ಶಿವಮೊಗ್ಗ | ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಬಿಜೆಪಿಗೆ ಘರ್ ವಾಪಸಿಯಾದರೆ ಬಿಜೆಪಿಗೆ ನಷ್ಟ..!?

ವಿಶೇಷ ಲೇಖನ

ಶಿವಮೊಗ್ಗ ಬಿಜೆಪಿಗೆ ಘರ್ ವಾಪಸ್ಸಿ ಆಗುವ ಕಾತುರದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಆದರೆ ಇದು ಅಂದುಕೊಂಡಂತೆ ಲೆಕ್ಕಾಚಾರ ಸುಲಭವಾಗಿದಿಯೆ?

ಈ ಸಂಬಂಧ ವಿಶೇಷ ವಿಮರ್ಶೆ ನಿಮ್ಮ ಮುಂದೆ :

ರಾಜ್ಯ ರಾಜಕೀಯ ವಲಯದಲ್ಲಿ ಪ್ರಭಲ ಲಿಂಗಾಯತ ಸಮುದಾಯದ ನಾಯಕರಾಗಿ ಯಡ್ಯೂರಪ್ಪನವರು ಹೊರಹೊಮ್ಮಿದ್ದಾರೆ ಇದ್ದಾರೆ ಇನ್ನು ಒಕ್ಕಲಿಗ ಸಮುದಾಯದ ನಾಯಕರಾಗಿ ದೇವೇಗೌಡರು ಇದ್ದಾರೆ ಇನ್ನು ಕಾಂಗ್ರೆಸ್ ನಿಂದ ಡಿ.ಕೆ.ಶಿವಕುಮಾರ್ ಕೂಡ ಒಕ್ಕಲಿಗ ಸಮುದಾಯದ ನಾಯಕರಾಗಿ ಹೊರಹೊಮ್ಮಿದ್ದಾರೆ ಮತ್ತು ಕುರುಬ ಸಮುದಾಯದ ಹಾಗೂ ಅಹಿಂದ ನಾಯಕರಾಗಿ ಸಿದ್ದರಾಮಯ್ಯ ಅವರು ಹೊರಹೊಮ್ಮಿದ್ದಾರೆ.

ಈ ಎಲ್ಲಾದರ ನಡುವೆ ಮಾನ್ಯ ಕೆ. ಎಸ್. ಈಶ್ವರಪ್ಪ ನವರು ತಾವೊಬ್ಬ ಕುರುಬ ಸಮುದಾಯದ ನಾಯಕರು ಆಗಲಿ ಅಥವಾ ಹಿಂದುಳಿದ ವರ್ಗದ ಅಥವಾ ಅಹಿಂದ ನಾಯಕರಾಗಿ ತಮ್ಮ ಐಡೆಂಟಿಟಿ ಪಡೆಯಲು ವಿಫಲರಾಗಿದ್ದಾರೆ ಎಂಬುದು ರಾಜಕೀಯವಲಯದ ಮಾತಾಗಿದೆ.

ಇನ್ನು ಜನಾಕರ್ಷಣೆ ಪಡೆದಿದ್ದಾರಾ ಈಶ್ವರಪ್ಪ ಅಂದರೆ ಅದು ದೂರದ ಮಾತಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಠೇವಣಿ ಕೂಡ ಕಳೆದುಕೊಂಡರು ಈ ಒಂದು ಪರಿಸ್ಥಿತಿ ಈಶ್ವರಪ್ಪ ಅವರದ್ದಾಗಿದೆ.

ಇನ್ನು ರಾಷ್ಟ್ರಭಕ್ತರ ಬಳಗ ಕಟ್ಟಿಕೊಂಡು ದಿನ ನಿತ್ಯ ಪ್ರಚಾರ ಮಾಡಿಕೊಂಡು ಹೊಸದಾಗಿ ಜನ ಆಕರ್ಷಣೆ ಮಾಡಿ ತಲುಪುವುದು ಕಷ್ಟ ಸಾಧ್ಯ ಎಂಬ ಅರಿವು ಈಶ್ವರಪ್ಪನವರಿಗೆ ಆಗಿದೆ.

ಸದ್ಯದ ಈಶ್ವರಪ್ಪ ಅವರ ಲೆಕ್ಕಾಚಾರ ಪ್ರಕಾರ ಬಿಜೆಪಿಯ ವಿ. ಸೋಮಣ್ಣ ಅಥವಾ ಪ್ರಹ್ಲಾದ್ ಜೋಶಿ ಇನ್ನ ಕೆಲವರು ಹೆಸರು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಮುನ್ನಲಗೆ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾಗುವ ಬಗ್ಗೆ ಲೆಕ್ಕಾಚಾರ ಮಾನ್ಯ ಈಶ್ವರಪ್ಪರವರದ್ದು ಆಗಿದೆ.

ಆದರೆ ಈಗ ಈಶ್ವರಪ್ಪನವರಿಗೆ ಬಿಜೆಪಿ ಸೇರಲು ವಾತಾವರಣವಾದರೂ ಸರಿಯಾಗಿ ಇದ್ದೀಯ ಎಂದರು ಅದು ಕೂಡ ಇಲ್ಲ..!

ಇನ್ನು ಈಶ್ವರಪ್ಪನವರಿಗೆ ಬಿಜೆಪಿ ಸೇರಲು ಮುಳುವು ಆಗಬಹುದಾದ ಅಂಶಗಳು :

40% ಕಮಿಷನ್ ಆರೋಪವನ್ನೇ ಕಾಂಗ್ರೆಸ್ ತನ್ನ ದಾಳವಾಗಿ ಮಾಡಿಕೊಂಡು ಅಂದಿನ ಚುನಾವಣೆಯಲ್ಲಿ ಗೆಲ್ಲಲು ದಾರಿ ಮಾಡಿಕೊಂಡಿತ್ತು. ಇನ್ನು ಹರ್ಷ ಕೊಲೆ ಪ್ರಕರಣ ಸಹ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಡ್ಯಾಮೇಜ್ ಮಾಡಿತ್ತು.

ಇದೆಲ್ಲದರ ಪರಿಣಾಮ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ನೆಲಕಚ್ಚಿತ್ತು, ಇದು ಬಿಜೆಪಿ ವರಿಷ್ಟರ ನಿದ್ದೆ ಗೆಡಿಸಿದ್ದಂತು ಸುಳ್ಳಲ್ಲ. ಇಷ್ಟೆಲ್ಲಾ ಪರಿಣಾಮ ಈಶ್ವರಪ್ಪರನ್ನ ಬಿಜೆಪಿ ಮತ್ತೆ ಸೇರಿಸಿಕೊಳ್ಳಲು ಬಿಜೆಪಿ ವರಿಷ್ಟರು ಉತ್ಸುಕವಾಗಿಲ್ಲ ಎಂಬುದು ರಾಜಕೀಯ ವಲಯದ ಅಭಿಪ್ರಾಯವಾಗಿದೆ.

ಇನ್ನು ಇದೆಲ್ಲ ಆದಮೇಲೆ ಸಹ ಶಿವಮೊಗ್ಗ ಜಿಲ್ಲಾ ಮಟ್ಟದಲ್ಲಿ ಆದರೂ ಈಶ್ವರಪ್ಪ ತಮ್ಮ ಪ್ರಭಾವ ಹೆಚ್ಚಿಸಿಕೊಂಡಿಲ್ಲ ಈ ಅಂಶಗಳು ಗಮನಿಸಿದರೆ ಈಶ್ವರಪ್ಪ ಅವರು ಬಿಜೆಪಿಗೆ ಬಂದರೆ ಈಶ್ವರಪ್ಪ ಅವರಿಗೆ ಲಾಭವೇ ಹೊರತು ಇದರಿಂದ ಬಿಜೆಪಿಗೆ ನಯಾಪೈಸ ಲಾಭ ಇಲ್ಲವೆಂಬುದು ಬಿಜೆಪಿಯೊಳಗಿನ ಮಾತು.

ಬಿಜೆಪಿಗೆ ಇನ್ನು ದೊಡ್ಡ ಅಪಾಯವೇನಂದರೆ ಈಶ್ವರಪ್ಪ ಮತ್ತೆ ಬಿಜೆಪಿಗೆ ಬಂದರೆ ಕಾಂಗ್ರೆಸ್ ಗೆ ಮತ್ತೆ ಅಸ್ತ್ರ ಸಿಕ್ಕಂತೆ ಆಗಲಿದೆ. ಮತ್ತೆ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ದೊಡ್ಡ ಡ್ಯಾಮೇಜ್ ಆಗುವುದು ಖಚಿತ.

ಇನ್ನು ಈಶ್ವರಪ್ಪರವರು ತಾವಾಗೆ ತಾವುಗಳು ಹಲವು ತಪ್ಪು ಮಾಡಿಕೊಂಡು ವಾಪಾಸ್ ಬಿಜೆಪಿ ಸೇರ್ಪಡೆಯಾಗಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ. ಹಾಗೂ ಮಗನಿಗೆ ರಾಜಕೀಯ ನೆಲೆ ಕಲ್ಪಿಸಿಕೊಡುವುದು ಅವರ ಕರ್ತವ್ಯವಾಗಿದೆ ಆದರೆ,

ಇಲ್ಲಿ ಪ್ರಸ್ತುತ ಶಿವಮೊಗ್ಗ ನಗರದಲ್ಲಿ ಶಾಸಕರಾದ ಚನ್ನಬಸಪ್ಪ ಅವರು ಜನಾನುರಾಗಿ ಕೆಲಸ ಮಾಡುತ್ತಿರುವುದು ಒಂದುಕಡೆಯಾದರೆ ಮತ್ತೊಂದೆಡೆ ಪ್ರಭಲ ಲಿಂಗಾಯತ ಸಮುದಾಯದವರಗಿದ್ದಾರೆ ಹಾಗಾಗಿ ಅವರು ಮುಂದಿನ ಚುನಾವಣೆಯಲ್ಲಿ ತಮ್ಮ ಕುರ್ಚಿ ಬಿಟ್ಟು ಕೊಡುವುದೆಲ್ಲ ದೂರದ ಮಾತಾಗಿದೆ.

ಇನ್ನು ಬೇರೆ ಬೇರೆ ಪಕ್ಷದಲ್ಲಿ ಅನೇಕ ಘಟಾನೂಘಟಿ, ಪ್ರಭಾವಿ ನಾಯಕರುಗಳು ಇದ್ದಾರೆ. ಇನ್ನು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಸಂಪೂರ್ಣ ಕಾಂಗ್ರೆಸ್ ತರಬೇಕು ಎಂಬ ಪಣತೊಟ್ಟಿದ್ದಾರೆ ಇನ್ನು ಶಿವಮೊಗ್ಗ ನಗರ ಕಾಂಗ್ರೆಸ್ ನಿಂದ ಆಶ್ಚರ್ಯಕರ ಅಭ್ಯರ್ಥಿ ಬಂದರು ಬರಬಹುದು ಇದರಲ್ಲಿ ಯಾವದೇ ವಿಪರ್ಯಾಸ ಅನಿಸುವ ನಿರೀಕ್ಷೆಯಿಲ್ಲ.

ಹೀಗೆಲ್ಲ ಇರುವ ಪರಿಸ್ಥಿತಿಯಲ್ಲಿ ಈಶ್ವರಪ್ಪನವರು ಹೇಗಾದ್ರು ಮಾಡಿ ಬಿಜೆಪಿಗೆ ವಾಪಸ್ಸು ಬಂದರೆ ತಮಗೆ ಅನುಕೂಲವಾಗಲಿದೆ ಎಂದು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ, ಹಾಗೂ ದಿನ ನಿತ್ಯ ನಗರದಲ್ಲಿ ಕಾರ್ಯಕ್ರಮ, ಪತ್ರಿಕಾಗೋಷ್ಠಿ ಮತ್ತೊಂದು ಮಾಡುತ್ತಿದ್ದಾರೆ ಹಾಗೂ ಮೊನ್ನೆ ಮೊನ್ನೆ ಕೂಡ ಬಿಜೆಪಿ ನನ್ನ ಹೃದಯದಲ್ಲಿದೆ ದೇಹ ಮಾತ್ರ ಆಚೆಯಿದೆ ಎಂಬ ಸ್ಟೇಟ್ಮೆಂಟ್ ಕೂಡ ನೀಡಿದ್ದರು.

ಇನ್ನು ಈಶ್ವರಪ್ಪನವರು ಶರಾವತಿ ಪಂಪ್ಡ್ ಸ್ಟೋರೇಜ್ ಬಗ್ಗೆ ಹೋರಾಟ ಹಮ್ಮಿಕೊಂಡಿದ್ದಾರೆ ಆದರೆ ಇದರಲ್ಲಿ ಗಮನಿಸಬೇಕಾದ ಅಂಶಗಳು ಏನಂದರೆ ಎಲ್ಲಾ ರಾಜಕಾರಣಿಗಳು ರಾಜಿಕೀಯ ಪಕ್ಷಗಳು ಈ ವಿಚಾರದಲ್ಲಿ ತಮಗೇನು ವೈಯಕ್ತಿಕ ಲಾಭ ಅಷ್ಟೇ ನೋಡುತ್ತಿದ್ದಾರೆ ಹೊರತು ರೈತರ ಪರವಾಗಿ ಅಥವಾ ಜನಸಾಮಾನ್ಯರ ನ್ಯಾಯದ ಪರವಾಗಿ ಯೋಚನೆ ಮಾಡುತ್ತಿಲ್ಲ ಅನ್ನುವುದು ವಿಚಾರವಂತರ ಮಾತಾಗಿದೆ. ಇನ್ನು ಅಂದು ಬಿಜೆಪಿ ಸರ್ಕಾರವಿದ್ದಾಗ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಸ್ತಾವನೆ ಬಗ್ಗೆ ಯಾರೊಬ್ಬರೂ ಮಾತಾಡಲಿಲ್ಲ ಈಗ ಈ ವಿಚಾರದಲ್ಲಿ ರಾಜಕೀಯ ದಾಳ ಬಳಸಿಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸವಾಗಿ ಕಾಣಿಸುತ್ತಿದೆ ಎಂಬುದು ಹೋರಾಟಗಾರರ ಮಾತಾಗಿದೆ.

ಇನ್ನು 40% ವಿಚಾರವಾಗಿ ಬಿಜೆಪಿಗೆ ದೊಡ್ಡ ಡ್ಯಾಮೇಜ್ ತಂದು ಕೊಟ್ಟ ಈಶ್ವರಪ್ಪರವರು ಬಿಜೆಪಿ ಪಕ್ಷಕ್ಕೆ ಮಗ್ಗಲ ಮುಳ್ಳಾದರು ಎಂಬ ವಿಷಯ ರಾಜಕೀಯ ಪಾಳಯದ್ದಾಗಿದೆ.

ಇನ್ನು ಕೊನೆಯದಾಗಿ ಬಿಜೆಪಿಗೆ ಮರಳಿ ಸೇರುವ ಪ್ರಯತ್ನದಲ್ಲಿರುವ ಈಶ್ವರಪ್ಪನವರಿಗೆ ಸುಲಭವಾಗಿ ದೊರೆಯುವಂತ ಪರಿಸ್ಥಿತಿಯು ಸದ್ಯಕ್ಕಿಲ್ಲ ಹಾಗೂ ಬಿಜೆಪಿಗೆ ಈಶ್ವರಪ್ಪರಿಂದ ಏನು ಲಾಭವಿಲ್ಲ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

Author