿಕೆ ಸಂಬಂಧ ಮಾಹಿತಿ ತಿಳಿಸಬೇಕು ಹಾಗೂ ಈಶ್ವರಪ್ಪ ಒಂದು ಕಡೆ ಬಿಜೆಪಿ ಬರುತ್ತೇನೆ ಅನ್ನುತ್ತಾರೆ ಹಾಗೂ ಈ ರೀತಿ ಹೇಳಿಕೆ ನೀಡುವುದು ಸರಿ ಅಲ್ಲ ಎಂದಿದ್ದಾರೆ.

ಇನ್ನು ವಿಧಾನ ಪರಿಷತ್ ಅಡ್ಡ ಮತದಾನ ಸಂದರ್ಭದಲ್ಲಿ ಮಾಧ್ಯಮಗಳು ಬಿಜೆಪಿಯ ಉಚ್ಚಾಟಿತ ಶಾಸಕರಾದ ಎಸ್. ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅಡ್ಡ ಮತದಾನ ಮಾಡುವ ನಿರೀಕ್ಷೆ ಅವರುಗಳ ಹಿಂದೆ ಬಿದ್ದಿದ್ದರು ಆದರೆ ಆಗಿದ್ದೆ ಬೇರೆ ಬಿಜೆಪಿ ಜೆಡಿಎಸ್ ಶಾಸಕರ ಅಡ್ಡ ಮತದಾನ ಮಾಹಿತಿಯಾಯಿತು ಹಾಗೂ ಇಷ್ಟೆಲ್ಲಾ ಸಂಬಂಧ ಮಾನ್ಯ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಾತ್ರ ಯಾವ ತಂತ್ರಗಾರಿಕೆ ಮತ್ತೊಂದು ಎಲ್ಲೂ ತೋರಿಸಿಕೊಳ್ಳಲಿಲ್ಲ. ಹಾಗಾಗಿ ರಾಜಕೀಯ ವಲಯದಲ್ಲಿ ಮೀನಿನ ಹೆಜ್ಜೆ ತಿಳಿಯಬಹುದು ಆದರೆ ರಾಜಕಾರಣಿಗಳ ಅಂತರ್ಯ ತಿಳಿದುಕೊಳ್ಳುವುದು ಕಷ್ಟ ಸಾಧ್ಯ..!

ಮಾನ್ಯ ಈಶ್ವರಪ್ಪ ಅವರಿಗೆ ವಾಸ್ತವದ ಎಲ್ಲಾ ಪರಿಸ್ಥಿತಿ ಅರಿವು ಇದೆ ಹಾಗೆಯೇ ಬಿಜೆಪಿ ಘರ್ ವಾಪಸಿ ಆಗಲು ಕಷ್ಟ ಸಾಧ್ಯ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಯುತ್ತನು ಇಲ್ಲ. ದಿನೇ ದಿನೇ ಈಶ್ವರಪ್ಪ ಅವರ ಆಕ್ರೋಶದ ಕಟ್ಟೆ ಒಡೆದು ಹೋಗುತ್ತಿದೆ. ಯಾವದು ಅವರು ಅಂದುಕೊಂಡಂತೆ ಆಗುತ್ತಿಲ್ಲ ಇದೆಲ್ಲದರ ಪರಿಣಾಮ ಈಶ್ವರಪ್ಪ ಸಹ ಬಿಜೆಪಿಗೆ ಗುನ್ನ ಹೊಡೆಯುತ್ತಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಹಾಗೂ ವಿಚಾರವಂತರ ವಿಚಾರವಾಗಿ ಕೇಳಿಬರುತ್ತಿದೆ.

Author